ಆರೋಗ್ಯ ರಕ್ಷಣೆ ನಿರ್ವಹಣೆ ಸವಾಲಿಗೆ ಇಲ್ಲಿದೆ ಕೋರ್ಸ್

ಆರೋಗ್ಯ ರಕ್ಷಣೆ ನಿರ್ವಹಣೆಯ ವೃತ್ತಿಪರ ಕೋರ್ಸ್‌ಗಳಿಗೆ ದಿನೇ ದಿನೆ ಬೇಡಿಕೆ ಹೆಚ್ಚಾಗುತ್ತಿದೆ. ವಿಶ್ವದ ಬೇರೆ ಬೇರೆ ಸ್ಥಳಗಳಲ್ಲಿ ಅನುಭವ ಪಡೆದಿರುವ ದೊಡ್ಡ ಪ್ರಮಾಣದ ವೈದ್ಯರು ಭಾರತಕ್ಕೆ ಮರಳಿ ಬರುತ್ತಿದ್ದಾರೆ. ದೇಶದಲ್ಲಿರುವ ಆಸ್ಪತ್ರೆಗಳ ನಿರ್ವಹಣೆಯ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಭಾರತ ಖಾಸಗಿ ಆಸ್ಪತ್ರೆಗಳು, ಸ್ವತಂತ್ರ ಆರೋಗ್ಯರಕ್ಷಣೆ ಸಂಸ್ಥೆಗಳು ಹಾಗೂ ಮಧ್ಯವರ್ಗದ ಔಷಧಾಲಯಗಳ ಸಂಖ್ಯೆಯಲ್ಲಿ ತೀವ್ರ ಏರುಗತಿಗೆ ಸಾಕ್ಷಿಯಾಗುತ್ತಿದೆ. ಇಲ್ಲಿ ಸುಸ್ಥಿರತೆ ಕಾಯ್ದುಕೊಳ್ಳುವುದು ಹಾಗೂ ಅತ್ಯುತ್ತಮ ಸೇವೆ ಒದಗಿಸುವುದು ಸವಾಲು.
ಯಾಕೆಂದರೆ ಈ ಕ್ಷೇತ್ರ ಆಸ್ಪತ್ರೆ ಆಡಳಿತ ಹಾಗೂ ನಿರ್ವಹಣೆಗೆ ಸಂಬಂಧಿಸಿದ ನುರಿತ ಹಾಗೂ ತರಬೇತಿ ಹೊಂದಿರುವ ವೃತ್ತಿಪರರ ತೀವ್ರ ಕೊರತೆ ಎದುರಿಸುತ್ತಿದೆ. ದೇಶದ ಆರೋಗ್ಯರಕ್ಷಣೆ ಕ್ಷೇತ್ರ ಈಗಲೂ ಹಳೆಯ ಪದ್ಧತಿಯಂತೆಯೇ ಕಾರ್ಯನಿರ್ವಹಿಸುತ್ತಿವೆ. ಡಾಕ್ಟರ್ ಟ್ರೀ.ಇನ್‌ನ ಸಿಇಒ ಮತ್ತು ಸ್ಥಾಪಕ ಡಾ. ಶ್ರೀನಿವಾಸನ್ ನಾರಾಯಣ ಪ್ರಕಾರ, ಆರೋಗ್ಯರಕ್ಷಣೆ ಕ್ಷೇತ್ರಕ್ಕೆ ತಜ್ಞರ ಅವಶ್ಯಕತೆ ಇದೆ.
ಕ್ಲಿನಿಕಲ್ ವ್ಯವಸ್ಥೆಯಲ್ಲಿ ಅಪಾರ ಅನುಭವ ಹೊಂದಿರುವಂಥ ಹಿರಿಯ ವೈದ್ಯರನ್ನು ವೈದ್ಯಕೀಯ ಮೇಲ್ವಿಚಾರಕರಂಥ ಆಡಳಿತಾತ್ಮಕ ಹುದ್ದೆಗಳಿಗೆ ವರ್ಗಾಯಿಸಬಾರದು. ಇದರಿಂದಾಗಿ ಕೆಲವೊಮ್ಮೆ ಆಸ್ಪತ್ರೆ ಅತ್ಯುತ್ತಮ ವೈದ್ಯರನ್ನು ಕಳೆದುಕೊಂಡು, ಅಷ್ಟೇನೂ ಉತ್ತಮವಲ್ಲದ ವ್ಯವಸ್ಥಾಪಕರನ್ನು ಹೊಂದಿದಂತಾಗುತ್ತದೆ ಎಂಬುದು ಶ್ರೀನಿವಾಸನ್ ಅಭಿಪ್ರಾಯ. ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸುಸ್ಥಿರತೆ ಕಾಪಾಡಿಕೊಳ್ಳಲು ಅನುಭವ ಮುಖ್ಯ. ಜಾಗತಿಕಮಟ್ಟದಲ್ಲಿ ಕೆಲ ವೈದ್ಯಕೀಯ ವಿವಿಗಳು ಈ ಅಗತ್ಯ ಗುರುತಿಸಿ, ಆರೋಗ್ಯರಕ್ಷಣೆ ಕ್ಷೇತ್ರಕ್ಕೆ ಒಪ್ಪುವಂಥ ಹಾಗೂ ಅಗತ್ಯವಿರುವ ನಿರ್ವಹಣಾ ಕೋರ್ಸ್‌ಗಳನ್ನು ಆರಂಭಿಸಿವೆ. ಸ್ಕೂಲ್ ಆಫ್ ಹೆಲ್ತ್ ಆ್ಯಂಡ್ ಲೈಫ್ ಸೈನ್ಸಸ್‌ನ ಮ್ಯಾನೇಜ್‌ಮೆಂಟ್ ಡೆವೆಲಪ್‌ಮೆಂಟ್ ಇನ್‌ಸ್ಟಿಟ್ಯೂಟ್ ಆಫ್ ಸಿಂಗಾಪುರ(ಎಂಡಿಐಎಸ್) ನಿರ್ದೇಶಕ ಡಾ. ಲಿಸ್ಸಿ ವಾಡಕೆಲ್ ಅವರು, ವೈದ್ಯಕೀಯ ಪದವಿ ಪಡೆದವರಿಗಾಗಿ ನಾರ್ಥ್‌ಕೊಲಂಬಿಯಾ ಯೂನಿವರ್ಸಿಟಿ ನೀಡುವ ಆರೋಗ್ಯರಕ್ಷಣೆ ನಿರ್ವಹಣೆಗೆ ಸಂಬಂಧಿಸಿದ ಒಂದು ವರ್ಷದ ಸ್ನಾತಕೋತ್ತರ ಕೋರ್ಸ್ ಎಂಎಸ್‌ಇ ಇನ್ ಹೆಲ್ತ್ ಸೈನ್ಸಸ್ ಮ್ಯಾನೇಜ್‌ಮೆಂಟ್ ಅನ್ನು ಪರಿಚಯಿಸಿದೆ ಎನ್ನುತ್ತಾರೆ. ಇದು ಆರೋಗ್ಯರಕ್ಷಣೆ ಕ್ಷೇತ್ರಕ್ಕಾಗಿಯೇ ವಿನ್ಯಾಸಗೊಳಿಸಿದ ನಿರ್ವಹಣೆ ಕೋರ್ಸ್. ಇತರೆ ಕ್ಲಿನಿಕಲ್ ಶಿಕ್ಷಣ ಹಾಗೂ ಆರೋಗ್ಯ ರಕ್ಷಣೆ ವೃತ್ತಿಪರರಿಗೆ ಇರಬೇಕಾದ ಕೌಶಲ್ಯ ಈ ಕೋರ್ಸ್‌ನಿಂದ ಸಿಗುತ್ತದೆ. ಈ ಕೋರ್ಸ್ ಪೂರ್ಣಗೊಳಿಸುವ ಅಭ್ಯರ್ಥಿಗಳಿಗೆ ಅಕ್ಯೂಟ್‌ಕೇರ್ ಆಸ್ಪತ್ರೆಗಳು, ಔಷಧಾಲಯಗಳು, ಆಂಬ್ಯುಲೇಟರಿ ಕೇಂದ್ರಗಳು, ಫಿಸಿಷಿಯನ್ ಪ್ರ್ಯಾಕ್ಟೀಸ್ ಫಾರ್ಮಸಿ ಚೇನ್‌ಗಳು, ಔಷಧ ತಯಾರಿಕೆ ಸಂಸ್ಥೆಗಳು, ವೈದ್ಯಕೀಯ ತಂತ್ರಜ್ಞಾನ, ಆರೋಗ್ಯ ವಿಮಾ ಸಂಸ್ಥೆಗಳು, ಆರೋಗ್ಯರಕ್ಷಣೆ ಸಲಹೆಗಾರ ಸಂಸ್ಥೆಗಳು ಹಾಗೂ ಸಂಶೋಧನೆ ಮತ್ತು ತುರ್ತು ಸೇವೆಗಳನ್ನು ಒದಗಿಸುವ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳು ಸಿಗಲಿವೆ.
ಲಾಭರಹಿತ ವೃತ್ತಿಪರ ಕಲಿಕಾ ಕೇಂದ್ರ
1956ರಲ್ಲಿ ಸ್ಥಾಪನೆಯಾದ ಎಂಡಿಐಎಸ್ ಸಿಂಗಾಪುರದ ಅತೀ ಹಳೆಯ, ಲಾಭದ ಉದ್ದೇಶವಿಲ್ಲದ ವೃತ್ತಿಪರ ಕಲಿಕಾ ಕೇಂದ್ರ. ಮಾನ್ಯತೆಯುಳ್ಳ ಕೋರ್ಸ್‌ಗಳು, ನಿರ್ವಹಣಾ ಸೇವೆಗಳು ಹಾಗೂ ವೃತ್ತಿಯಲ್ಲಿ ಅಭಿವೃದ್ಧಿ ಹೊಂದಲು ಬಯಸುವವರಿಗೆ ಆಸ್ಟ್ರೇಲಿಯಾ, ಫ್ರಾನ್ಸ್, ಬ್ರಿಟನ್ ಹಾಗೂ ಅಮೆರಿಕದ ಅತ್ಯುತ್ತಮ ಮಾನ್ಯತೆಯುಳ್ಳ ವಿವಿಗಳ ಸಂಯೋಜನೆಯೊಂದಿಗೆ ಒದಗಿಸಲಾಗುತ್ತದೆ. ಮಾಹಿತಿಗಾಗಿ ಡಿಡಿಠ://ಢಿಢಿಢಿ.ಟಜ್ಝಡ.ಜಜ್ಡ.ಡ್ಜ/ ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


