ಯುವಜನ/ಮಕ್ಕಳು

ಪುಟ್ಟನ ಕ್ಯಾಲೆಂಡರ್

ಪುಟ್ಟನ ಕ್ಯಾಲೆಂಡರ್
Published On :

ಅಣ್ಣ ತಂದ ಪೇಟೆಯಿಂದ
ಹೊಸ ದಿನದರ್ಶಿಕೆ
ಹತ್ತರ ಮೇಲೆ ಎರಡು ಪುಟ
ಹಬ್ಬದ ಸಾಲಿನ ಸೂಚಿಕೆ

ಜನವರಿ ತಿಂಗಳ ಮೊದಲು
ಸಂಕ್ರಾಂತಿ ಹಬ್ಬ ಅದರಲ್ಲಿ
ಎರಡನೆಯ ಪುಟ ಫೆಬ್ರವರಿ
ಶಿವನ ಆರಾಧನೆಯ ಮಾತಲ್ಲಿ

ಹೊಸ ವರ್ಷದ ಯುಗಾದಿ
ಮಾರ್ಚ್‌ನಲ್ಲಿ ಇತ್ತು
ಏಪ್ರಿಲ್ ಒಂದನೆ ದಿನ
ಮೂರ್ಖರ ದಿನವು ಆಗಿತ್ತು

ಮೇ ತಿಂಗಳ ಮೊದಲು
ಶ್ರಮ ಜೀವಗಳ ನೆನಪು
ಹಿಂದೆಯೆ ಬಂತು ಜೂನ್
ಸೂರ್ಯನ ಕಿರಣದ ಹೊಳಪು

ಗಾಳಿಯ ಕಾಲದ ಆಷಾಡ
ಜುಲೈ ತಿಂಗಳ ಒಳಗೆ
ಆಗಸ್ಟ್‌ನಲ್ಲಿ ಸ್ವಾತಂತ್ರ್ಯದ ಹಬ್ಬ
ವಿನಾಯಕ ವ್ರತದ ಜೊತೆಗೆ

ನವರಾತ್ರಿಯು ಆರಂಭ
ಸೆಪ್ಟೆಂಬರ್ ಬಂದು ನಿಂತರೆ
ಅಕ್ಟೋಬರ್ ಎರಡನೆ ದಿನ
ಅಜ್ಜ ಗಾಂಧಿ ಬರ್ತಾರೆ

ಕನ್ನಡ ತಾಯಿ ಉತ್ಸವ
ನವೆಂಬರ್ ಮೊದಲಲ್ಲಿ
ಕಡೆಯದಾಗಿ ಡಿಸೆಂಬರ್
ನಡುಗುವ ಗಡಗಡ ಚಳಿಯಲ್ಲಿ

- ಶಿವನಪುರ ನರಸಿಂಹಮೂರ್ತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.