ಜ್ಞಾನೋದಯ
ಶೇಖರ ವಿಪರೀತ ತುಂಟ. 6ನೇ ತರಗತಿ ಓದುತ್ತಿದ್ದ. ಈತ ತನ್ನ ಬುದ್ಧಿವಂತಿಕೆಯನ್ನು...

ಶೇಖರ ವಿಪರೀತ ತುಂಟ. 6ನೇ ತರಗತಿ ಓದುತ್ತಿದ್ದ. ಈತ ತನ್ನ ಬುದ್ಧಿವಂತಿಕೆಯನ್ನು ಓದಿನಲ್ಲಿ ತೋರಿಸುತ್ತಿರಲಿಲ್ಲ. ಶಾಲೆಗೆ ಹೋಗದೇ ದಿನವೂ ಊರೂರು ಸುತ್ತುತ್ತ ಕಾಲ ಕಳೆಯತೊಡಗಿದ. ಆದರೆ, ಈತನೊಂದಿಗೆ ಗೆಳೆಯರು ಶಾಲೆಗೆ ಹೋಗಿ ಬಂದು ಇವನ ಜೊತೆ ಸುತ್ತುತ್ತಿದ್ದರು. ನಂತರ ಅವರು ಮನೆಗೆ ಹೋಗಿ ಓದುತ್ತಿದ್ದರು. ಶೇಖರ ಮಾತ್ರ ಪುಸ್ತಕ ಹಿಡಿಯುತ್ತಿರಲಿಲ್ಲ. ಎಲ್ಲ ಸಮಯವನ್ನೂ ತುಂಟಾಟಗಳಲ್ಲೇ ಕಳೆಯುತ್ತಿದ್ದ.
ಶೇಖರನ ತಂದೆ- ತಾಯಿ ಈ ವರ್ತನೆಯಿಂದ ಬೇಸತ್ತು ಸುಧಾರಿಸಲೆತ್ನಿಸಿದರು. ಶಿಕ್ಷಕರಿಗೆ ದೂರು ನೀಡಿದರು. ಅವರು ಇವನಿಗೆ ಚೆನ್ನಾಗಿ ಬಯ್ದು, ಬುದ್ಧಿ ಹೇಳಿದರು. ಆದರೂ ಈತ ಬದಲಾಗಲಿಲ್ಲ.
ಶೇಖರ ಒಂದು ದಿನ ನದಿಗೆ ಮೀನು ಹಿಡಿಯಲು ಹೋದ. ಒಂದು ಮೀನು ಹಿಡಿದು ಮೇಲಕ್ಕೆ ತಂದ. ಅದರ ಒದ್ದಾಟ ಕಂಡು ಮರುಕ ಉಂಟಾಗಿ ಪುನಃ ನೀರಿಗೆ ಬಿಟ್ಟ. ಆದರೆ, ಅದು ಆಗಲೇ ಉಸಿರು ಕಟ್ಟಿ ಸತ್ತುಹೋಗಿತ್ತು. 'ಅಯ್ಯೋ ಇನ್ನೂ ಸ್ವಲ್ಪ ಮುಂಚೆ ಬಿಟ್ಟಿದ್ದಿದ್ದರೆ ಮೀನು ಬದುಕುತ್ತಿತ್ತಲ್ಲ. ಒಂದು ಸೆಕೆಂಡಿನಲ್ಲಿ ಸತ್ತು ಹೋಯಿತಲ್ಲ' ಎಂದು ಅನಿಸಿತು ಇವನಿಗೆ. 'ಅಯ್ಯೋ ದೇವರೆ, ಒಂದು ಸೆಕೆಂಡಿನಲ್ಲಿ ಏನೆಲ್ಲಾ ಬದಲಾವಣೆ ಆಗಬಹುದು. ನಾನು ತುಂಬ ತಪ್ಪು ಮಾಡುತ್ತಿರುವೆ. ಚೆನ್ನಾಗಿ ಓದಿ ಮುಂದೆ ಬರುವುದನ್ನು ಬಿಟ್ಟು ಕಾಲವನ್ನು ಹಾಳು ಮಾಡುತ್ತಿದ್ದೇನೆ' ಎಂದು ಅವನಿಗೆ ಅನ್ನಿಸುವಷ್ಟರಲ್ಲಿ ಮರುದಿನ ಪರೀಕ್ಷೆ ಬಂದಿತ್ತು. ಕಾಲ ಮಿಂಚಿಹೋಗಿತ್ತು. ಪರೀಕ್ಷೆಯಲ್ಲಿ ಶೇಖರ ಫೇಲಾದ. ಈತನ ಗೆಳೆಯರು ಮುಂದಿನ ತರಗತಿಗೆ ಹೋದರು. ಶೇಖರ ಅದೇ ತರಗತಿಯಲ್ಲಿ ಉಳಿದ. ಮತ್ತೆ ಶೇಖರನಿಗೆ ಪರೀಕ್ಷೆಗೆ ಓದಲು ಒಂದು ತಿಂಗಳ ಕಾಲಾವಕಾಶ ಕೊಟ್ಟರು. ತಾನು ಸಮಯ ವ್ಯರ್ಥ ಮಾಡಿದ್ದಕ್ಕೆ ಹೀಗೆ ಆಯಿತು. ತಪ್ಪಿಗೆ ಪಶ್ಚಾತ್ತಾಪ ಪಟ್ಟ.
ಶೇಖರ ಕಾಲದ ಬಗ್ಗೆ ಜಾಗೃತನಾಗಿ ಮುಂದೆ ಸಮಯ ಹಾಳು ಮಾಡದೇ ಚೆನ್ನಾಗಿ ಓದಿ, ಪ್ರಥಮ ರ್ಯಾಂಕ್ ಬರತೊಡಗಿದ. ಅಪ್ಪ- ಅಮ್ಮನಿಗೆ ಖುಷಿಯಾಯಿತು.
- ಮಾನಸ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


