ಸೈಕಲ್ ಕಿಂಗ್

ಚೆನ್ನಾಗಿರೋ ಕೈಕಾಲು ಮತ್ತು ಜೊತೆಗೊಂದು ಸೈಕಲ್ಲು ನಿಮ್ಮಲ್ಲಿದ್ದರೆ ಒಂದು ಸಿಹಿ ಸುದ್ದಿ ಇಲ್ಲಿದೆ. ನಿಮ್ಮ ಬಂಪರ್ರಿಲ್ಲದ ಸೈಕಲ್ಲು ಈಗ ನಿಮಗೆ ಎರಡೂವರೆ ಲಕ್ಷ ರುಪಾಯಿಯ ಬಂಪರ್ ಬಹುಮಾನ ತಂದುಕೊಡಬಹುದು. ನಾಳೆ (ಫೆಬ್ರುವರಿ 9) ಸೈಕಲ್ ರೈಡರ್ಗಳಿಗಾಗಿ ಸೈಕಲ್ 'ಓಡಿಸೋ' ಸ್ಪರ್ಧೆ ಬೆಂಗಳೂರಿನಲ್ಲಿ ನಡೆಯಲಿದೆ.
ಸೈಕ್ಲರ್ಸ್ ಫೆಡರೇಶನ್ ಆಫ್ ಇಂಡಿಯಾ (ಸಿಎಫ್ಐ) ಸಹಯೋಗದೊಂದಿಗೆ ವೊಡಾಫೋನ್ ನಡೆಸುತ್ತಿರುವ ಈ ಸೈಕಲ್ ಮ್ಯಾರಥಾನ್ಸ್ಪರ್ಧೆ, ಈ ಸಾಲಿನ ಅತಿ ದೊಡ್ಡ ಸೈಕ್ಲಥಾನ್ ಎಂಬ ಖ್ಯಾತಿ ಪಡೆಯಲಿದೆ. ನೂರಾ ಐವತ್ತು ವೃತ್ತಿಪರ ಸೈಕ್ಲಿಸ್ಟ್ಗಳು ಸೇರಿದಂತೆ ಒಟ್ಟಾರೆ ಹತ್ತು ಸಾವಿರ ಸೈಕಲ್ಗಳು ಅಂದು ರಸ್ತೆಗೆ ಇಳಿಯುವ ನಿರೀಕ್ಷೆ ಇದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸೈಕ್ಲಿಂಗ್ ಕಾರ್ಯಕ್ರಮಗಳ ಪಟ್ಟಿಗೆ ಈ ಮ್ಯಾರಥಾನ್ನ ಸೇರ್ಪಡೆಯಾಗಲಿದೆ.
ಪರಿಸರ ಮಾಲಿನ್ಯ, ಏರುತ್ತಿರುವ ಇಂಧನ ಬೆಲೆ, ಟ್ರಾಫಿಕ್ ಸಮಸ್ಯೆ ಹಾಗೂ ದೈಹಿಕ ಆರೋಗ್ಯ- ಈ ವಿಷಯಗಳನ್ನು ಮೂಲವಾಗಿಟ್ಟುಕೊಂಡು ಈ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಸೈಕ್ಲಿಂಗ್ ಅನ್ನು ಜನಪ್ರಿಯವಾಗಿಸಲು ಮ್ಯಾರಥಾನ್ ಆಯೋಜಿಸಲಾಗಿದ್ದು, ಕಾರ್ಯಕ್ರಮವನ್ನು ಇನ್ನಷ್ಟು ವರ್ಣರಂಜಿತವಾಗಿಸಲು ಬಹುಮಾನ ವಿತರಣಾ ಸಮಾರಂಭದಲ್ಲಿ ಸಂಗೀತ, ನೃತ್ಯ, ಸೈಕಲ್ ಸ್ಟಂಟ್ಸ್, ಫ್ಯಾಶನ್ ಷೋ ಹಾಗೂ ಇನ್ನಿತರ ಮನರಂಜನೆ ಕಾರ್ಯಕ್ರಮಗಳನ್ನೂ ಇಡಲಾಗಿದೆ. ಆಸಕ್ತರು www.cyclingfederationofindia.org ಅಥವಾ ಹತ್ತಿರದ ವೊಡಾಫೋನ್ ಸ್ಟೋರ್ಗೆ ಭೇಟಿ ಕೊಟ್ಟು ಹೆಸರು ನೋಂದಾಯಿಸಿಕೊಳ್ಳಬಹುದು. ಮಾಹಿತಿಗೆ: www.vodafone.in/cycling <
ಐದು ವರ್ಷ ಮೇಲ್ಪಟ್ಟವರಿಗೆ ಸ್ಪರ್ಧಿಸಲು ಅವಕಾಶ.
