ಯುವಜನ/ಮಕ್ಕಳು

ಡಿಪ್ಲೋಮಾ ಭವಿಷ್ಯ

Published On :

ಪಿ.ಜಿ. ಡಿಪ್ಲೊಮಾ ಇನ್ ಹಾರ್ಟಿಕಲ್ಚರ್ (ತೋಟಗಾರಿಕೆ)
ತೋಟಗಾರಿಕೆ ಕುರಿತು ವಿಶೇಷ ಆಸಕ್ತಿ, ಕಾಳಜಿ ಹೊಂದಿರುವವರು ಈ ಕ್ಷೇತ್ರದಲ್ಲೇ ಬದುಕು ಕಂಡುಕೊಳ್ಳಲು ಬಯಸುವವರಿಗಾಗಿ ಈ ಡಿಪ್ಲೋಮಾ. ಕೃಷಿಕಾಲೇಜುಗಳು ಈ ಪಿ.ಜಿ. ಡಿಪ್ಲೋಮಾ ಶಿಕ್ಷಣ ನೀಡುತ್ತವೆ. ಗಿಡ ನೆಡುವುದು, ಅವುಗಳ ಆರೈಕೆ, ಕಸಿ ಮಾಡುವುದು, ಗಾರ್ಡನ್‌ಗಳ ನಿರ್ಮಾಣ- ಹೀಗೆ ತೋಟಗಾರಿಕೆಗೆ ಸಂಬಂಧಿಸಿದ ಮಾಹಿತಿಯನ್ನು ವೈಜ್ಞಾನಿಕವಾಗಿ ತಿಳಿಸಲಾಗುತ್ತದೆ.

ಅರ್ಹತೆ ಏನು?
ಬಿಎಸ್ಸಿ (ಕೃಷಿ) ಪದವೀಧರರು ಈ ಡಿಪ್ಲೋಮಾ ಕೋರ್ಸ್‌ಗೆ ಅರ್ಜಿ ಸಲ್ಲಿಸಬಹುದು.

ಯಾವ ಕಾಲೇಜು?
ಕಾಲೇಜ್ ಆಫ್ ಹಾರ್ಟಿಕಲ್ಚರ್- ಮೈಸೂರು.
ಕಾಲೇಜ್ ಆಫ್ ಹಾರ್ಟಿಕಲ್ಚರ್- ಮೂಡಿಗೆರೆ.

ಡಿಪ್ಲೋಮಾ ಇನ್ ಮೆಡಿಕಲ್ ಲ್ಯಾಬೊರೇಟರಿ ಟೆಕ್ನಾಲಜಿ
ಇದು ರೋಗಗುರುತಿಸುವಲ್ಲಿ ಪ್ರಮುಖ ಪಾತ್ರವಹಿಸುವ ಲ್ಯಾಬ್‌ಟೆಕ್ನಿಷಿಯನ್‌ಗಳನ್ನು ಸಿದ್ಧಪಡಿಸುವ ಕೋರ್ಸ್. ರಕ್ತ, ಮೂತ್ರ, ಜೀವಕೋಶಗಳನ್ನು ಪರಿಶೀಲಿಸಿ ರೋಗ ಲಕ್ಷಣ ಕುರಿತು ಪಟ್ಟಿಮಾಡುವ ಕೆಲಸ ಲ್ಯಾಬ್‌ಟೆಕ್ನಿಷಿಯನ್‌ಗಳದು.

ಅರ್ಹತೆ ಏನು?
ಪಿಯುಸಿಯಲ್ಲಿ ವಿಜ್ಞಾನ ಶಿಕ್ಷಣ ಪಡೆದವರು ಎರಡು ಅಥವಾ ಮೂರು ವರ್ಷದ ಈ ಡಿಪ್ಲೋಮಾ ಕೋರ್ಸ್‌ಗೆ ಸೇರಬಹುದು. ಆರೋಗ್ಯ ಕ್ಷೇತ್ರಕ್ಕೆ ಸಿಗುತ್ತಿರುವ ಹೆಚ್ಚಿನ ಪ್ರಾಮುಖ್ಯತೆಯಿಂದಾಗಿ ಲ್ಯಾಬ್‌ಟೆಕ್ನಿಷಿಯನ್‌ಗಳಿಗೆ ಬೇಡಿಕೆ ಹೆಚ್ಚಿದೆ.

