ಯುವಜನ/ಮಕ್ಕಳು

ಮನೆಯ ಮೇಲೊಂದು ಬಾಹ್ಯಾಕಾಶ ಮಾಡಿ!

Published On :

ಚಿಕ್ಕರಿದ್ದಾಗ 'ಮುಂದೇನಾಗಬೇಕು?' ಎಂಬ ಕಲ್ಪನೆಗಳು ಸಾಕಷ್ಟಿರುತ್ತವೆ. ದಿನದಿಂದ ದಿನಕ್ಕೆ ಆಗಾಗ ಬದಲಾಗುತ್ತಲೂ ಇರುತ್ತವೆ. ಆದರೆ, ಕೆಲವು ಸಂದರ್ಭಗಳಲ್ಲಿ ಆಸೆಗಳು ಬದುಕಿನಾದ್ಯಂತ ಬದುಕಿಬಿಡುತ್ತವೆ. ಗಗನಯಾತ್ರಿಯಾಗಬೇಕು ಎಂದು ಬಯಸಿದ್ದ ಮೆಂಗ್ ನೀ ಅಂಥ ಕನಸುಗಳ ಹಿಂದೆಬಿದ್ದವನು. ಸದ್ಯ 63 ವರ್ಷದ ಮೆಂಗ್ ನೀ ಬೆಳೆದಿದ್ದು ಚೀನಾದ ದೂರದ ಹಳ್ಳಿಯಾದ ಕ್ಸಿಯಾಪುವಿನಲ್ಲಿ. ವಿಜ್ಞಾನವನ್ನು ಅಧ್ಯಯಿನಿಸಿ ಗಗನಯಾತ್ರಿಯಾಗುವ ಭಾಗ್ಯ ಸಂಭವಿಸಲೇ ಇಲ್ಲ. ಹಾಗಂತ ಕನಸು ಮತ್ತೊಂದು ರೀತಿಯಲ್ಲಿ ಸಂಭವಿಸಿ ಗಗನಯಾತ್ರಿಯ ಕನಸೂ ಮುರುಟಲಿಲ್ಲ.
ಗಗನಯಾತ್ರಿಯ ಬಗೆಗಿನ ಕುತೂಹಲ, ಅಭಿಮಾನ ಮೆಂಗ್‌ನ ಮನಸ್ಸಲ್ಲಿ ತಣಿಯಲೇ ಇಲ್ಲ. ಬಾಲ್ಯದ ಹಂಬಲದ ಪೂರೈಕೆಗಾಗಿ ತನ್ನ ಮನೆಯ ಮೇಲೆಯೇ ಬಾಹ್ಯಾಕಾಶದ ಪ್ರತಿಕೃತಿ ನಿರ್ಮಿಸಿಬಿಟ್ಟಿದ್ದಾನೆ. ಉತ್ತಮ ಕೃಷಿಕನಾಗಿ, ವ್ಯವಹಾರಸ್ಥನಾಗಿ ತಕ್ಕಮಟ್ಟಿಗೆ ಸಂಪಾದನೆಯನ್ನು ಮಾಡಿದ. ಬಾಹ್ಯಾಕಾಶ ಪ್ರತಿಕೃತಿ ನಿರ್ಮಾಣಕ್ಕಾಗಿ ತನ್ನ ಎಸ್ಟೇಟ್ ಅನ್ನು ಮಾರಾಟ ಮಾಡಿದ. ಬಂದ ಕಾಸಲ್ಲಿ ಬಾಹ್ಯಾಕಾಶ ನೌಕೆಯ ಪ್ರತಿಕೃತಿ ನಿರ್ಮಿಸಿಯೇಬಿಟ್ಟ. ನಾಸಾದ ಲೋಕ ಅದರಲ್ಲಿ ಇಲ್ಲ. ಆದರೆ, ಅಮೆರಿಕದ ಧ್ವಜದ ಗುರುತಿದೆ. ಪ್ರೇಕ್ಷಕರ ಮನ ಸೆಳೆಯುತ್ತಿದ್ದು, ಆಗಾಗ್ಗೆ ಪ್ರವಾಸಿಗರು ಆತನ ಮನೆಯ ಕದ ಬಡಿಯುತ್ತಿದ್ದಾರಂತೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.