ಯುವಜನ/ಮಕ್ಕಳು

ಸಣ್ ಕತೆಗಳು

ಸಣ್ ಕತೆಗಳು
Published On :

ಬರವಣಿಗೆಯಲ್ಲಿ ಆಸಕ್ತಿಯಿದ್ದ ಆತ ತನ್ನ ಪ್ರೇಮದ ಬಗ್ಗೆ ಭಾವನಾತ್ಮಕ ಬರಹವೊಂದನ್ನು ಬರೆದು ಪತ್ರಿಕೆಗೆ ಕಳುಹಿಸಿದ. ಪ್ರಕಟಗೊಂಡ ಪತ್ರಿಕೆಯ ಪುಟದ ಪ್ರತಿಯನ್ನೂ ಸೇರಿದಂತೆ ಸಿಹಿ ತಿಂಡಿಯ ಪೊಟ್ಟಣವನ್ನು ಜನ್ಮದಿನದ ಉಡುಗೊರೆಯ ರೂಪದಲ್ಲಿ ಸರ್‌ಪ್ರೈಸಾಗಿ ಆಕೆಗೆ ನೀಡಿದ. ಆದರೆ ಅದನ್ನು ಸ್ವೀಕರಿಸಿದ ಆಕೆ ಸಿಹಿತಿಂಡಿಯನ್ನು ಬಾಯಿಚಪ್ಪರಿಸಿ ತಿಂದು ಪತ್ರಿಕೆಯ ಪುಟವನ್ನು ಅಪ್ಪಿತಪ್ಪಿ ಕೂಡ ನೋಡದೆ ಅದೇ ಪೇಪರ್‌ನ್ನು ಹರಿದು ಕೈಒರೆಸಿ ಎಸೆದಳು.
ಆತ ರೇಲ್ವೇ ಸ್ಟೇಷನ್‌ನಲ್ಲಿ ತಡರಾತ್ರಿಯ ರೈಲಿಗಾಗಿ ಕಾಯುತ್ತಾ ಒಬ್ಬನೇ ಕಲ್ಲುಬೆಂಚಿನ ಮೇಲೆ ಕುಳಿತಿದ್ದ. ಆತನ ಪಕ್ಕದಲ್ಲೇ ಸೂಟ್‌ಕೇಸ್ ಇರಿಸಿ ಶೌಚಾಲಯಕ್ಕೆಂದು ಕೊಂಚ ದೂರ ಹೋದ ಸಹಪ್ರಯಾಣಿಕ ಅರೆಗಳಿಗೆಯಲ್ಲಿಯೇ ಹಿಂದಿರುಗಿ, ಆತನೆಡೆಗೆ ಸಂಶಯಭರಿತ ದೃಷ್ಟಿ ಹಾಯಿಸಿ ತನ್ನ ಸೂಟ್‌ಕೇಸ್ ಅನ್ನು ಎತ್ತಿಕೊಂಡು ನಡೆದ !
ಧನಿಕನೋರ್ವನ ಶ್ರಾದ್ಧ ನಡೆಯುತ್ತಿತ್ತು. ಆ ಪ್ರಯುಕ್ತ ಬಗೆ ಬಗೆಯ ಭಕ್ಷಗಳ ಭೋಜನದ ಎಡೆ ಇಟ್ಟು ಸಂಪ್ರದಾಯದಂತೆ ಕಾಗೆಗಳು ಅದನ್ನು ತಿನ್ನಲೆಂದು ಅಗಲಿದವರ ಬಂಧು ಬಳಗದವರು ಕಾಯುತ್ತಿದ್ದರು. ಸ್ಮಶಾನದ ಪಕ್ಕದ ಪಾಳು ಜೋಪಡಿಯ ನಿರ್ಗತಿಕ ಬಾಲಕನೊಬ್ಬ ಹಸಿವಿನಿಂದ ಆಸೆ ಕಂಗಳಿನೊಂದಿಗೆ ಅವರು ಬಡಿಸಿಟ್ಟ ಊಟದ ಎಲೆಯ ಕಡೆಗೆ ಓಡಿಬಂದಾಗ ಎಲ್ಲರೂ ಅರಚಾಡಿ ಅವನನ್ನು ಬೆದರಿಸಿ ದೂರ ಕಳುಹಿಸಿದರು.
ಸಂದೇಶ್ ಎಚ್. ನಾಯ್ಕ್ ಹಕ್ಲಾಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.