ಯುವಜನ/ಮಕ್ಕಳು

ಕರಡಿ ಹೇಳಿದ ಗುಟ್ಟು

ಕರಡಿ ಹೇಳಿದ ಗುಟ್ಟು
Published On :

ಇಬ್ಬರು ಪ್ರಯಾಣಿಕರು ದಾರಿಯಲ್ಲಿ ಭೇಟಿಯಾದರು. ಇಬ್ಬರೂ ಒಂದೇ ಊರಿಗೆ ಹೋಗುವವರಾಗಿದ್ದರು. ದೊಡ್ಡ ಕಾಡೊಂದನ್ನು ದಾಟಿ ಮುಂದಕ್ಕೆ ಪ್ರಯಾಣ ಬೆಳೆಸಬೇಕಿತ್ತು. ಮೊದಲನೆಯವನ ಹೆಸರು ಶಾಮ ಅಂತಲೂ ಎರಡನೆಯವನ ಹೆಸರು ರಾಮ ಎಂತಲೂ ಆಗಿತ್ತು.
ಶಾಮ ರಾಮನಿಗೆ ಹೇಳಿದ, 'ಮುಂದೆ ದೊಡ್ಡ ಕಾಡಿದೆ. ತುಂಬಾ ದುಷ್ಟ ಮೃಗಗಳು ಇವೆ. ಇಬ್ಬರೂ ತುಂಬಾ ಎಚ್ಚರದಿಂದಿರಬೇಕು. ಕಷ್ಟ ಬಂದಾಗ ಒಬ್ಬರಿಗೊಬ್ಬರು ಸಹಕರಿಸಬೇಕು.' ರಾಮ ಒಪ್ಪಿದ. ಕಾಡನ್ನು ಇಬ್ಬರೂ ಪ್ರವೇಶಿಸಿದರು. ಅತಿ ಭಯಂಕರವಾಗಿದ್ದ ಪ್ರದೇಶದಲ್ಲಿ ಯಾವ ಕ್ಷಣಕ್ಕೆ ಯಾವ ಮೃಗ ಅಟ್ಟಿಸಿಕೊಂಡು ಬರುತ್ತವೆಯೋ ಎಂಬ ಭಯದಿಂದಲೇ ಹೆಜ್ಜೆ ಹಾಕುತ್ತಿದ್ದರು.
ಬಹಳ ದೂರ ಹೋದ ಮೇಲೆ ನಿರೀಕ್ಷೆಯಂತೆ ದೊಡ್ಡ ಕರಡಿಯೊಂದು ಇವರ ಬಳಿಗೆ ಬರಲಾರಂಭಿಸಿತು. ಇಬ್ಬರಿಗೂ ದಿಕ್ಕೇ ತೋಚಲಿಲ್ಲ. ಆದರೂ ಧೈರ್ಯದಿಂದ ಶಾಮ ಹತ್ತಿರವಿದ್ದ ಮರವನ್ನು ಏರಿ ಕೊಂಬೆಗಳ ಆಶ್ರಯವನ್ನು ಪಡೆದ. ರಾಮನಿಗೋ ಮರ ಹತ್ತಲು ಬಾರದು. ಶಾಮನನ್ನು ಕೂಗಿದರೂ ಅವನು ಮಾತಾಡುತ್ತಿಲ್ಲ. ಪರಿಸ್ಥಿತಿ ಮಿತಿ ಮೀರಿತು. ಕರಡಿ ಇವನ ಸಮೀಪಕ್ಕೆ ಧಡಗುಡುತ್ತಾ ಹೆಜ್ಜೆ ಹಾಕಿತು. ತಕ್ಷಣವೇ ರಾಮನು ಅಂಗಾತನಾಗಿ ಸತ್ತು ಬಿದ್ದಿರುವಂತೆ ಮಲಗಿ ಬಿಟ್ಟ. ಕರಡಿಯು ಇವನ ಬಳಿ ಬಂದು ಕಿವಿ, ಮೂಗು ಎಲ್ಲ ಪರೀಕ್ಷಿಸಿ ಈತ ಸತ್ತಿರಬೇಕೆಂದು ತಿಳಿದು ಹೊರಟು ಹೋಯಿತು.
ಮೇಲಿದ್ದ ಶಾಮ ಕೆಳಕ್ಕೆ ಇಳಿದು ಬಂದು 'ರಾಮಾ, ಕರಡಿ ನಿನ್ನ ಕಿವಿಯಲ್ಲಿ ಏನೇನೋ ಪಿಸುಗುಡುತ್ತಿತ್ತು, ನಾನು ನೋಡುತ್ತಲೇ ಇದ್ದೆ. ಏನು ಹೇಳಿತು' ಎಂದು ಕೇಳಿದ. 'ಆಪತ್ತಿಗಾಗದವನು ಶತಮೂರ್ಖ, ಜೊತೆಯಲ್ಲಿ ಇದ್ದಾಗ ಕಷ್ಟದಲ್ಲಿ ಒಬ್ಬರಿಗೊಬ್ಬರು ಸಹಕರಿಸದಿದ್ದರೆ ಅದು ಎಂಥ ಸ್ನೇಹ ಎಂದು ಹೇಳಿತು' ಅಂದ ರಾಮ. ಆಗ ಶಾಮನಿಗೆ ತಾನು ಮಾಡಿದ್ದು ತಪ್ಪು ಎನಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.