ಯುವಜನ/ಮಕ್ಕಳು

ಪ್ರವೇಶ ಪರೀಕ್ಷೆ

ಪ್ರವೇಶ ಪರೀಕ್ಷೆ
Published On :

ಈಗ ಪ್ರತಿಯೊಂದು ಕೋರ್ಸು ಪ್ರವೇಶಕ್ಕೆ, ಉದ್ಯೋಗಕ್ಕೆ ಪ್ರವೇಶ ಪರೀಕ್ಷೆ ಅನ್ನುವುದು ಮಾಮೂಲಿಯಾಗಿದೆ. ಈ ರೀತಿಯ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ತೋರುವುದು ಹೇಗೆ? ಇಲ್ಲಿದೆ ಸರಳ ಸೂತ್ರಗಳು...
ಯಾವುದೇ ಪ್ರವೇಶ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದೀರಿ ಅಂತಾದರೆ ಈ ಮೂರು ವಿಚಾರದ ಕುರಿತು ಮುಖ್ಯವಾಗಿ ಗಮನವಿಡಿ.

1. ಸಮಯದ ನಿರ್ವಹಣೆ
ಪರೀಕ್ಷೆಗೆ ಸಿದ್ಧತೆ ನಡೆಸುವ ಮೊದಲು ವೇಳಾಪಟ್ಟಿ ಸಿದ್ಧಪಡಿಸಿಕೊಳ್ಳಿ. ದಿನದ ಅವಧಿಯನ್ನು ಓದು ಮತ್ತು ಇತರೆ ಚಟುವಟಿಕೆಗಾಗಿ ಎಂದು ವಿಂಗಡಿಸಿಕೊಳ್ಳಿ. ಮೋಜು, ಮಸ್ತಿಗೆ ಕಡಿಮೆ ಸಮಯಾವಕಾಶ ಇರುವಂತೆ ನೋಡಿಕೊಳ್ಳಿ. ರಾತ್ರಿ ಬೇಗ ಮಲಗಿ, ಬೆಳಗ್ಗೆ ಬೇಗ ಓದಿ. ಕಾಡು ಹರಟೆಯಿಂದ ದೂರ ಇರಿ.

2. ಪುನಾ ಅಧ್ಯಯನ
ನೀವು ಓದಿದ್ದನ್ನು ಮತ್ತೆ ಮತ್ತೆ ಅಧ್ಯಯನ ಮಾಡುತ್ತಿರಿ. ಇಲ್ಲದಿದ್ದರೆ ತಿಂಗಳ ಹಿಂದೆ ಓದಿದ್ದು ಮರೆತು ಹೋಗಬಹುದು.

3. ಶಿಕ್ಷಕರು, ತಜ್ಞರ ನೆರವು
ನೀವು ತೆಗೆದುಕೊಂಡಿರುವ ಪರೀಕ್ಷೆ ಕುರಿತು ನಿಮ್ಮ ಕಾಲೇಜು ಅಥವಾ ಆ ಕೋರ್ಸಿಗೆ ಸಂಬಂಧಿಸಿದ ಶಿಕ್ಷಕರ ನೆರವು ಪಡೆಯಿರಿ. ಇದು ಪರೀಕ್ಷೆ ಎದುರಿಸಲು ನಿಮಗೆ ನೆರವು ನೀಡುತ್ತದೆ. ಇದರ ಜತೆಗೆ, ಇನ್ನೂ ಕೆಲವು ಗಮನದಲ್ಲಿಟ್ಟುಕೊಳ್ಳಬೇಕಾದ ಮುಖ್ಯ ಅಂಶಗಳಿವೆ...

