ಯುವಜನ/ಮಕ್ಕಳು

ಹುಡುಗ ಮತ್ತು ನೇರಳೆ ಮರ

Published On :

ಕಥೆಗೂ, ಮಕ್ಕಳಿಗೂ ಭಾರಿ ನಂಟು. ಕಥೆಗಳು ಮಕ್ಕಳಿಗೆ ಖುಷಿ ನೀಡುವುದಷ್ಟೇ ಅಲ್ಲ, ಅವರ ಕಲ್ಪನಾ ಶಕ್ತಿಯನ್ನು ಹೆಚ್ಚಿಸುತ್ತವೆ ಕೂಡ. ಹೊಸಹೊಸ ಕಥೆಗಳನ್ನು ಹೇಳುವುದು ಪಾಲಕರಿಗೂ ಸವಾಲು. ಮೈಸೂರಿನ ಹೊರೆಯಾಲ ದೊರೆಸ್ವಾಮಿ ಅವರ 'ಹುಡುಗ ಮತ್ತು ನೇರಳೆ ಮರ' ಒಂದಷ್ಟು ಕಥೆಗಳ ಗಂಟನ್ನು ಪೋಷಕರಿಗೆ ಕಟ್ಟಿಕೊಡಬಲ್ಲದು.
ಸಂಕಲನದಲ್ಲಿ 38 ಕಥೆಗಳಿವೆ. ಅವುಗಳಲ್ಲಿ ಮೂರು ಪೌರಾಣಿಕ, ಒಂದು ದೊರೆಸ್ವಾಮಿಯವರ ಸ್ವಂತ ರಚನೆ, ಉಳಿದವು ಜಾನಪದ ಕಥೆಗಳು. ಸಂಪಾದಕರು ಕಥೆಗಳನ್ನು ಸಂಗ್ರಹಿಸಿ ಕೊಡುವುದಷ್ಟಕ್ಕೇ ತಮ್ಮನ್ನು ಸೀಮಿತಗೊಳಿಸಿಕೊಂಡಿಲ್ಲ. ಅದೇ ಥರದ ಕಥೆಗಳು ಬೇರೆ ಯಾವ ದೇಶದ ಕಥೆಗಳನ್ನು ಹೋಲುತ್ತವೆ ಎನ್ನುವ ಟಿಪ್ಪಣಿ ನೀಡಿದ್ದಾರೆ. ಜಾನಪದ ಕಥೆಗಳ ಕೊನೆಯಲ್ಲಿ, ಗ್ರಾಮೀಣ ಪದಗಳ ಅರ್ಥ ಕೊಟ್ಟಿದ್ದಾರೆ. ಕಥೆಯ ನೀತಿಯನ್ನೂ ಹೇಳಿದ್ದಾರೆ. ಈ ಹಿನ್ನೆಲೆಯಿಂದಲೂ ಇದು ಉತ್ತಮ ಸಂಕಲನ ಎನ್ನಲು ಅಡ್ಡಿ ಇಲ್ಲ. ಕಥೆಗೆ ಪೂರಕ ಚಿತ್ರಗಳಿವೆ.
ಮೈಸೂರಿನ ಕಾವ್ಯಾಲಯ ಪ್ರಕಾಶನ (ಕಾವ್ಯಾಲಯ ಪಬ್ಲಿಶರ್ಸ್, ಜಯನಗರ, ಮೈಸೂರು- 570014) ಇದನ್ನು ಪ್ರಕಟಿಸಿದೆ. ಪುಟ 114. ಬೆಲೆ 90 ರುಪಾಯಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.