ಯಾವ ಕಾಲೇಜು?
    ಮಣಿಪಾಲ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್.
    ಗೌತಮ್ ಕಾಲೇಜು, ಬೆಂಗಳೂರು.
    ಬೆಂಗಳೂರು ಮೆಡಿಕಲ್ ಕಾಲೇಜು.
    ಶಿವಮೊಗ್ಗ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್
    
ಟೆಕ್ಸ್‌ಟೈಲ್ ಆ್ಯಂಡ್ ಫ್ಯಾಷನ್ ಡಿಸೈನ್ ಡಿಪ್ಲೋಮಾ
ವಸ್ತ್ರೋದ್ಯಮ ಕ್ಷೇತ್ರ ಬೆಳವಣಿಗೆ ಸಾಧಿಸುತ್ತಿದ್ದಂತೆ ಫ್ಯಾಷನ್ ಡಿಸೈನಿಂಗ್ ಶಿಕ್ಷಣಕ್ಕೆ ಬೇಡಿಕೆ ಹೆಚ್ಚುತ್ತಿದೆ. ಸ್ವತಂತ್ರವಾಗಿ ಅಥವಾ ಕಂಪನಿಗಳಲ್ಲಿ ಫ್ಯಾಷನ್ ಡಿಸೈನರ್‌ಗಳಾಗಿ ಭವಿಷ್ಯ ಕಂಡುಕೊಳ್ಳ ಬಯಸುವವರು ಈ ಕೋರ್ಸ್‌ಗಳಿಗೆ ಸೇರಬಹುದು. ಫ್ಯಾಷನ್ ಡಿಸೈನಿಂಗ್‌ನಲ್ಲಿ ಡಿಪ್ಲೋಮಾ ಮಾಡಿದವರು ಫ್ಯಾಷನ್ ಕೋ- ಆರ್ಡಿನೇಟರ್‌ಗಳು, ಫ್ಯಾಷನ್ ಸಂಸ್ಥೆಗಳಲ್ಲಿ ಸೂಪರ್‌ವೈಸರ್‌ಗಳು, ಪ್ರೊಡಕ್ಷನ್ ಮ್ಯಾನೇಜರ್, ಸ್ವಉದ್ಯೋಗಿಗಳು, ಕ್ವಾಲಿಟಿ ಕಂಟ್ರೋಲರ್‌ಗಳಾಗಿ ದುಡಿಯಬಹುದು.

ಅರ್ಹತೆ ಏನು?
ಪಿಯುಸಿ ಉತ್ತೀರ್ಣವಾಗಿರಬೇಕು.

ಕಾಲೇಜುಗಳು
    ವೋಗ್ ಇನ್ಸ್‌ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ, ಬೆಂಗಳೂರು.
    ಡಬ್ಲ್ಯುಎಲ್‌ಸಿ ಕಾಲೇಜ್ ಇಂಡಿಯಾ, ಹುಬ್ಬಳ್ಳಿ.
    
ಆ್ಯನಿಮೇಷನ್ ಡಿಪ್ಲೊಮಾ
ಆ್ಯನಿಮೇಷನ್ ಹಾಗೂ ಗ್ರಾಫಿಕ್ಸ್ ಕ್ಷೇತ್ರದಲ್ಲಿ ಭವಿಷ್ಯ ಕಂಡುಕೊಳ್ಳಬಯಸುವವರು ಆ್ಯನಿಮೇಷನ್ ಹಾಗೂ ಗ್ರಾಫಿಕ್ಸ್ ಡಿಪ್ಲೋಮಾ ಕೋರ್ಸ್ ಮಾಡಬಹುದು. ಈ ಕೋರ್ಸ್ ಮುಗಿಸಿದ ವಿದ್ಯಾರ್ಥಿಗಳು ಮಾಧ್ಯಮಗಳು, ಸಿನಿಮಾ, ಜಾಹೀರಾತು ಕ್ಷೇತ್ರ, ಕಾರ್ಪೊರೇಟ್ ಕಂಪನಿಗಳಲ್ಲಿ ಆ್ಯನಿಮೇಟರ್‌ಗಳಾಗಿ, 3ಡಿ ಗ್ರಾಫಿಕ್ಸ್ ಡಿಸೈನರ್‌ಗಳಾಗಿ ಬದುಕು ಕಂಡುಕೊಳ್ಳಬಹುದು.

ಅರ್ಹತೆ ಏನು?
ಪಿಯುಸಿ ಆಗಿರಬೇಕು.

ಯಾವ್ಯಾವ ಕಾಲೇಜು?
ಏಷ್ಯನ್ ಇನ್ಸ್‌ಟಿಟ್ಯೂಟ್ ಆಫ್ ಗೇಮಿಂಗ್ ಆ್ಯಂಡ್ ಆ್ಯನಿಮೇಷನ್, ಬೆಂಗಳೂರು.
ಅರೇನಾ ಆ್ಯನಿಮೇಷನ್, ಬೆಂಗಳೂರು.

