ಯುವಜನ/ಮಕ್ಕಳು

ವಿನೋದ ಗಣಿತ

Published On :

1.    ಯಾವ ಸಂಖ್ಯೆಯು ತನ್ನ ಮೂರರಷ್ಟಕ್ಕೆ ಸಮ..?
2.    ಯಾವ ಸಂಖ್ಯೆಯನ್ನು 3ರಿಂದ ಭಾಗಿಸಿದರೂ, ಅದರಿಂದ 3ರನ್ನು ಕಳೆದರೂ ಉತ್ತರ ಅಷ್ಟೇ ಬರುತ್ತದೆ?
3.    ಮೂರು ಸಂಖ್ಯೆಗಳಿವೆ. ಅವುಗಳನ್ನು ಕೂಡಿಸಿದರೂ, ಗುಣಿಸಿದರೂ ಉತ್ತರ ಒಂದೇ ಬರುತ್ತದೆ. ಅವು ಯಾವವು?
4.    5 ಲಕ್ಷ, 50 ಸಾವಿರದಲ್ಲಿ ಎಷ್ಟು ನೂರುಗಳಿವೆ?
5.    ಬೆಳಗಿನ ಹೊತ್ತು 4 ಕಾಲಲ್ಲಿ, ಮಧ್ಯಾಹ್ನ 2 ಕಾಲಲ್ಲಿ, ಸಾಯಂಕಾಲ 3 ಕಾಲಲ್ಲಿ ನಡೆಯುವ ಪ್ರಾಣಿ ಯಾವುದು?
6.    ಮಹಡಿ ಮನೆಯಲ್ಲಿ ನಾನು ಎರಡು ಬಾರಿ ಬರುವೆ. ಅರಮನೆಯಲ್ಲಿ ಒಂದು ಬಾರಿ ಬರುವೆ. ಆದರೆ ಬಂಗಲೆಯಲ್ಲಿ ನಾನು ಬರುವುದೇ ಇಲ್ಲ. ನಾನಾರು?
7.    ಬಿಲಿಯನ್ ಎಂದರೆ ಎಷ್ಟು?
8.    'ಲೀಲಾವತಿ' ಸಂಸ್ಕೃತ ಭಾಷೆಯ ಈ ಗಣಿತ ಗ್ರಂಥದ ಕರ್ತೃ ಯಾರು?
9.     ಒಂದರಿಂದ 50ರವರೆಗಿನ ಹಾಗೂ ಒಂದ ರಿಂದ 100ವರೆಗಿನ ಸಂಖ್ಯೆಗಳ ಮೊತ್ತವೆಷ್ಟು?
10.    ಎರಡು ಅಂಕಿಗಳ ಮೊತ್ತ ಅವುಗಳ ವ್ಯತ್ಯಾಸಕ್ಕಿಂತ 10 ಹೆಚ್ಚು. ಆ ಎರಡು ಅಂಕಿಗಳು ಯಾವವು?

- ಕೃಷ್ಣಾ ಎಸ್. ಕುಲಕರ್ಣಿ

ಉತ್ತರಗಳು:
1) ಸೊನ್ನೆ (0)
2) 4 ಅಥವಾ 9/2
3) 1,2,3
4) 5500
5) ಮನುಷ್ಯ (ಬಾಲ್ಯ, ಯೌವ್ವನ, ಮುಪ್ಪು)
6) 'ಮ' ಅಕ್ಷರ
7) ಹತ್ತರ ಘಾತ 12(1012)
8) ಭಾಸ್ಕರಾಚಾರ್ಯ
9) 1275 ಹಾಗೂ 5050
10) 10 ಹಾಗೂ 5

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.