ಶಾಶ್ವತ ಸ್ನೇಹ

ಅದೊಂದು ಕಾಲೇಜು ಕ್ಯಾಂಪಸ್. ಅಲ್ಲಿನ ದಢೂತಿ ಹುಡುಗಿಯ ಹೆಸರು ಗಿಪ್ಪಿ. ಈಕೆಗಿರುವುದು ಒಬ್ಬಳೇ ಗೆಳತಿ. ಇಂಥ ಸಂದರ್ಭದಲ್ಲಿ ಕಾಲೇಜಿನ ಬ್ರೈಟ್ ಸ್ಟೂಡೆಂಟ್‌ವೊಬ್ಬಳು ಈಕೆಯನ್ನು ಕ್ಯಾಂಪಸ್ ಎಲೆಕ್ಷನ್‌ಗೆ ನಿಲ್ಲುವಂತೆ ಸವಾಲೆಸೆಯುತ್ತಾಳೆ. ಎಲೆಕ್ಷನ್‌ಗೆ ನಿಂತ ಗಿಪ್ಪಿ ಸಹಜ ನಡವಳಿಕೆಯಿಂದ ಎಲ್ಲರ ಮನಗೆದ್ದು ಗೆಲ್ಲುತ್ತಾಳೆ. ಆದರೆ, ಎಲೆಕ್ಷನ್ ಗೆದ್ದ ಬಳಿಕ ಗಿಪ್ಪಿ ಸದಾ ಆಕೆಯ ಜತೆಗಿರುತ್ತಿದ್ದ ಏಕೈಕ ಸ್ನೇಹಿತೆಯನ್ನು ಎಲ್ಲರೆದುರು ಹೀಯಾಳಿಸಲು ಮುಂದಾಗುತ್ತಾಳೆ. ಕೊನೆಗೆ ಗೆಳೆತನದ ಮಹತ್ವ ಅರಿವಾಗಿ ಎಲ್ಲರೆದುರು ಕ್ಷಮೆ ಕೇಳುತ್ತಾಳೆ...
ಇದು ಇತ್ತೀಚೆಗೆ ತೆರೆಕಂಡ ಬಾಲಿವುಡ್‌ನ 'ಗಿಪ್ಪಿ' ಚಿತ್ರದ ತುಣುಕು. ಈ ಚಿತ್ರ ಕ್ಯಾಂಪಸ್‌ನೊಳಗಿನ ಫ್ರೆಂಡ್‌ಶಿಪ್‌ನ ಮೌಲ್ಯವನ್ನು ಎತ್ತಿ ತೋರಿಸುತ್ತದೆ.
ಹೌದು. ಕಾಲೇಜು ಗೆಳೆತನಕ್ಕೆ ಇರುವ ಮಹತ್ವವೇ ಅಂಥದ್ದು. ಬಹುಶಃ ಕ್ಯಾಂಪಸ್‌ನೊಳಗೆ ಒಬ್ಬಂಟಿಯಾಗಿರುವವರನ್ನು ಹುಡುಕುವುದು ತುಂಬಾ ಕಷ್ಟ. ತರಗತಿಯಲ್ಲಿ, ಹಾಸ್ಟೆಲ್‌ನಲ್ಲಿ, ಚರ್ಚೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಎನ್‌ಎಸ್‌ಎಸ್ ಕ್ಯಾಂಪ್‌ಗಳಲ್ಲಿ... ಹೀಗೆ ಸ್ನೇಹವೆಂಬ ಮಧುರ ಬಾಂಧವ್ಯ ಅದು ಹೇಗೋ ಚಿಗುರೊಡೆದು ಬಿಡುತ್ತದೆ. ಆದರೆ, ಈ ಬಾಂಧವ್ಯ ಹುಟ್ಟಿದಷ್ಟೇ ಬೇಗ ಸತ್ತುಹೋಗುವುದು ಜಾಸ್ತಿ. ಇಲ್ಲಿ ಗೆಳೆಯರು ಅನೇಕರು ಸಿಗುತ್ತಾರೆ. ಆದರೆ, ಅದೃಷ್ಟವಂತರಿಗಷ್ಟೇ ನಿಜವಾದ ಸ್ನೇಹಿತರು ಸಿಗುತ್ತಾರೆ. ಅವರು ಕ್ಯಾಂಪಸ್‌ನೊಳಗಷ್ಟೇ ಅಲ್ಲ, ಬದುಕಿನುದ್ದಕ್ಕೂ ನಮ್ಮ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಾರೆ ಎನ್ನುತ್ತಾರೆ ವಿದ್ಯಾರ್ಥಿ ಗಣೇಶ್ ಎಂ. ಕಾಮತ್.
