ಯುವಜನ/ಮಕ್ಕಳು

ಕಾಪಾಡು ಚೊಂಬೇಶ್ವರಾ!

ಕಾಪಾಡು ಚೊಂಬೇಶ್ವರಾ!
Published On :

'ಓ ದೇವರೇ, ಇದೆಂಥಾ ಪರೀಕ್ಷೆ?' ಎಂದು ವಿದ್ಯಾರ್ಥಿಗಳು ಹಲುಬುವ ಪರೀಕ್ಷಾ ಕಾಲ ಆರಂಭವಾಗಿದೆ. ಹಲ ವಿದ್ಯಾರ್ಥಿಗಳಿಗೆ ಕೂತ ಕುರ್ಚಿಗೆ ಬೆಂಕಿ ಕೊಟ್ಟಂಗಾಗಿದ್ರೆ, ಇನ್ನೊಂದಿಷ್ಟು ವಿದ್ಯಾರ್ಥಿಗಳು 'ಫೇಲಾಗದವರುಂಟೇ ಚೊಂಬೇಶ್ವರ? ಪಾಸಾಗಿ ಏನ್ಮಾಡ್ಲಿ ಒಂದೇ ಸಲ?' ಎಂದುಕೊಂಡು ಫುಲ್ ಕೂಲ್ ಕೂಲ್...!
ಹೀಗೆ ತೀರಾ ಓತ್ಲಾ ಹೊಡ್ಕೊಂಡು ಇರೋದೂ ಒಳ್ಳೇದಲ್ಲ. ಹಾಗಂತ ಬಾಲಕ್ಕೆ ಬೆಂಕಿ ಬಿದ್ದಂಗೆ ಒದ್ದಾಟ ಕೂಡಾ ಒಳ್ಳೇದಲ್ಲ. ಒಂದು ಮಟ್ಟಿಗೆ ಟೆನ್ಷನ್ ಇರಲಿ. ಅದು 'ಒಳ್ಳೇ ಮಾರ್ಕ್ಸ್ ತೆಗೀಬೇಕು, ಓದೋ ಬಡ್ಡಿಮಗನೆ' ಅಂತ ಪ್ರೇರೇಪಿಸುತ್ತದೆ. ಆದರೆ, ಅತಿಯಾಯಿತೋ ಕೈಕಾಲು ಗಡಗಡ, ಹೃದಯ ಬಡಿತ ಢವಢವ, ಮರೆವು, ಕನ್‌ಫ್ಯೂಷನ್ ಅಟಕಾಯಿಸಿಕೊಂಡು ಇಡಿ ದಿನ ಓದಿದ್ರೂ ತಲೆಗೆ ಹತ್ತಲ್ಲ. ಪರೀಕ್ಷೆಯಲ್ಲಿ ಗೊತ್ತಿದ್ದಿದ್ದು ಕೂಡಾ ಗೋವಿಂದಾಯ ನಮಃ..

ಪರೀಕ್ಷಾ ಭಯ ಬೆನ್ನಟ್ಟಿಕೊಂಡು ಬರಲು ಹಲವು ಕಾರಣಗಳಿರಬಹುದು.

  •     ಪರೀಕ್ಷೆ ಎಂಬ ಪದ ಕಿವಿಗೆ ಬೀಳುವವರೆಗೂ ಓದದೆ, ಪಾಠ ಸರಿಯಾಗಿ ಕೇಳದೆ ಈಗ ಮೊದಲ ಸಲ ಪುಸ್ತಕ ಹಿಡಿದ ಪುಳಕ ನಡುಕ ಹುಟ್ಟಿಸಿರಬಹುದು.
  •     ಶಾಲೆಯಲ್ಲಿ ಪಾಠ ಸರಿಯಾಗಿ ಮಾಡದೇ ತಲೆಗೆ ಹೋಗದೇ ಇದ್ದದ್ದು.
  •     ಎಲ್ಲ ವಿಷಯದಲ್ಲೂ 100ಕ್ಕೆ ನೂರೇ ಬರಬೇಕು ಎಂಬಂಥ ಅತಿಯಾದ ನಿರೀಕ್ಷೆ ಸಾಮರ್ಥ್ಯವನ್ನು ಮೀರಿದ್ದಾಗಿದ್ದಾಗ.
  •     ಫ್ರೆಂಡ್ಸ್ ಜಾಸ್ತಿ ಹೊತ್ತು ಓದುತ್ತಿದ್ದಾರೆಂಬ ಕಾರಣಕ್ಕೆ ತಲೆಗೆ ಹೋಗದಿದ್ದರೂ ಇಡಿ ದಿನ ಸುಮ್ಮನೆ ಪುಸ್ತಕ ಹಿಡಿದು ಕುಳಿತುಕೊಳ್ಳುವುದು.
  •     ಪೋಷಕರ ಒತ್ತಡ, ನಿರೀಕ್ಷೆಗಳ ಹೇರಿಕೆ.
  •     ಫೇಲಾದರೆ, ಕಡಿಮೆ ಅಂಕ ತೆಗೆದರೆ ಭವಿಷ್ಯವೇ ಇಲ್ಲ ಎಂಬ ತಪ್ಪು ಕಲ್ಪನೆ.
  •     ಪರೀಕ್ಷೆಯಲ್ಲಿ ಎಲ್ಲ ಮರೆತುಬಿಟ್ಟರೆ, ಫೇಲಾದರೆ...ಇತ್ಯಾದಿ 'ರೆ'ಗಳ ಸರಣಿ ಹೊತ್ತ ನಕಾರಾತ್ಮಕ ಯೋಚನೆಗಳು.
  •     ಅತಿಯಾದ ಮಾನಸಿಕ ತೊಳಲಾಟ, ಜೀವನದಲ್ಲಿ ಕಷ್ಟ. ಪರೀಕ್ಷೆ ಸಮಯದಲ್ಲಿ ಹತ್ತಿರದ ಸಂಬಂಧಿಯ ಸಾವು ಇತ್ಯಾದಿಗಳಿಂದ ಏಕಾಗ್ರತೆ ಸಾಧಿಸಲು ಅಡ್ಡಿ.
  •     ಓದಿನಲ್ಲಿ ನಿರಾಸಕ್ತಿ.
 ಮಾಡಬೇಕಾದುದೇನು?

- ರೇಶ್ಮಾರಾವ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.