ಯುವಜನ/ಮಕ್ಕಳು

ಕಾಣದ ಜೀವಿಗಳು ಆಳದಲ್ಲಿ...

Published On :

ನಮ್ಮ ಭೂಮಿಯ 70 ಶೇ. ಭಾಗ ಸಾಗರದ ನೀರಿನಿಂದಲೇ ಆವೃತವಾಗಿದೆ. ನಾವೇನಾದರೂ 1000 ಕಿ.ಮೀ. ಉದ್ದ ಅಗಲದ ಚಚ್ಚೌಕವೊಂದರಲ್ಲಿ ನೀರು ತುಂಬಿಸಬಲ್ಲೆವಾದರೆ ಅದಷ್ಟನ್ನೂ ತುಂಬುವಷ್ಟು ಸಾಗರಗಳಲ್ಲೇ ಇದೆ. ಭೂಮಿಯಲ್ಲೇ ಅತಿ ದೊಡ್ಡ ಸಾಗರ ಫೆಸಿಫಿಕ್ ಆಗಿದ್ದು, ಇದು ಭೂಮಿಯ ಶೇ.30 ಭಾಗವನ್ನು ಆವರಿಸಿಕೊಂಡಿದೆ. ಫೆಸಿಫಿಕ್ ಸಾಗರವನ್ನೇ ಶಾಂತ ಸಾಗರವೆಂದು ಕರೆಯಲಾಗುತ್ತದೆ. ಮರಿಯಾನ ಐಲ್ಯಾಂಡ್ ಬಳಿ ಈ ಸಾಗರದ ಆಳ 11000 ಮೀ. ಇದು ಭೂಮಿಯಲ್ಲಿ ಕಂಡು ಬಂದಿರುವ ಅತ್ಯಂತ ಆಳದ ಪ್ರದೇಶ. ಈ ಸಾಗರದ ಸುತ್ತಲೂ ಬೆಂಕಿ ಕಾರುವ ಅತಿ ಹೆಚ್ಚು ಸಂಖ್ಯೆಯ ಜೀವಂತ ಜ್ವಾಲಾಮುಖಿಗಳಿವೆ. ಅಟ್ಲಾಂಟಿಕ್ ಸಾಗರ ಎರಡನೇ ಅತಿ ದೊಡ್ಡ ಸಾಗರವಾಗಿದ್ದು ಇದು ಭೂಮಿಯ ಶೇ.21 ಭಾಗವನ್ನು ಆವರಿಸಿಕೊಂಡಿದೆ. ಇನ್ನು ಮೂರನೇ ಅತಿ ದೊಡ್ಡ ಸಾಗರವೆನಿಸಿಕೊಂಡ ಹಿಂದೂ ಮಹಾಸಾಗರ ಶೇ.14 ಭಾಗ ಆವರಿಸಿಕೊಂಡಿದೆ. ಅಲ್ಲಿಗೆ ಶೇ.65 ಭಾಗ ಭೂಮಿ ತುಂಬಿಕೊಂಡಾಯಿತು. ಇನ್ನೂ ಉಳಿದ ನಾಲ್ಕು ಮಹಾಸಾಗರಗಳು ಶೇ.5 ಭಾಗವನ್ನು ಆವರಿಸಿಕೊಂಡಿವೆ. ಚಳಿಗಾಲದಲ್ಲಿ ಇಡಿ ಆರ್ಕ್‌ಟಿಕ್ ಮಹಾಸಾಗರ ಮಂಜುಗಡ್ಡೆಯಾಗಿ ಪರಿವರ್ತಿತಗೊಳ್ಳುತ್ತದೆ! ಈ ಸಾಗರದಾಳಗಳಲ್ಲಿ ಇದುವರೆಗೂ ಕಂಡುಬಂದಿರುವ ಸಾವಿರಾರು ಸಮುದ್ರಜೀವಿಗಳ ನೂರು ಪಟ್ಟು ಜೀವಿಗಳು ಇನ್ನೂ ನಮ್ಮ ವಿಜ್ಞಾನಿಗಳ ಕಣ್ಣಿಗೆ ಬಿದ್ದಿಲ್ಲವಂತೆ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.