ಯುವಜನ/ಮಕ್ಕಳು

ಆಸೆಗೊಂದು ರೆಕ್ಕೆ

ಅವನು ಬಡ ತಂದೆ. ಮನೆಯ ಎಲ್ಲರನ್ನೂ ಖುಷಿಯಾಗಿಡಲು ಕಷ್ಟಪಡುತ್ತಿದ್ದ. ಜೊತೆಗೆ ಹೆಚ್ಚು ಓದಿಕೊಂಡರೆ ಹೆಚ್ಚು ಸಂಬಳದ ಕೆಲಸ ಸಿಕ್ಕೀತೆಂದು..

Published On :

ಅವನು ಬಡ ತಂದೆ. ಮನೆಯ ಎಲ್ಲರನ್ನೂ ಖುಷಿಯಾಗಿಡಲು ಕಷ್ಟಪಡುತ್ತಿದ್ದ. ಜೊತೆಗೆ ಹೆಚ್ಚು ಓದಿಕೊಂಡರೆ ಹೆಚ್ಚು ಸಂಬಳದ ಕೆಲಸ ಸಿಕ್ಕೀತೆಂದು ಸಂಜೆ ಕಾಲೇಜಿಗೂ ಹೋಗುತ್ತಿದ್ದ. ಹೀಗಾಗಿ ಭಾನುವಾರವೊಂದೇ ಮನೆಯವರ ಮುಖ ನೋಡುತ್ತಿದ್ದ. ವರ್ಷಗಳು ಉರುಳುವಷ್ಟರಲ್ಲಿ ಡಿಗ್ರಿ ಮುಗಿಸಿದ. ಅವನಿಗೆ ಹುದ್ದೆಯಲ್ಲಿ ಬಡ್ತಿ ಸಿಕ್ಕಿತು. ಸ್ವಂತ ಮನೆ ಮಾಡಿಕೊಂಡ, ಕಾರು ತಗೊಂಡ. ಮಕ್ಕಳಿಗೆ ಹೊಸ ಬಟ್ಟೆಗಳನ್ನು ಕೊಡಿಸಿದ. ಆದರೆ ಈಗಲೂ ಮನೆಯವರೊಂದಿಗೆ ವಾರಕ್ಕೆ ಒಂದು ದಿನವಿದ್ದರೆ ಹೆಚ್ಚು. ಕೇಳಿದರೆ, 'ನಿಮಗಾಗಿಯೇ ಅಲ್ಲವೇ ದುಡಿಯುತ್ತಿರೋದು? ಇನ್ನೊಂದಷ್ಟು ವರ್ಷ ಅನುಭವವಾದರೆ ಬಾಸ್ ಆಗುತ್ತೇನೆ. ಎಲ್ಲರೂ ಸುಖವಾಗಿರಬಹುದು' ಎಂದ. ವರ್ಷಗಳುರುಳಿದವು. ಈಗ ತಂದೆ ಬಾಸ್ ಆದ. ಮನೆ ಚಿಕ್ಕದೆನಿಸಿತು. ದೊಡ್ಡ ಬಂಗಲೆ ಕಟ್ಟಿಸಿದ. ರಜೆ ಕಳೆಯಲೆಂದೇ ಸಿಂಗಾಪುರದಲ್ಲಿ ಸ್ವಂತ ಮನೆ ಮಾಡಿದ. ಆಳುಕಾಳುಗಳನ್ನು ನೇಮಿಸಿದ. ಭವಿಷ್ಯಕ್ಕಾಗುವಷ್ಟು ಹಣ ಕೂಡಿಟ್ಟ. 'ಇನ್ನು ಮುಂದೆ ಹೆಂಡತಿ ಮಕ್ಕಳೊಂದಿಗೆ ಎಲ್ಲ ಸಮಯವನ್ನೂ ಕಳೆಯುತ್ತೇನೆ' ಎಂದ. ಕುಟುಂಬ ಖುಷಿ ಪಟ್ಟಿತು. ಮರುದಿನ ಮುಂಜಾನೆ ಆತ ಏಳಲೇ ಇಲ್ಲ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.