ಅಂತರ್ಜಾಲ ಬಳಕೆ
ನಾವಿರುವುದು ಇಂಟರ್ನೆಟ್ ಜಗತ್ತಿನಲ್ಲಿ. ಇಂಟರ್ನೆಟ್ ಅನ್ನುವುದು ಮಾಹಿತಿಯ ಆಗರ. ಯಾವುದೇ ವಿಚಾರವಾದರೂ ಸರಿ ಇಲ್ಲಿ ಮಾಹಿತಿ ಸಿಕ್ಕೇ ಸಿಗುತ್ತದೆ. ಹಾಗಾಗಿ ಪ್ರವೇಶ ಪರೀಕ್ಷೆ ಸಿದ್ಧತೆಗೆ ತೊಡಗಿದ್ದರೆ ಇಂಟರ್ನೆಟ್ ಅನ್ನು ಬಳಸಿಕೊಳ್ಳಬಹುದು. ಪ್ರವೇಶ ಪರೀಕ್ಷೆಗೆ ಸಂಬಂಧಿಸಿ ಆನ್‌ಲೈನ್ ತರಬೇತಿ, ಪರೀಕ್ಷೆಗಳ ಸೌಲಭ್ಯಗಳೂ ಇವೆ. ಇದರ ಉಪಯೋಗವನ್ನೂ ಪಡೆದುಕೊಳ್ಳಬಹುದು. ಈ ಮೂಲಕ ನೀವು ಎಲ್ಲಿ ಎಡವುತ್ತಿದ್ದೀರಿ, ಯಾವ ವಿಷಯದಲ್ಲಿ ನಿಮ್ಮ ಜ್ಞಾನ ಕಡಿಮೆ ಇದೆ ಎನ್ನುವುದನ್ನು ಅರಿತುಕೊಳ್ಳಬಹುದು.

ಕೋಚಿಂಗ್ ಸೆಂಟರ್
ಸಾಧ್ಯವಿದ್ದರೆ ಇಂಥ ಕೋಚಿಂಗ್ ಸೆಂಟರ್‌ಗಳಿಗೆ ಸೇರಿಕೊಳ್ಳಿ. ಇಲ್ಲಿ ಸಿಗುವ ತರಬೇತಿ, ತಜ್ಞರ ಬೆಂಬಲ ನೀವು ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಲು ನೆರವು ನೀಡುತ್ತದೆ.

ನಿಮ್ಮ ಬಗ್ಗೆ ವಿಶ್ವಾಸ
ನಿಮ್ಮ ಸಾಮರ್ಥ್ಯದ ಕುರಿತು ನಿಮಗೇ ನಂಬಿಕೆ ಇಲ್ಲದಿದ್ದರೆ ನೀವು ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ. ಮೊದಲು ನಿಮ್ಮ ಕುರಿತು ವಿಶ್ವಾಸ ಇಟ್ಟುಕೊಳ್ಳಿ. ನಾನು ಉತ್ತಮ ಅಂಕಗಳಿಸುತ್ತೇನೆ ಎನ್ನುವ ನಂಬಿಕೆ ಬೆಳೆಸಿಕೊಳ್ಳಿ. ನಂಬಿಕೆ ಅನ್ನುವುದು ನಮ್ಮ ಬದುಕನ್ನು ಮುನ್ನಡೆಸುವ ಪ್ರೇರಕ ಶಕ್ತಿ. ಈ ಒಂದು ಶಕ್ತಿ ಇದ್ದರೆ ಯಾವುದೇ ಸಾಧನೆ ಮಾಡುವುದು ಕಷ್ಟವಲ್ಲ. ಆದರೆ, ಅತಿಯಾದ ಆತ್ಮವಿಶ್ವಾಸ ಬೇಡ.

ಮೆದುಳಿಗೆ ವ್ಯಾಯಾಮ
ಮೆದುಳು ಚುರುಕಾಗಿದ್ದಾಗ ಯಾವುದೇ ವಿಚಾರವನ್ನು ಗ್ರಹಿಸಿಕೊಳ್ಳುವುದು ಸುಲಭ. ಕೌಶಲ್ಯ ಪರೀಕ್ಷೆಯಲ್ಲಿ ಉತ್ತರಗಳನ್ನು ಶೀಘ್ರವಾಗಿ ಗ್ರಹಿಸಲು ಇದು ನೆರವಾಗುತ್ತದೆ. ಹಾಗಾಗಿ ಪರೀಕ್ಷೆ ವೇಳೆ ನಿಯಮಿತ ವ್ಯಾಯಾಮ, ಸರಿಯಾದ ಪ್ರಮಾಣದಲ್ಲಿ ನಿದ್ದೆ ಅತ್ಯಗತ್ಯ. ಅಲ್ಲದೆ, ಪರೀಕ್ಷೆ ಅವಧಿಯಲ್ಲಿ ಆಲ್ಕೋಹಾಲ್, ಸಿಗರೇಟ್‌ನಿಂದದೂರವೇ ಇರಿ. ಯೋಗ, ಧ್ಯಾನದಲ್ಲಿ ತೊಡಗಿಕೊಳ್ಳಿ.

- ಮಂಜುನಾಥ್ ಎಸ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.