ಯುವಜನ/ಮಕ್ಕಳು

ಚಿಪ್ಪಿನಿಂದ ಚಮತ್ಕಾರ

ಚಿಣ್ಣರಿಗೆ 'ಪೋಗೊ' ಅತಿ ಇಷ್ಟದ ಚಾನೆಲ್. ಅದರಲ್ಲೂ 'ಪೋಗೋ ಮ್ಯಾಡ್‌'ನಲ್ಲಿ ಪ್ರಸಾರವಾಗುವ ಬಣ್ಣದ ಆಟಿಕೆ...

ಚಿಪ್ಪಿನಿಂದ ಚಮತ್ಕಾರ
Published On :

ಚಿಣ್ಣರಿಗೆ 'ಪೋಗೊ' ಅತಿ ಇಷ್ಟದ ಚಾನೆಲ್. ಅದರಲ್ಲೂ 'ಪೋಗೋ ಮ್ಯಾಡ್‌'ನಲ್ಲಿ ಪ್ರಸಾರವಾಗುವ ಬಣ್ಣದ ಆಟಿಕೆ, ಉಪಯುಕ್ತ ವಸ್ತುಗಳನ್ನು ತಯಾರಿಸುವ ಕಾರ್ಯಕ್ರಮ ಮಕ್ಕಳಿಗೆ ಇನ್ನೂ ಇಷ್ಟ. ಕ್ರಿಯಾಶೀಲತೆಯ ವೃದ್ಧಿಗೆ ಸಹಕಾರಿ. ಅದರ ನಿರೂಪಕ ರಾಬ್ ಎಂಬಾತ. ಒಂದು ಮೊಟ್ಟೆಯ ಚಿಪ್ಪಿನಲ್ಲಿ ಕಲೆಯನ್ನು ಅರಳಿಸುವುದು ಹೇಗೆಂದು ರಾಬ್ ಮನೋಜ್ಞವಾಗಿ ಕಲಿಸುತ್ತಾನೆ. ಅದು ಹೀಗಿತ್ತು...
ಮೊಟ್ಟೆಯನ್ನು ಸೂಕ್ಷ್ಮವಾಗಿ ಒಡೆದು ಅದರಲ್ಲಿನ ಲೋಳೆಯನ್ನೆಲ್ಲ ಖಾಲಿ ಮಾಡಿಟ್ಟುಕೊಳ್ಳಿ. ಒಡೆದ ಕೆಲವು ಭಾಗಗಳಿದ್ದರೂ ಚಿಂತೆಯಿಲ್ಲ. ಅದನ್ನೆಲ್ಲ ಬಳಸಿ 'ಶ್ರೀಮಂತ', 'ಕಳ್ಳ', 'ಮೀನು ಮಾರುವವಳು' ಹೀಗೆ ಏನೆಲ್ಲ ಮಾಡಬಹುದು. ಈ ಮೊಟ್ಟೆಗಳ ಮೇಲ್ಭಾಗಕ್ಕೆ ಕಣ್ಣು, ಮೂಗು ಬಾಯಿ ಬರೆದು ಬಣ್ಣದ ಕಾಗದದಿಂದ ಕಾಲರ್, ಸ್ಕಾರ್ಫ್, ಸೀರೆ ಎಲ್ಲ ಮಾಡಿ ಅಂಟಿಸಿ. ಅಕ್ಕಪಕ್ಕಗಳಲ್ಲಿ ಕೈಗಳನ್ನು ಬರೆದು ಅಂಟಿಸಿ. ಕಾಲು, ಶೂಗಳನ್ನು ಬರೆದು ಜೋಡಿಸಿ. ಹೀಗೆ ಅಂದದ ಬೊಂಬೆಗಳನ್ನು ತಯಾರಿಸಿ.
ಬೇಕಾಗುವ ಸಾಮಗ್ರಿಗಳಿಷ್ಟೇ... ಒಡೆದ ಮೊಟ್ಟೆಗಳು, ಕಲರ್ ಶೀಟ್ಸ್, ಬಣ್ಣ, ಫೆವಿಕಲ್, ಬಿಳಿಯ ಕಾಗದಗಳು. ನಿಮ್ಮ ಮನೆಯಲ್ಲಿ ಕಂಪ್ಯೂಟರ್ ಮತ್ತು ಇಂಟರ್ನೆಟ್ ಇದ್ದಲ್ಲಿ ಈ ಮೇಲ್ಕಂಡ 'ಪೋಗೊ ಮ್ಯಾಡ್‌' ಕರಕುಶಲವನ್ನು www.youtube.com/watch?v=Wna_pq2Uxe8ಈ ಲಿಂಕ್‌ನಲ್ಲಿ ನೋಡಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.