ಹೋಟೆಲ್/ ಹಾಸ್ಪಿಟಾಲಿಟಿ (ಆತಿಥ್ಯ) ಡಿಪ್ಲೊಮಾ
ಹೋಟೆಲ್ ಉದ್ಯಮ ಕ್ಷೇತ್ರ ವಿಸ್ತರಿಸುತ್ತಿದ್ದಂತೆ ನುರಿತ ನೌಕರರಿಗೆ ಬೇಡಿಕೆಯೂ ಹೆಚ್ಚುತ್ತಿದೆ. ಅದರಲ್ಲೂ ಸ್ಟಾರ್ ಹೋಟೆಲ್‌ಗಳಲ್ಲಿ ಹಾಸ್ಪಿಟಾಲಿಟಿ ಕ್ಷೇತ್ರದಲ್ಲಿ ವಿಶೇಷ ಪರಿಣತಿ ಪಡೆದ ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗಾವಕಾಶಗಳಿವೆ. ಅನೇಕ ಹೋಟೆಲ್‌ಗಳು ಪುಡ್ ಆ್ಯಂಡ್ ಬೆವರೇಜ್ ಪ್ರೊಡಕ್ಷನ್, ಹೋಟೆಲ್ ಹೌಸ್ ಕೀಪಿಂಗ್, ಫ್ರಂಟ್ ಆಫೀಸ್ ಮ್ಯಾನೇಜ್‌ಮೆಂಟ್ ಸೇರಿ ವಿವಿಧ ರೀತಿಯ ಕೋರ್ಸ್‌ಗಳು ಲಭ್ಯ.

ಅರ್ಹತೆ ಏನು?
ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿರಬೇಕು.

ಯಾವ್ಯಾವ ಕಾಲೇಜು?
    ವೆಲ್‌ಕಂ ಗ್ರೂಫ್ ಗ್ರಾಜ್ಯುವೇಟ್ ಸ್ಕೂಲ್ ಹೋಟೆಲ್ ಅಡ್ಮಿನಿಸ್ಟ್ರೇಶನ್, ಮಣಿಪಾಲ್.
    ಫ್ರೆಸಿಡೆನ್ಸಿ ಕಾಲೇಜ್ ಆಫ್ ಹೊಟೇಲ್ ಮ್ಯಾನೇಜ್‌ಮೆಂಟ್, ಬೆಂಗಳೂರು.

ಯೂರೋವಾರ್ಸಿಟಿ ಆರಂಭ
ಯೂರೋ ಕಿಡ್ಸ್ ಸಂಸ್ಥೆಯು ಶಿಕ್ಷಕರಲ್ಲಿ ಬೋಧನಾ ಕೌಶಲ್ಯ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ವಾಸ್ತವ ವಿಶ್ವವಿದ್ಯಾಲಯ 'ಯೂರೋ ವಾರ್ಸಿಟಿ' ಆರಂಭಿಸಿದೆ. ಯೂರೋವಾರ್ಸಿಟಿಯ ಮೊದಲ ಕೋರ್ಸ್ ಡಿಪ್ಲೊಮಾ ಇನ್ ಅರ್ಲಿ ಚೈಲ್ಡ್ ಹುಡ್ ಕೇರ್ ಆ್ಯಂಡ್ ಎಜುಕೇಷನ್ ಆಗಿದೆ. ಮಕ್ಕಳ ಬದುಕನ್ನು ಪೋಷಿಸಿ ರೂಪಿಸುವ ಹೊಣೆ ಹೊತ್ತಿರುವ ಎಲ್ಲಾ ಶಿಕ್ಷಕರಿಗೂ ಇದು ವಿಶಿಷ್ಟ ಕೋರ್ಸ್. ಈ ತರಗತಿ ಪ್ರಸ್ತುತ ಯೂರೋ ಕಿಡ್ಸ್ ಶಿಕ್ಷಕರಿಗೆ ಮಾತ್ರ ಲಭ್ಯವಿದೆ. ಇಲ್ಲಿ ಸಿಗುವ ಯಶಸ್ಸನ್ನು ನೋಡಿಕೊಂಡು ಈ ಕೋರ್ಸ್‌ಗೆ ಎಲ್ಲರಿಗೂ ಪ್ರವೇಶ ಕಲ್ಪಿಸಲಾಗುವುದು ಎನ್ನುತ್ತಾರೆ ಸಂಸ್ಥೆ ಮುಖ್ಯಸ್ಥ ಅಮಿತ್ ಸಿಂಗ್. ಇದು 9 ತಿಂಗಳ ಆನ್‌ಲೈನ್ ಶಿಕ್ಷಣ.  ಶಿಶುಪಾಲನಾ ಶಿಕ್ಷಣ, ಮಕ್ಕಳ ಅಭಿವೃದ್ಧಿ, ಆಡಳಿತ ಪಠ್ಯ ವಿಷಯ ಮತ್ತು ಶೈಶವಾವಸ್ಥೆಯಲ್ಲಿ ಶಿಕ್ಷಣ ಶಾಸ್ತ್ರ ಮತ್ತು ಮಕ್ಕಳಿಗೆ ಪೌಷ್ಟಿಕತೆ ಕುರಿತು ಶಿಕ್ಷಣ ನೀಡಲಾಗುತ್ತದೆ. ಮಾಹಿತಿಗೆ ಪ್ರಜ್ಞಾ ಗಾಯಕ್‌ವಾಡ್-  ಮೊ. 9819040215, pgaikwad@imprimispr.com  ಸಂಪರ್ಕಿಸಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.