ಯುವಜನ/ಮಕ್ಕಳು

ಪ್ರೆಶರ್ ಪೀಳಿಗೆ

ಮಕ್ಕಳಿಗೆ ಬಾಲ್ಯದಲ್ಲೇ ಒತ್ತಡ ನಿರ್ವಹಣೆಗೆ ಸಂಬಂಧಿಸಿದ ಶಿಕ್ಷಣವನ್ನು ನೀಡದೇ ಹೋದರೆ...

ಪ್ರೆಶರ್ ಪೀಳಿಗೆ
Published On :

ಹೆಂಡತಿಯು ತನ್ನ ಅಂತಧರ್ಮೀಯ ಮದುವೆಯ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಹಾಕಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಟೆಕಿ ಗಂಡ, ಚಾಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾಗ ಅಪ್ಪ ಮೊಬೈಲ್ ಕಿತ್ತುಕೊಂಡ ಎಂಬ ಒಂದೇ ಒಂದು ಕಾರಣಕ್ಕೆ ವಿಷಸೇವಿಸಿದ 10ನೇ ತರಗತಿ ಹುಡುಗಿ!

ಇಂಥ ಹತ್ತು ಹಲವು ಉದಾಹರಣೆಗಳು ನಿತ್ಯ ಪತ್ರಿಕೆಯಲ್ಲಿ ಕಣ್ಣಿಗೆ ಬೀಳುತ್ತಲೇ ಇರುತ್ತವೆ. ಸಣ್ಣ ಸಣ್ಣ ವಿಚಾರಗಳಿಗೆ ಯುವಜನತೆ ಬದುಕನ್ನೇ ಕಳೆದುಕೊಳ್ಳುವಂಥ ಗಂಭೀರ ನಿರ್ಧಾರಕ್ಕೆ ಮುಂದಾಗುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ಏನು?  'ಒತ್ತಡ' ಎನ್ನುತ್ತಾರೆ ಮನೋವಿಜ್ಞಾನಿಗಳು. ಮಕ್ಕಳಿಗೆ ಬಾಲ್ಯದಲ್ಲೇ ಒತ್ತಡ ನಿರ್ವಹಣೆಗೆ ಸಂಬಂಧಿಸಿದ ಶಿಕ್ಷಣವನ್ನು ನೀಡದೇ ಹೋದರೆ ಸಣ್ಣಸಣ್ಣ ಸಮಸ್ಯೆಗಳಿಗೂ ತಲೆಕೆಡಿಸಿಕೊಂಡು ಅದರಿಂದಾಗುವ ಒತ್ತಡದಿಂದ ಹೊರಬರಲಾಗದೆ ಒದ್ದಾಡುತ್ತಾರೆ. ಕೊನೆಗೊಮ್ಮೆ ಗಂಭೀರ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ ಎನ್ನುವುದು ಡಾ. ರಾಜಶೇಖರನ್ ಅನಿಸಿಕೆ.

ಒತ್ತಡಕ್ಕೇನು ಕಾರಣ?
ಯುವಜನರಲ್ಲಿ ಹೆಚ್ಚುತ್ತಿರುವ ಒತ್ತಡಕ್ಕೆ ಮುಖ್ಯ ಕಾರಣ ವಿಭಕ್ತ ಕುಟುಂಬ. ನಗರಗಳಲ್ಲಿ ವಾಸಿಸುವ ಬಹುತೇಕ ಸಣ್ಣ ಕುಟುಂಬಗಳಲ್ಲಿ ತಂದೆ- ತಾಯಿ ಇಬ್ಬರೂ ಕೆಲಸಕ್ಕೆ ಹೋಗುತ್ತಾರೆ. ಇಂಥ ಪರಿಸ್ಥಿತಿಯಲ್ಲಿ ಮಕ್ಕಳು ತಮ್ಮ ಕಷ್ಟ- ಸುಖ ಹೇಳಿಕೊಳ್ಳಲು ಇನ್ನೊಬ್ಬರ ಮೇಲೆ ಅವಲಂಬಿತರಾಗಿರುತ್ತಾರೆ. ಒಂದು ವೇಳೆ ಅವರು ತಿರಸ್ಕಾರದಿಂದ ಕಂಡರೆ ಅಥವಾ ಅವರಿಂದ ದೂರ ಇಡುವ ಪ್ರಯತ್ನಗಳು ನಡೆದರೆ ಅದನ್ನು ಸಹಿಸಿಕೊಳ್ಳುವಷ್ಟು ಮಾನಸಿಕ ಸಾಮರ್ಥ್ಯ ಅವರಲ್ಲಿರುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಅವರು ಬಹುಬೇಗ ಒತ್ತಡಕ್ಕೆ ಸಿಲುಕುತ್ತಾರೆ. ಆತ್ಮಹತ್ಯೆಯಂಥ ಗಂಭೀರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎನ್ನುತ್ತಾರೆ ಮನಃಶಾಸ್ತ್ರಜ್ಞೆ ಶಿಖಾ ಡೇ.

ತಂತ್ರಜ್ಞಾನ ಸೃಷ್ಟಿ
ನಗರ ಜೀವನ ಶೈಲಿಯಿಂದಾಗಿ ಪೋಷಕರು- ಮಕ್ಕಳ ನಡುವಿನ ಅಂತರ ಹೆಚ್ಚುತ್ತಿದೆ. ತಾಯಿ- ಮಕ್ಕಳ ಬಾಂಧವ್ಯ ಯಾಂತ್ರಿಕವಾಗಿದೆ. ಮೊಬೈಲ್, ಇಂಟರ್ನೆಟ್‌ನಂಥ ಅತ್ಯಾಧುನಿಕ ಸಂವಹನ ತಂತ್ರಜ್ಞಾನಗಳಿದ್ದರೂ ಪೋಷಕರು ಮತ್ತು ಮಕ್ಕಳ ನಡುವೆ ಸರಿಯಾದ ಸಂವಹನವೇ ನಡೆಯುತ್ತಿಲ್ಲ. ಇದರಿಂದ ಮಕ್ಕಳು ಪೋಷಕರನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲವಾಗುತ್ತಾರೆ. ಪ್ರೇಮಪ್ರಕರಣಗಳಲ್ಲಿ ಪೋಷಕರು ತಮ್ಮ ಒಳಿತಿಗಾಗಿ ಬುದ್ಧಿ ಹೇಳುತ್ತಿದ್ದಾರೆ ಎನ್ನುವುದನ್ನು ಅರಿತುಕೊಳ್ಳುವಲ್ಲಿ ವಿಫಲವಾಗುತ್ತಾರೆ. <

ಯಾಕೀ ಒತ್ತಡ?

  •     ಪ್ರೇಮ ವೈಫಲ್ಯ.
  •     ಸಂಗಾತಿ ಜತೆಗೆ ಹೊಂದಾಣಿಕೆಯ ಕೊರತೆ.
  •     ಪೋಷಕರ ಜತೆಗೆ ಮಿತಿ ಮೀರಿದ ವಾಗ್ವಾದ.
  •     ಸಹೋದರ- ಸಹೋದರಿ ಜತೆಗೆ ಜಗಳ.
  •     ಪೋಷಕರ ನಡುವಿನ ವಾಗ್ವಾದ.
  •     ಪೋಷಕರ ಹಣಕಾಸು ಸ್ಥಿತಿಗತಿಯಲ್ಲಿನ ಬದಲಾವಣೆ.
  •     ಸಹಪಾಠಿಗಳ ಜತೆಗಿನ ಮನಸ್ತಾಪ, ಜಗಳ.
- ಮಂಜುನಾಥ ಎಸ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.