ಒತ್ತಡದಿಂದ ಮುಕ್ತಿ

ನಿಮ್ಮ ಮೆದುಳು ಒಂದು ದಿನದ ಮಟ್ಟಿಗೆ ಕೈ ಕೊಟ್ಟರೆ ಹೇಗಿರುತ್ತೆ? ಒಂದು ಕ್ಷಣ ಯೋಚಿಸಿ ನೋಡಿ... ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲವಲ್ಲಾ?
ನಿತ್ಯ ಮನೆ, ಕಚೇರಿ, ಕಾಲೇಜು... ಹೀಗೆ ಎಲ್ಲಾ ಕಡೆ ಒಂದಲ್ಲಾ ಒಂದು ಪಾತ್ರ ನಿರ್ವಹಿಸುವ ನೀವು ಮೆದುಳಿನ ಆರೋಗ್ಯದ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ಆತ್ಮಹತ್ಯೆಯಲ್ಲಿ 15ರಿಂದ 29 ವಯಸ್ಸಿನವರು ಹೇಗೆ ಮುಂದಿದ್ದಾರೆಯೋ ಅದೇ ರೀತಿ ಮಾನಸಿಕ ಒತ್ತಡದಲ್ಲೂ ಈ ವಯೋವಾನದವರ ಸಂಖ್ಯೆ ಮುಂದಿದೆ. ಈ ವಯಸ್ಸಿನ ಶೇ. 30- 40 ಮಂದಿ ಮಾನಸಿಕ ಒತ್ತಡದಿಂದ ಬಳಲುತ್ತಿದ್ದಾರೆ ಎನ್ನುತ್ತದೆ ಅಂಕಿ- ಅಂಶಗಳು. ವಿಪರೀತ ಒತ್ತಡದಿಂದಾಗಿ ಯಂತ್ರೋಪಕರಣಗಳು ಹೇಗೆ ಕೈಕೊಡುತ್ತವೆಯೋ ಅದೇ ರೀತಿ ಒಂದಲ್ಲಾ ಒಂದು ಬಾರಿ ಮನುಷ್ಯನ ಮೆದುಳೂ ಕೆಟ್ಟು ನಿಲ್ಲುವುದುಂಟು. ಎಷ್ಟೋ ಬಾರಿ ಇದಕ್ಕೆ ಸಣ್ಣ ಸಣ್ಣ ಸಮಸ್ಯೆಗಳೂ ಕಾರಣವಾಗಬಹುದು. ಒತ್ತಡ, ಬದಲಾದ ಆಹಾರ ಪದ್ಧತಿಯಿಂದಾಗಿ ಬಹುತೇಕ ಯುವಜನರು ಇಂದು ಮಾನಸಿಕ ಸಮತೋಲನ ಕಳೆದುಕೊಳ್ಳುತ್ತಿದ್ದಾರೆ. ಮೆದುಳಿನ ಆರೋಗ್ಯ ಹಾಳು ಮಾಡುತ್ತಿದ್ದಾರೆ. ಮೆದುಳು ಕಂಪ್ಯೂಟರ್ ಇದ್ದಂತೆ ಅದಕ್ಕೆ ಒತ್ತಡವೆಂಬ ವೈರಸ್ ಅಂಟಿಕೊಂಡರೆ ಮುಗಿದೇ ಹೋಯ್ತು. ಹೀಗಾಗಿ ಮೆದುಳನ್ನು ಈ ರೀತಿಯ ವೈರಸ್‌ನಿಂದ ರಕ್ಷಿಸಲು ಜೀವನ ಶೈಲಿಯಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಳ್ಳುವುದು ಅತ್ಯಗತ್ಯ.
ಏನು ಮಾಡಬಹುದು?
- ವ್ಯಾಯಾಮ ದೇಹಕ್ಕಷ್ಟೇ ಅಲ್ಲ ಮೆದುಳಿಗೂ ಮುಖ್ಯ. ವಾರದಲ್ಲಿ ಕಡಿಮೆಯೆಂದರೆ ಮೂರು ದಿನವಾದರೂ ಅರ್ಧ ಗಂಟೆ ವ್ಯಾಯಾಮ ಮಾಡಿ. ಇದು ನಿಮ್ಮ ಮೆದುಳನ್ನು ಆರೋಗ್ಯವಾಗಿಡುತ್ತದೆ.
- ಮೆದುಳಿನ ಸಾಮರ್ಥ್ಯ ವೃದ್ಧಿಸಲು ಅದಕ್ಕೆ ಸ್ವಲ್ಪ ಕೆಲಸ ಕೊಡಿ. ಲೆಕ್ಕ, ಸುಡೊಕು, ಕ್ವಿಝ್, ಚೆಸ್‌ನಂಥ ಆಟ ಆಡಿ, ಸವಾಲೊಡ್ಡಿ.
- ಬಹುತೇಕ ಯುವ ಮನಸ್ಸುಗಳು ಜಂಕ್‌ಫುಡ್‌ಗಳಿಗೆ ಮನಸೋಲುತ್ತವೆ. ಹೆಚ್ಚು ಆಹಾರ ಮತ್ತು ಕಡಿಮೆ ಆಹಾರ ಇವೆರಡೂ ಮೆದಳಿನ ಆರೋಗ್ಯ ಕೆಡಿಸುತ್ತದೆ. ಹೀಗಾಗಿ ಆಹಾರದಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ಅತಿ ಅಗತ್ಯ. ಹೆಚ್ಚು ಕ್ಯಾಲೋರಿ ತುಂಬಿರುವ ಅಹಾರ, ಜಂಕ್ ಫುಡ್‌ಗಳು ನಿಮ್ಮ ದೇಹ ಸೌಂದರ್ಯ ಮಾತ್ರವಲ್ಲ ಮೆದುಳಿಗೂ ಹಾನಿಕಾರಕ. ಟೈಮ್‌ಪಾಸ್‌ಗಾಗಿ ನೀವು ಸೇದುವ ಸಿಗರೇಟ್, ತೆಗೆದುಕೊಳ್ಳುವ ಅಲ್ಕೋಹಾಲ್‌ನಿಂದ ಅಪಾಯ ಇದೆ ಎನ್ನುವುದರ ಕುರಿತು ಗಮನವಿರಲಿ.
- ಮೆದುಳು ಸುಸ್ಥಿತಿಯಲ್ಲಿರಬೇಕಾದರೆ ದಿನಕ್ಕೆ ಕನಿಷ್ಠ 7-8 ಗಂಟೆ ನಿದ್ದೆ ಮಾಡಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


