ಯುವಜನ/ಮಕ್ಕಳು

ಚಿಣ್ಣರ ವರ್ಣದ ಹೂವೇ...

ಚಿಣ್ಣರ ವರ್ಣದ ಹೂವೇ...
Published On :

ಅದು ಮಕ್ಕಳು ಸೃಷ್ಟಿಸಿದ ಚಿತ್ರಲೋಕ. ಜಲವರ್ಣ, ಪೇಸ್ಟಲ್ ಹಾಗೂ ಗ್ವಾಷ್ ಮಾಧ್ಯಮಗಳೆಲ್ಲ ಅಲ್ಲಿವೆ. ವಿಶುಯಲ್ ಆರ್ಟ್ ವರ್ಕ್‌ಶಾಪ್ ಮತ್ತು ಅನನ್ಯ ದೃಶ್ಯ ಸಹಯೋಗದಲ್ಲಿ ಜು.6ರ ಸಂಜೆ 4.30ಕ್ಕೆ ಈ ಸೃಜನಶೀಲ ವರ್ಣಚಿತ್ರಗಳ ಹಾಗೂ ಕಲ್ಪಿತ ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದೆ. ಖ್ಯಾತ ಕಲಾವಿದ ಎಸ್.ಜಿ. ವಾಸುದೇವ್ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಪ್ರೊ. ಎಂ.ಎಚ್. ಕೃಷ್ಟಯ್ಯ ಪಾಲ್ಗೊಳ್ಳುವರು. 6ರಿಂದ 9ರವರೆಗೆ ಬೆಂಗಳೂರಿನ ವೆಂಕಟಪ್ಪ ಚಿತ್ರಶಾಲೆಯಲ್ಲಿ ಪ್ರದರ್ಶನ ನಡೆಯಲಿದೆ.
ಮೇನಲ್ಲಿ ನಡೆದ 15ನೇ ವಾರ್ಷಿಕ ಸೃಜನಶೀಲ ಚಿತ್ರಕಲೆ ಹಾಗೂ ಛಾಯಾಚಿತ್ರ ಕಾರ್ಯಾಗಾರದಲ್ಲಿ 6ರಿಂದ 16 ವರ್ಷದ ಶಿಬಿರಾರ್ಥಿಗಳು ರಚಿಸಿರುವ ಕೃತಿಗಳು ಇವು. ಮಕ್ಕಳ ಈ ಕೃತಿಗಳಲ್ಲಿ ಸ್ವಂತ ಅಭಿವ್ಯಕ್ತಿಗೆ ಅವಕಾಶ ನೀಡಲಾಗಿದೆ. ಶಿಬಿರದ ನಿರ್ದೇಶನವನ್ನು ಕಲಾವಿದ ಆರ್. ರಾಜಾ ನಿರ್ವಹಿಸಿದರು. ಕಲಾವಿದರಾದ ಆರ್. ವೈದೇಹಿ, ಸಿ.ಪಿ. ಚಂದ್ರಮೋಹನ್ ಮತ್ತು ಭರತ್‌ರ ಮಾರ್ಗದರ್ಶನವನ್ನು ಮರೆಯುವಂತಿಲ್ಲ.
ವರ್ಣಚಿತ್ರಗಳಲ್ಲದೆ ಮನೆಯಲ್ಲೇ ಸಿಗುವ ಬೆಂಕಿಕಡ್ಡಿ, ಹೊಗೆಬತ್ತಿ, ರಟ್ಟು, ಬಟ್ಟೆಗಳಂಥ ವಸ್ತುಗಳನ್ನು ಬಳಸಿ ಛಾಯಾಚಿತ್ರದೊಳಗೆ ವಿಶಿಷ್ಟ ಲೋಕಗಳನ್ನೇ ಸೃಷ್ಟಿಸಿದ್ದಾರೆ. ಎಲ್ಲ ಮಕ್ಕಳ ಚಿತ್ರಗಳು, ಛಾಯಾಚಿತ್ರಗಳು ಸೃಜನಶೀಲತೆಯ ಗುಣಮಟ್ಟದಲ್ಲಿ ಕಡಿಮೆ ಇಲ್ಲವೆಂದು ಸಾರುತ್ತವೆ. ಪ್ರದರ್ಶನವು ಬೆಳಗ್ಗೆ 11ರಿಂದ ಸಂಜೆ 7ರ ವರೆಗೆ ಸಾರ್ವಜನಿಕರಿಗಾಗಿ ತೆರೆದಿರುತ್ತದೆ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ, ಮೊ. 9480451524.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.