ಚಾಂಪಿಯನ್ ರೈಡ್ (60 ಕಿಮೀ), ಪ್ಯಾಶನ್ ರೈಡ್ (40 ಕಿಮೀ), ಗ್ರೀನ್ ರೈಡ್(20 ಕಿಮೀ) ಮತ್ತು ಫನ್ ರೈಡ್ (10 ಕಿಮೀ) ಎಂಬ ನಾಲ್ಕು ವಿಭಾಗ.
ಚಾಂಪಿಯನ್ ರೈಡ್ನಲ್ಲಿ ವೃತ್ತಿಪರರಿಗೆ ಮಾತ್ರ ಅವಕಾಶ.
ಮೊದಲ ಬಹುಮಾನ 2.5 ಲಕ್ಷ, ದ್ವಿತೀಯ ಬಹುಮಾನ 1.75 ಲಕ್ಷ, ತೃತೀಯ ಬಹುಮಾನ 1.25 ಲಕ್ಷ, ನಾಲ್ಕನೇ ಬಹುಮಾನ 1 ಲಕ್ಷ. 10 ಸಮಾಧಾನಕರ ಬಹುಮಾನಗಳು. ಜೊತೆಗೆ ಭಾಗವಹಿಸಿದವರಿಗೆ ಪ್ರಮಾಣಪತ್ರಗಳು.
ಪ್ರವೇಶ ಶುಲ್ಕ 300ರಿಂದ 500 ರು.
ದಿನಾಂಕ: ಫೆಬ್ರವರಿ 9, 2014.
ಜವಾಬ್ದಾರಿಯುತ ಕಾರ್ಪೊರೇಟ್ ಸಂಸ್ಥೆಯಾಗಿ, ಜನಜೀವನವನ್ನು ಉತ್ತಮ ಪಡಿಸಲು, ಸಮುದಾಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲು ಹಾಗೂ ಸೈಕ್ಲಿಂಗ್ ಸಂಸ್ಕೃತಿಯನ್ನು ಉತ್ತೇಜಿಸಲು ಈ ಕಾರ್ಯಕ್ರಮ ರೂಪಿಸಿದ್ದೇವೆ. ಇದರ ಯಶಸ್ಸು ಈ ಸ್ಪರ್ಧೆಯನ್ನು ದೀರ್ಘಾವಧಿಗೆ ವಿಸ್ತರಿಸುವ ಕನಸಿಗೆ ಬಲ ಕೊಡಲಿದೆ.
= ಭುವನೇಶ್ ಪ್ರತಾಪ್ಸಿಂಗ್, ವೊಡಾಫೋನ್ ನಿರ್ವಹಣಾ ನಿರ್ದೇಶಕ (ಪಶ್ಚಿಮ)
ವೊಡಾಫೋನ್ ಸೈಕ್ಲಥಾನ್ ಬೆಂಗಳೂರಿನ ಬಹು ನಿರೀಕ್ಷಿತ ಸ್ಪರ್ಧೆಯಾಗಿದೆ.
= ಓಂಕಾರ್ ಸಿಂಗ್, ಪ್ರಧಾನ ಕಾರ್ಯದರ್ಶಿ, ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


