ಯುವಜನ/ಮಕ್ಕಳು

ದುರಾಶೆಯ ಫಲ

ಅನೇಕ ವರುಷ ಹಿಂದೆ... ಚಿಕ್ಕಹಳ್ಳಿಯೊಂದರಲ್ಲಿ ಬೀರಣ್ಣನೆಂಬ ಕಡು ಬಡವನಿದ್ದ....

ದುರಾಶೆಯ ಫಲ
Published On :

ಅನೇಕ ವರುಷ ಹಿಂದೆ... ಚಿಕ್ಕಹಳ್ಳಿಯೊಂದರಲ್ಲಿ ಬೀರಣ್ಣನೆಂಬ ಕಡು ಬಡವನಿದ್ದ. ಅನಾಥನಾದ ಆತನಿಗೆ ದುಡಿದು ಕೂಲಿ ಮಾಡಿ ಬಂದ ಹಣದಲ್ಲಿ ಹೊಟ್ಟೆ ಹೊರೆಯಬೇಕಾಗಿತ್ತು. ಹೀಗಾಗಿ... ಈ ಬಡತನ ಸಂಕಷ್ಟದಿಂದ ಪಾರಾಗಲು ಅಡವಿಗೆ ಹೋಗಿ... ದೇವರ ಕುರಿತು ಘೋರ ತಪಸ್ಸನ್ನಾಚರಿಸಿದ.
ಬೀರಣ್ಣನ ತಪಸ್ಸು ಆ ಭಕ್ತಪ್ರಿಯ ಭಗವಂತನಿಗೆ ತಲುಪಿತು. ಆ ಮಹಾದೇವ "ಥಟ್ಟನೆ" ಬೀರಣ್ಣನ ಮುಂದೆ ಪ್ರತ್ಯಕ್ಷನಾಗಿ - "ಭಕ್ತ! ನಿನ್ನ ನಿಶ್ಚಲ ಭಕ್ತಿಗೆ ಒಲಿದಿರುವೆ... ನಿನಗೇನು ವರಬೇಕು ಕೇಳಿಕೋ"... ಎಂದು ನಸುನಗುತ್ತ ಪರಮಾತ್ಮನೆಂದಾಗ... ಬೀರಣ್ಣ ಮೆಲ್ಲನೆ ಕಣ್ಣು ತೆರೆದೂ ನೋಡ್ತಾನೆ... ಭಕ್ತಪ್ರಿಯ ಮಹಾದೇವ! ಅತೀವ ಸಂತಸವಾಯ್ತು. ತನ್ನ ತಪಸ್ಸು ವ್ಯರ್ಥವಾಗಲಿಲ್ಲವೆಂದು ಹರುಷಗೊಂಡ. ಭಕ್ತಿಯಿಂದ ಶಿರಬಾಗಿ ಕೈ ಮುಗಿದು "ಮಹಾದೇವ! ಕಡು ಬಡತನದಿಂದ ಬಳಲಿ ಬೆಂಡಾಗಿರುವೆ" ನಂಗೂ ಧನಿಕನಾಗಬೇಕೂಂತ ಮಹಾದಾಶೆ..." ಎಂದು ಕೋರಿಕೆ ಮಂಡಿಸಿದ.
ಭಕ್ತಪ್ರಿಯ ಭಗವಂತನೆಂದ- "ಸರಿ... ನಿನ್ನನ್ನೂ ಒಬ್ಬ ರಾಜನನ್ನಾಗಿ ಮಾಡ್ತೇನೆ! ಒಪ್ಪಿಗೆಯೇ?" ಎಂದಾಗ ಬೀರಣ್ಣ ಅದಕ್ಕೊಪ್ಪದೇ- "ಬೇಡಾ... ಮಹಾದೇವ! ಒಂದೇ ಆಶೆ... ಅದೆನ್ನೂಂದ್ರೇ! ನಾನು ಮುಟ್ಟಿದ್ದೆಲ್ಲಾ ಚಿನ್ನವಾಗುವಂಥಾ ವರ ದಯಪಾಲಿಸು ದೇವಾ..." ಎಂದು ಬೇಡಿಕೊಂಡಾಗ ಕ್ಷಣ ನಸು ನಕ್ಕು ಭಗವಂತ- "ತಥಾಸ್ತು..." ಎಂದು ವರ ದಯಪಾಲಿಸಿ ಮಾಯವಾದ.
ಇತ್ತ ಬೀರಣ್ಣನಿಗೆ ಎಲ್ಲಿಲ್ಲದ ಸಂತಸದಿಂದ ಹಿಗ್ಗಿ ಹೀರೆಕಾಯಿಯಾದ. ಮರಳಿ ಗುಡಿಸಲಿಗೆ ಬಂದ. "ಮುಟ್ಟಿದ್ದೆಲ್ಲ ಚಿನ್ನವಾಗುವ ವರ ಪಡೆದುದ್ದನ್ನು ಪರೀಕ್ಷಿಸುವ ಮನಸ್ಸಾಯಿತು. ಒಂದು ಲೋಟವನ್ನು ಮುಟ್ಟಿದ, ಅರೆ...ಕ್ಷಣದಲ್ಲೇ ಅದು ಚಿನ್ನದ್ದಾಯಿತು. ಬಿಂದಿಗೆಯೊಂದನ್ನು ಮುಟ್ಟಿದ ಅದೂ ಮರುಕ್ಷಣದಲ್ಲೇ ಅಪ್ಪಟ ಸ್ವರ್ಣದ್ದಾಯಿತು. ಬೀರಣ್ಣನ ಹರುಷಕ್ಕೆ ಪಾರವೇ ಇಲ್ಲದಂತಾಯ್ತು. ತನ್ನಂಥಾ ಧನಿಕರಾರೂ ಇನ್ನಿಲ್ಲವೆಂದೂ ಬೀಗಿದ. ಆಗ ಆತನಿಗೆ ಹಸಿವೆಯಾಗತೊಡಗಿತು, ಅನ್ನವನ್ನು ತಿನ್ನಲು ಕೈಯಲ್ಲಿ ಮುಟ್ಟಿದ್ದೇ ತಡ ಅದೂ ಚಿನ್ನದಾಯ್ತು. ಚಿನ್ನವನ್ನು ತಿನ್ನಲಾದೀತೇ? ಹಸಿವೆಯಿಂದ ಬಳಲಿ ಬೆಂಡಾಗಿ ಪ್ರಾಣಬಿಟ್ಟ.

- ಶಿವುಕುಮಾರ, ಸುರಪೂರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.