ಯುವಜನ/ಮಕ್ಕಳು

ಕಂದು ಕವಜುಗ (ಪಕ್ಷಿ ಪ್ರಪಂಚ)

ಕಂದು  ಕವಜುಗ (ಪಕ್ಷಿ ಪ್ರಪಂಚ)
Published On :

ಕಾ.. ಟೀ..ಟರ್...ಟೀ ಟರ್...
ಇದು ನಮ್ಮ ಕವಜುಗ ಹಕ್ಕಿ ಕೂಗುವ ರೀತಿ. ದಕ್ಷಿಣ ಏಷ್ಯದ ಬಯಲು ಮತ್ತು ಒಣಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುವ ಈ ಹಕ್ಕಿಗಳನ್ನು ಅವುಗಳ ವಿಶಿಷ್ಟ ಧ್ವನಿಯಿಂದಾಗಿ 'ಟೀಟರ್ ಪಕ್ಷಿ' ಎಂದೂ ಕರೆಯುವುದುಂಟು. ಇವುಗಳ ಕಲರವ ಬೆಳಗಿನ ಹೊತ್ತು ಹೆಚ್ಚು. ಜೋಡಿ ಪಕ್ಷಿಗಳ ಪ್ರೇಮಗೀತೆ ಕೇಳುವುದೇ ಸೊಗಸು. ಹೆಣ್ಣು ಟೀ..ಟೀ..ಟೀ.. ಎಂದು ಕೂಗುತ್ತದೆ. ಕಿಲ..ಕಿಲ..ಕಿಲ.. ಅಥವಾ ಕಟೀಲ..ಕಟೀಲ..ಕಟೀಲ.. ಎಂದು ಕೂಗುತ್ತಿದ್ದರೆ ಪ್ರಣಯಕ್ಕೆ ಆಹ್ವಾನಿಸುತ್ತಿದೆ ಎಂದೇ ಅರ್ಥ.
ಕವಜುಗಗಳಿಗೆ ಇಂಗ್ಲಿಷ್‌ನಲ್ಲಿ ಗ್ರೆ ಫ್ರಾಂಕೋಲಿನ್ ಅನ್ನುತ್ತಾರೆ. ಫ್ರಾಂಕೋಲಿನಸ್ ಪಾಂಡಿಸೆರಿಯನ್ಸ್ ಜಾತಿಗೆ ಸೇರಿದ ಪಕ್ಷಿಗಳಿವು. ಸಾಮಾನ್ಯವಾಗಿ ಗುಂಪುಗಳಲ್ಲಿ ವಾಸಿಸುತ್ತವೆ. ಬೀಜಗಳು, ಕಾಳುಗಳು, ಸಣ್ಣಪುಟ್ಟ ಕೀಟಗಳು ಇವುಗಳ ಆಹಾರ. ಅಪರೂಪಕ್ಕೆ ಹಾವುಗಳನ್ನೂ ತಿನ್ನುತ್ತವೆ. ಏಪ್ರಿಲ್‌ನಿಂದ ಸೆಪ್ಟೆಂಬರ್ ಸಂತಾನಾಭಿವೃದ್ಧಿ ಸಮಯ. ಹೆಣ್ಣು ಕವಜುಗ ಒಮ್ಮೆ ಆರರಿಂದ ಎಂಟು ಮೊಟ್ಟೆ ಇಡುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.