ಯುವಜನ/ಮಕ್ಕಳು

ಕಾರಿಡಾರ್ ಕೋಡ್‌ವರ್ಡ್

ಕಾರಿಡಾರ್ ಕೋಡ್‌ವರ್ಡ್
Published On :

ನಮ್ಮಾತು ನಿಮ್ಗೆ ಅರ್ಥಾದ್ರೆ ತಾನೆ!
ನಮ್ಮದೊಂದು ಸಮಾನ ವಯಸ್ಕರು ಹಾಗೂ ಸಾಮಾನ ಮನಸ್ಕರ ಗೆಳೆಯರ ಗುಂಪು. ಜಾಲಿ ಮಾಡ್ಕೊಂಡು, ಕ್ಲಾಸಲ್ಲಿ ಎಲ್ಲರನ್ನೂ ರೇಗಿಸ್ತಾ ಇರೋ ನಾವು ಎಕ್ಸಾಂ ಬಂದಾಗ ಕಾದಂಬರಿ ಓದ್ಕೊಂಡು ಎಕ್ಸಾಂಗೆ ಓದೋದು ನಮ್ಮ ಜಾಯಮಾನನೇ ಅಲ್ಲ ಅನ್ನೋ ಮನಸ್ಥಿತಿಯೋರು. ಆದ್ರೂ ಈ ತರ್ಲೆ ತಲೆಗಳಲ್ಲಿ ಒಂದಿಷ್ಟು ಸೀರಿಯಸ್ ವಿಷಯಗಳು, ಭವಿಷ್ಯದ ಬಗ್ಗೆ ದೊಡ್ಡ ದೊಡ್ಡ ಕನಸುಗಳನ್ನು ಕಟ್ಟಿಕೊಳ್ಳುತ್ತಾ ಸಾಗೋರು.
ಹೀಗೊಂದು ದಿನ ಮಾತನಾಡುತ್ತಾ ಗೆಳೆಯನೊಬ್ಬ 'ಪ್ರತಿಯೊಂದು ವಿಷಯದಲ್ಲೊಂದು ವಿಷಯವಿದೆ' ಎಂದು ಹೇಳಿದಾಗ ತಲೆ ತಲೆ ಚಚ್ಚಿಕೊಂಡಿದ್ದೆವು. ನಂತರ ಆ ಮಾತಲ್ಲೇನೋ ವಿಶೇಷವಿದೆ ಅನಿಸಿತ್ತು. ಕೆಲ ದಿನಗಳ ಬಳಿಕ ಅದು ನಮ್ಮ ಕೋಡ್‌ವರ್ಡೇ ಆಗಿ ಬಿಟ್ಟಿತು. ನಮ್ಮನಮ್ಮೊಳಗೆ ಏನಾದ್ರೂ ನಿಗೂಢ ಸತ್ಯ ಹೇಳುವಾಗ, ನಮ್ಮ ನಡುವೆ ಕೆಲವೊಂದು ಕಮೆಂಟ್‌ಪಾಸ್ ಮಾಡುವಾಗ ಈ ವಾಕ್ಯ ಬಳಸುವುದು ಅಭ್ಯಾಸವಾಯ್ತು...!
ನಮಗೆ ಕೋಡ್‌ವರ್ಡೇ ಬಂಡವಾಳ. ಎಲ್ಲಾನೂ ಕೋಡ್‌ವರ್ಡ್‌ನಲ್ಲೇ ಮಾತಾಡೋದರಿಂದ ನಾವು ಏನ್ ಮಾತಾಡ್ತೀವಿ ಅನ್ನೋದು ಉಳಿದವರಿಗೆ ಅರ್ಥ ಮಾಡಿಕೊಳ್ಳೋದು ಸ್ವಲ್ಪ ಕಷ್ಟ. ಪ್ರತೀ ಮಾತಿನಲ್ಲೂ ಏನಾದ್ರೂ ಹುಡುಕೋ ನಮ್ ಜೊತೆ ಮಾತಾಡೋದೆ ಕಷ್ಟ ಅಂತಾರೆ ಕೆಲ ಕ್ಲಾಸ್‌ಮೇಟ್ಸ್. ನಾವು ಬಳಸೋ ಈ ಕೋಡ್‌ವರ್ಡ್ ಇಂದಿಗೂ ಹಲವರಿಗೆ ನಿಗೂಢ. ಈ ಕುರಿತು ಕ್ಲಾಸಿನ ಉಪನ್ಯಾಸಕರೂ ಅಚ್ಚರಿಯಿಂದ ವಿಚಾರಿಸಿದ್ದಿದೆ. ಇಂದಿಗೂ ಅದನ್ನು ಯಾರಿಗೂ ಹೇಳದೆ ನಮ್ಮಲ್ಲೇ ಉಳಿಸಿಕೊಂಡಿದ್ದೇವೆ.
ಹೀಗೆ ನಮ್ಮಲ್ಲೇ ಒಂದೊಂದು ಕೋಡ್‌ವರ್ಡ್ ಇಟ್ಟು ಮಾತಾಡೋ ನಾವು ಅರ್ಥವಾಗದೆ ನಮ್ಮನ್ನ ಅಚ್ಚರಿಯಿಂದ ನೋಡೋ ಇತರರಿಗೆ ಹೇಳೋದು ಏನಂದ್ರೆ 'ಪ್ರತಿಯೊಂದು ವಿಷಯದಲ್ಲೊಂದು ವಿಷಯವಿದೆ'...! ಅರ್ಥ ಆಯ್ತಾ?
-  ದೀಪ್ತಿ,
ಪ್ರಥಮ ಎಂಸಿಜೆ,
ಎಸ್‌ಡಿಎಂ ಕಾಲೇಜು,
ಉಜಿರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.