ಯುವಜನ/ಮಕ್ಕಳು

ರೂಲ್ ಮಾಡೆಲ್

ರೂಲ್ ಮಾಡೆಲ್
Published On :

ಫ್ಯಾಷನ್ ಲೋಕದಲ್ಲಿ ಕೆಲಸ ಗೊತ್ತಿದ್ದ ಮಾತ್ರಕ್ಕೆ ನೀವು ಜಗತ್ತನ್ನೇ ಆಳಬಹುದು ಎಂದು ತಿಳಿಯಬೇಡಿ. ನಿಮ್ಮ ಅಭಿರುಚಿಗೆ ಯಾವ ವಿಭಾಗ ಸೂಕ್ತವೆಂದು ಗುರುತಿಸಿಕೊಳ್ಳುವ ಕಲೆಯೂ ನಿಮಗೆ ತಿಳಿದಿರಬೇಕು. ಆದರೆ, ಫ್ಯಾಷನ್ ಜಗತ್ತಿನೊಳಗೆ ಪ್ರವೇಶ ಪಡೆಯಬಯಸುವ ಬಹುತೇಕರು ಎಡವುದೇ ಇಲ್ಲಿ.
ಇಂಥವರಿಗಾಗಿಯೇ ಬೆಂಗಳೂರಿನ ಹೃದಯ ಭಾಗದಲ್ಲಿರುವ ವೋಗ್ ಇಂಟರ್‌ನ್ಯಾಷನಲ್ ಫ್ಯಾಷನ್ ಟೆಕ್ನಾಲಜಿ 2013-14ನೇ ಸಾಲಿಗೆ ಫ್ಯಾಷನ್ ಡಿಸೈನಿಂಗ್ ಆ್ಯಂಡ್ ಬಿಸ್‌ನೆಸ್ ಮ್ಯಾನೇಜ್‌ಮೆಂಟ್ ಇನ್ ಎಂಬಿಎ, ಇಂಟೀರಿಯರ್ ಡಿಸೈನಿಂಗ್ ಆ್ಯಂಡ್ ಮ್ಯಾನೇಜ್‌ಮೆಂಟ್ ಇನ್ ಎಂಬಿಎ ಕೋರ್ಸ್‌ಗಳನ್ನು ಪ್ರಾರಂಭಿಸುತ್ತಿದೆ. ನಿಮ್ಮ ಕಲೆಗೆ ಬೆಲೆ ನೀಡುವ ಮೂಲಕ ವೃತ್ತಿರಂಗದಲ್ಲಿ ಗುರುತಿಸಿಕೊಳ್ಳುವುದು ಹೇಗೆನ್ನುವ ಕುರಿತು ಇಲ್ಲಿ ಪ್ರಾಯೋಗಿಕವಾಗಿ ತಿಳಿಸಿಕೊಡಲಾಗುತ್ತದೆ. ಈ ಮೂಲಕ ಫ್ಯಾಷನ್ ಡಿಸೈನಿಂಗ್ ಲೋಕದಲ್ಲಿ ನಿಮ್ಮ ಅಭಿರುಚಿಗೆ, ಕುಶಲತೆಗೆ ತಕ್ಕ ಕೆಲಸ ಹುಡುಕಿಕೊಡಲು ಈ ಕೋರ್ಸ್ ಸಹಕಾರ ನೀಡುತ್ತದೆ.

ಕಲಿಸುವುದೇನು?
ಫ್ಯಾಷನ್ ಡಿಸೈನಿಂಗ್ ಕಲಿಸುವ ಜತೆಗೆ, ವಿದ್ಯಾರ್ಥಿಗಳನ್ನು ಕಾರ್ಖಾನೆಗಳಿಗೂ ಕರೆದೊಯ್ಯಲಾಗುತ್ತದೆ. ಕಚ್ಚಾವಸ್ತುವೊಂದು ಸಿದ್ಧಉಡುಪಾಗಿ ಹೇಗೆ ರೂಪುಗೊಳ್ಳುತ್ತದೆ? ಯಾವ ರೀತಿ ವಸ್ತ್ರ ವಿನ್ಯಾಸ ಮಾಡಲಾಗುತ್ತದೆ? ಗ್ರಾಹಕರನ್ನು ಹುಡುಕುವುದು ಹೇಗೆ? ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳುವ ಬಗೆ ಹೆಗೆ? ಇವೆಲ್ಲವೂ ಸೇರಿದಂತೆ ಕಲೆಗೆ ಬೆಲೆ ಕಲ್ಪಿಸುವ ಎಲ್ಲಾ ವಿಷಯಗಳನ್ನು ಉದ್ಯಮಿಗಳಿಂದಲೇ ತಿಳಿಸಿಕೊಡಲಾಗುತ್ತದೆ.

ಉದ್ಯೋಗ ಎಲ್ಲಿ?
ಫ್ಯಾಷನ್ ಲೋಕ ಬೆಳೆಯುತ್ತಿರುವ ರೀತಿ ನೋಡಿದರೆ ಈ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳಿಗೇನೂ ಕೊರತೆ ಇಲ್ಲ. ಬೃಹತ್ ಕಂಪನಿಗಳಲ್ಲಿ ಡಿಸೈನರ್ಸ್, ಮಾರ್ಕೆಟಿಂಗ್ ಮ್ಯಾನೇಜರ್, ಫ್ಯಾಷನ್ ಎಂಟರ್‌ಪ್ರೈಸಸ್, ಮಾರಾಟಗಾರರು, ಫ್ಯಾಷನ್ ಪ್ಲಾನರ್ಸ್, ಕ್ವಾಲಿಟಿ ಕಂಟ್ರೋಲರ್, ಪ್ರೊಡಕ್ಷನ್ ಪ್ಲಾನಿಂಗ್ ಆ್ಯಂಡ್ ಕಂಟ್ರೋಲರ್ ಸೂಪರ್‌ವೈಸರ್.. ಹೀಗೆ ನಾನಾ ಉದ್ಯೋಗಾವಕಾಶಗಳಿವೆ.

ವಿದ್ಯಾರ್ಹತೆ ಏನು?
ಎಂಬಿಎ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಯಾವುದೇ ವಿಷಯದಲ್ಲಾದರೂ ಪದವಿ ಪಡೆದಿರಬೇಕು. ಫ್ಯಾಷನ್ ಡಿಸೈನಿಂಗ್‌ನಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.

ಬೆಂಗಳೂರಿನಲ್ಲಿ ಇದೇ ಪ್ರಥಮ ಬಾರಿಗೆ ಕಲೆಗೆ ಬೆಲೆ ನೀಡುವ ಕುರಿತು ಕೋರ್ಸ್ ಪ್ರಾರಂಭಿಸಿದ್ದೇವೆ. ಈ ಕೋರ್ಸ್‌ಗೆ ಬೇಡಿಕೆ ಇರುವುದರಿಂದ ಹೆಚ್ಚಿನ ವಿದ್ಯಾರ್ಥಿಗಳು ಈ ಕೋರ್ಸ್ ಸೇರಲಿದ್ದಾರೆ ಎನ್ನುವ ಭರವಸೆ ಇದೆ.
- ಎಂ.ಎಂ. ಕಾರಿಯಪ್ಪ, ಅಧ್ಯಕ್ಷ, ವೋಗ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ

-ದೇವರಾಜ್ ಎಲ್.
djtrupti@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.