ಮೇಲಕ್ಕೆ ಚಿಮ್ಮುವ ಗೋಲಿ
ನಿಮ್ಮಲ್ಲಿನ ಬಳಕೆಗೆ ಬಾರದ ಆಟಿಕೆಯಿಂದ ಮತ್ತೊಂದು ಆಟಿಕೆಯನ್ನು ತಯಾರಿಸಿ ಆಡಬಹುದು. ನಿಮ್ಮಲ್ಲಿನ ರಬ್ಬರ್ ಚೆಂಡು ಆಡುವಾಗ ...

ನಿಮ್ಮಲ್ಲಿನ ಬಳಕೆಗೆ ಬಾರದ ಆಟಿಕೆಯಿಂದ ಮತ್ತೊಂದು ಆಟಿಕೆಯನ್ನು ತಯಾರಿಸಿ ಆಡಬಹುದು. ನಿಮ್ಮಲ್ಲಿನ ರಬ್ಬರ್ ಚೆಂಡು ಆಡುವಾಗ ಒಡೆದಿರಬಹುದಲ್ಲವೆ? ಅದನ್ನು ಬಿಸಾಕಬೇಡಿ. ಆ ಚೆಂಡಿನ ಅರ್ಧ ಭಾಗವನ್ನು ಸರಿಯಾಗಿ ಕತ್ತರಿಸಿಕೊಳ್ಳಿ (ಗಮನಿಸಿ: ಅಂಚಿನಲ್ಲಿ ಏರುಪೇರು ಇದ್ದರೆ ಪ್ರಯೋಗ ಸಫಲವಾಗದು.)
ಚೆಂಡಿನ ಗೋಲದ ಭಾಗ ಮೇಲಕ್ಕೆ ಬರುವಂತೆ ಕೈಯಲ್ಲಿ ಹಿಡಿದುಕೊಳ್ಳಿ. ಈಗ ಮೇಲ್ಭಾಗವನ್ನು ಬೆರಳುಗಳಿಂದ ಅಮುಕಿ. ತಗ್ಗಾದ ರಚನೆಯಾಗುವಂತೆ ಮಾಡಿ. ತಗ್ಗಾದ ಭಾಗದಲ್ಲಿ ಗಾಜಿನ ಗೋಲಿಯೊಂದನ್ನು ಇಟ್ಟು ನಿಧಾನವಾಗಿ ಚೆಂಡನ್ನು ಮೊದಲಿನ ಸ್ಥಿತಿಗೆ ಬರುವಂತೆ ಮಾಡಿ. ಚೆಂಡಿನ ಭಾಗ ಮೊದಲಿನ ಸ್ಥಿತಿಗೆ ಬರುವಂತೆಯೇ ಅದರಲ್ಲಿದ್ದ ಗಾಜಿನ ಗೋಲಿ ಮೇಲಕ್ಕೆ ಚಿಮ್ಮುತ್ತದೆ. ಆಗ ಹುಶಾರು.
ಗಮನಿಸಿ:
1. ಗಟ್ಟಿಯಾದ ರಬ್ಬರಿನ ಚೆಂಡು ಮತ್ತು ಮೃದುವಾದ ರಬ್ಬರಿನ ಚೆಂಡನ್ನು ಬಳಸಿ ಉಂಟಾಗುವ ಬದಲಾವಣೆಗಳನ್ನು ಗಮನಿಸಿ.
2. ವಿವಿಧ ಗಾತ್ರದ ಗಾಜಿನ ಗೋಲಿಗಳನ್ನು ಬಳಸಿ ಚಿಮ್ಮುವ ಎತ್ತರದಲ್ಲಿ ಉಂಟಾಗುವ ಬದಲಾವಣೆಗಳನ್ನು ಗುರುತಿಸಿ.
3. ಅರ್ಧ ಚೆಂಡನ್ನು ಮಾತ್ರ ಅಮುಕಿ ನೆಲದ ಮೇಲಿಡಿ. ಚೆಂಡು ಟಣ್ಣನೆ ಮೇಲಕ್ಕೆ ಚಿಮ್ಮುತ್ತದೆ. ಅಮುಕುವಲ್ಲಿ ಬದಲಾವಣೆಗಳನ್ನು ಮಾಡಿ. (ಅಂದರೆ ಸ್ವಲ್ಪ ಭಾಗ, ಅರ್ಧಭಾಗ ಮತ್ತು ಸಂಪೂರ್ಣ) ಚಟುವಟಿಕೆಯನ್ನು ಪುನರಾವರ್ತಿಸಿದಾಗ ಬರುವ ಫಲಿತಾಂಶಗಳನ್ನು ಪಟ್ಟಿ ಮಾಡಿ.
ಕಾರಣವೇನು?
ಗೋಲಿ ಚಿಮ್ಮುವುದು ಸರಳವಾಗಿ ಕಂಡರೂ ಅನೇಕ ಅಂಶಗಳನ್ನು ಇಲ್ಲಿ ಗಮನಿಸಬಹುದು. ಮೊದಲನೆಯದಾಗಿ ರಬ್ಬರಿಗೆ ಸ್ಥಿತಿಸ್ಥಾಪಕ ಗುಣವಿದೆ. ಅದಿಲ್ಲದೆ ಹೋಗಿದ್ದರೆ ಗೋಲಿ ಚಿಮ್ಮುತ್ತಿರಲಿಲ್ಲ. ಗೋಲಿಗೆ ಬದಲಾಗಿ ಹಗುರವಾದ ಥರ್ಮಾಕೋಲ್ ತುಂಡು ಬಳಕೆ ಮಾಡಿದರೆ ಹೆಚ್ಚು ಎತ್ತರಕ್ಕೆ ಎಗರುತ್ತದೆ. ಬಲ ಪ್ರಯೋಗ ಹೆಚ್ಚಾದಷ್ಟೂ ಗೋಲಿ ದೂರ ಸಾಗುತ್ತದೆ. ಮಾಡಿ ನೋಡಿ. ರಂಜನೆಯೊಂದಿಗೆ ತಿಳುವಳಿಕೆಯನ್ನು ಪಡೆಯಿರಿ.
-ನಾರಾಯಣ ಬಾಬಾನಗರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


