ಯುವಜನ/ಮಕ್ಕಳು

ಸ್ನೇಹ ಸಂದೇಶ

ಸ್ನೇಹ ಸಂದೇಶ
Published On :

ಫೇಸ್‌ಬುಕ್‌ನಂತೆ ಮೊಬೈಲ್‌ಗಳು ಮನಸ್ಸನ್ನು ಬೆಸೆಯುವುದಷ್ಟೇ ಅಲ್ಲ. ಅನೇಕ ಬಾರಿ ಮನೆ ಮುರಿದದ್ದೂ ಇದೆ. ಅದೇ ರೀತಿ ಫೇಸ್‌ಬುಕ್‌ನಂತೆ ಎಸ್‌ಎಂಎಸ್‌ನಿಂದಲೂ ವ್ಯಕ್ತಿಯೊಬ್ಬನ ವ್ಯಕ್ತಿತ್ವ, ಅವನ ಗೆಳೆಯರ ಕುರಿತು ಅರಿತುಕೊಳ್ಳಲು ಸಾಧ್ಯವಿದೆಯಂತೆ.
ಅದು ಹೇಗೆ? ಇಲ್ಲಿದೆ ವಿವರ...

ನೀವು ಯಾರಿಗಾದರೂ ಆಗಾಗ ಎಸ್‌ಎಂಎಸ್ ಮಾಡ್ತೀರಾ? ಅವರ ಕರೆಗೆ ತಪ್ಪದೆ ಪ್ರತಿಕ್ರಿಯಿಸುತ್ತೀರಾ? ಅವರ ಮಿಸ್ಡ್‌ಕಾಲ್ ಕಂಡರೆ ತಕ್ಷಣಕ್ಕೆ ಕರೆಮಾಡಿ ನೀವು ಕಾಲ್ ರಿಸೀವ್ ಮಾಡದ್ದಕ್ಕೆ ಕ್ಷಮೆ ಕೇಳ್ತೀರಾ? ಹಾಗಿದ್ದರೆ ಇವರು ನಿಮ್ಮ ಆತ್ಮೀಯ ಗೆಳೆಯರಾಗಿರುತ್ತಾರೆ. ಇಂಥವರ ಕರೆ, ಎಸ್‌ಎಂಎಸ್‌ಗಾಗಿ ನೀವು ನಿತ್ಯವೂ ಎದುರು ನೋಡುತ್ತಿರುತ್ತೀರಿ.

ಇನ್ನು ಕೆಲವು ಎಸ್‌ಎಂಎಸ್, ಕರೆಗಳಿಗೆ ನೀವು ಸಮಯ, ಸಂದರ್ಭ ನೋಡಿಕೊಂಡಷ್ಟೇ ಉತ್ತರಿಸುತ್ತಿರಿ. ಉದಾ: ನೀವು ಟೀವಿ ನೋಡುತ್ತಿರುತ್ತೀರಿ ಅಥವಾ ಶಾಪಿಂಗ್ ಮಾಡುತ್ತಿರುತ್ತೀರಿ. ಇಲ್ಲಾ ಗೆಳೆಯರೊಂದಿಗೆ ಹರಟೆ ಹೊಡೆಯುತ್ತಿರುತ್ತೀರಿ. ಆಗ ಬರುವ ಕರೆ ಅಥವಾ ಎಸ್‌ಎಂಎಸ್‌ಗಳಿಗೆ ನೀವು ಉತ್ತರಿಸುವ ಗೊಡವೆಗೇ ಹೋಗುವುದಿಲ್ಲ. ಆದರೆ, ನಾನು ತುರ್ತು ಕೆಲಸದಲ್ಲಿದ್ದೇನೆ ಎನ್ನುವ ಎಸ್‌ಎಂಎಸ್ ಕಳುಹಿಸಿ ಸುಮ್ಮನಾಗಿ ಬಿಡುತ್ತೀರಿ. ಸಾಮಾನ್ಯವಾಗಿ ಇವರು ನಿಮ್ಮ ಪಾಲಿಗೆ ಟೈಂಪಾಸ್ ಗೆಳೆಯರು. ಅಂದರೆ ಮಾಮೂಲಿ ಗೆಳೆಯರು.

ಕೆಲವರ ಕರೆಗಳನ್ನು, ಎಸ್‌ಎಂಎಸ್‌ಗಳಿಗೆ ಅಗತ್ಯವಿದ್ದರಷ್ಟೇ ಉತ್ತರಿಸುತ್ತಿರಿ. ಇಲ್ಲವಾದರೆ ಅವರ ಮಿಸ್ಡ್‌ಕಾಲ್ ಅಥವಾ ಎಸ್‌ಎಂಎಸ್ ನೋಡಿದ್ರೂ ಉತ್ತರಿಸುವ ಗೋಜಿಗೆ ಹೋಗುವುದೇ ಇಲ್ಲ. ಇವರೂ ನಿಮ್ಮ ಗೆಳೆಯರೇ. ಆದರೆ, ಬೇಡದ ಗೆಳೆಯರು. ಇವರೊಂದಿಗೆ ನೀವು ಹೆಚ್ಚು ಆತ್ಮೀಯ ಒಡನಾಟ ಇಟ್ಟುಕೊಳ್ಳಲು ಇಷ್ಟಪಡುವುದಿಲ್ಲ. ಹಾಯ್, ಬಾಯ್‌ಗಷ್ಟೇ ಇವರು ಸೀಮಿತರು.

ಕೆಲವರ ಕರೆಗಳು, ಎಸ್‌ಎಂಎಸ್‌ಗಳೆಂದರೆ ನಿಮಗೆ ಅಲರ್ಜಿ. ಅವರು ಎಷ್ಟೇ ಕರೆ, ಎಸ್‌ಎಂಎಸ್ ಮಾಡಿದರೂ ನೀವು ಅದಕ್ಕೆ ಪ್ರತಿಕ್ರಿಯಿಸಲು ಹೋಗುವುದೇ ಇಲ್ಲ. ಇವರು ನಿಮ್ಮ ಗೆಳೆಯರ ಪಟ್ಟಿಯಲ್ಲಿ ಇರುವುದೇ ಇಲ್ಲ. ಇಂಥವರಿಂದ ಆದಷ್ಟು ನೀವು ಇವರಿಂದ ದೂರವೇ ಉಳಿಯಲು ಪ್ರಯತ್ನಿಸುತ್ತಿರುತ್ತೀರಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.