ಗೆಳೆತನ ಶಾಶ್ವತಕ್ಕೆ ಟಿಪ್ಸ್
- ಫ್ರೆಂಡ್ಸ್ ಮಧ್ಯ ಸಣ್ಣಪುಟ್ಟ ಜಗಳ, ಮನಸ್ತಾಪ ಮಾಮೂಲಿ. ಅವುಗಳನ್ನು ಆರಂಭದಲ್ಲೇ ಚಿವುಟಿ ಹಾಕಿ. ಇವು ಅತಿರೇಕಕ್ಕೆ ಹೋಗದಂತೆ ನೋಡಿಕೊಳ್ಳಿ. ತಪ್ಪು ಯಾರದ್ದೇ ಇರಲಿ, ಪರಸ್ಪರ ಕ್ಷಮೆ ಕೇಳಿಕೊಳ್ಳಿ. ತಪ್ಪು ಮಾಡಿದವರೇ ಕ್ಷಮೆ ಕೇಳಬೇಕು ಎಂಬ ಹಠ ಬಿಡಿ.
- ಪ್ರತಿಯೊಂದು ಕಾರ್ಯದಲ್ಲೂ ತಪ್ಪು ಹುಡುಕಲು ಹೋಗಬೇಡಿ. ಸ್ನೇಹಿತರ ಉತ್ತಮ ಕಾರ್ಯಕ್ಕೆ ಬೆಂಬಲ ನೀಡಿ.
- ಗೆಳೆಯ ಅಥವಾ ಗೆಳತಿ ಸಂಕಷ್ಟದಲ್ಲಿದ್ದಾಗ ಕೇಳದೇ ನೆರವಾಗಿ. ಅವರಿಗೆ ಮಾನಸಿಕ ಧೈರ್ಯ ತುಂಬಿ. ದಾರಿ ತಪ್ಪಿದಾಗ ತಿದ್ದಿ. ಇದರಿಂದ ನಿಮ್ಮ ಬಾಂಧವ್ಯ ಇನ್ನಷ್ಟು ಸದೃಢವಾಗುತ್ತದೆ.
- ಫ್ರೆಂಡ್‌ಶಿಪ್ ಮೋಜು ಮಸ್ತಿಗಷ್ಟೇ ಸೀಮಿತವಲ್ಲ. ಕಾಲೇಜು ಜೀವನ ನಿಮ್ಮ ಭವಿಷ್ಯದ ಭದ್ರತೆಗೂ ಬುನಾದಿ. ಪಾಠದಲ್ಲೂ ಪರಸ್ಪರ ತೊಡಗಿಸಿಕೊಳ್ಳಿ.
- ಒಬ್ಬರಿಗಿಂತ ಹೆಚ್ಚು ಫ್ರೆಂಡ್‌ಗಳಿದ್ದರೆ ಎಲ್ಲರನ್ನೂ ಸಮಾನವಾಗಿ ಕಾಣಿ, ಎಲ್ಲರಿಗೂ ಒಂದೇ ರೀತಿಯ ಗೌರವ ನೀಡಿ. ಒಬ್ಬರ ಬಳಿ ಇನ್ನೊಬ್ಬರನ್ನು ತೆಗಳುವ ಕೆಲಸ ಮಾಡಬೇಡಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


