ಯುವಜನ/ಮಕ್ಕಳು

ಪ್ರವೃತ್ತಿ ಪ್ರಸಂಗ

ಪ್ರವೃತ್ತಿ ಪ್ರಸಂಗ
Published On :

ಶಿಕ್ಷಣವೆಂದರೆ ಭಾವ ಪ್ರವಾಹದ ಅಭಿವ್ಯಕ್ತಿಗೆ ಸೂಕ್ತ ಸಂಸ್ಕಾರ ನೀಡಿ, ಅದನ್ನು ಬದುಕಿಗೆ ಉಪಯುಕ್ತವಾಗಿಸುವ ನಿರಂತರ ತರಬೇತಿ ಎಂಬುದಾಗಿ ಸ್ವಾಮಿ ವಿವೇಕಾನಂದರು ವ್ಯಾಖ್ಯಾನಿಸುತ್ತಾರೆ.

ಹುಲಿಯ ಕೆಣಕುವುದು ಹುಲಿ,
ಕಪಿಯನಣಕಿಪುವುದು ಕಪಿ,
ಹುಲಿ ಕಪಿಗಳವಿತಿರದ ನರಜಂತುವೆಲ್ಲಿ
ಮಲಗಿರುವ ಮಣಗವನಂತಿರಲು
ಬಿಡುವುದೇ ಜಾಣು
ಕುಲಕದಿರು ಬಾಲವನು ಮಂಕುತಿಮ್ಮ

- ಡಿವಿಜಿಯವರ ಈ ನುಡಿಯಂತೆ, ಪ್ರತಿಯೊಬ್ಬರಲ್ಲೂ ಹುದುಗಿರುವ ಹುಲಿ-ಕಪಿ ಭಾವಗಳನ್ನು ಸಂಸ್ಕರಿಸಿ, ಸಮಾಜಮುಖಿಯಾಗಿಸುವುದೇ ಶಿಕ್ಷಣ.  ಶಿಕ್ಷಣವೆಂದರೆ ಕೇವಲ ಮಾಹಿತಿ ಸಂಗ್ರಹಣೆಯಲ್ಲ. ಅದು, ವ್ಯಕ್ತಿತ್ವವನ್ನು ರೂಪಿಸುವ, ಬದುಕನ್ನು ಕಟ್ಟುವ, ಜ್ಞಾನದ ಸದ್ಬಳಕೆಗೆ ಪ್ರೇರೇಪಿಸುವ ನಿರಂತರ ತರಬೇತಿ. ಶಿಕ್ಷಣದ ಉದ್ದೇಶ ಕೇವಲ ಉದ್ಯೋಗ ಸಂಪಾದನೆಯಲ್ಲ. ನಿರಂತರ ಜ್ಞಾನದಾಹವನ್ನು ಪ್ರೇರೇಪಿಸುವುದು. ಈ ನಿಟ್ಟಿನಲ್ಲಿ ಗಳಿಸಿದ ಶಿಕ್ಷಣ ನಿಜಕ್ಕೂ ಗಟ್ಟಿಯಾಗಿರುತ್ತದೆ. ಮಾಡುವ ವೃತ್ತಿಯನ್ನು ಪ್ರೀತಿಸುವಂತೆ ಮಾಡುತ್ತದೆ.
ಶಿಕ್ಷಣ ಬದುಕಿಗೆ ಉಪಯುಕ್ತವಾಗಬೇಕಾದರೆ, ನಾವು ಕಲಿತಿದ್ದನ್ನು ಜೀವನೋಪಾಯಕ್ಕೆ ಬಳಸಬೇಕು.  ಆ ನಿಟ್ಟಿನಲ್ಲಿ ಜ್ಞಾನ ಗಳಿಸಿಕೊಳ್ಳುವುದೇ ವೃತ್ತಿ ಶಿಕ್ಷಣ. ನಾವು ಪಡೆದುಕೊಂಡ ಜ್ಞಾನದ ಮೌಲ್ಯವರ್ಧನೆ ಮಾಡಿಕೊಂಡು, ಕೆಲಸಕ್ಕೆ ಬೇಕಾಗುವ ಕೌಶಲ್ಯಗಳನ್ನು ಪಡೆದುಕೊಳ್ಳುವುದೇ ವೃತ್ತಿ ಶಿಕ್ಷಣ. ನಮ್ಮ ಆಸಕ್ತಿಯ ಕ್ಷೇತ್ರವನ್ನು ಆರಿಸಿಕೊಂಡು, ಅದರಿಂದ ಬದುಕನ್ನು ರೂಪಿಸಿಕೊಳ್ಳಲು ಬೇಕಾಗುವ ಜ್ಞಾನವನ್ನು ಸಂಪಾದಿಸುವುದೇ ವೃತ್ತಿ ಶಿಕ್ಷಣ.

ವೃತ್ತಿ ಶಿಕ್ಷಣ ಏಕೆ ಬೇಕು?

  •     ವೃತ್ತಿ ಶಿಕ್ಷಣ ವ್ಯಕ್ತಿಗೆ ಗುರಿ ನೀಡುತ್ತದೆ. ಏಕಮುಖ ಸಾಧನೆಯತ್ತ ವ್ಯಕ್ತಿ ತುಡಿಯುವಂತೆ ಮಾಡುತ್ತದೆ. ನಾನು ಏನಾಗಬೇಕು ಎಂಬ ಕನಸು ಕಂಡು, ಆ ಕನಸನ್ನು ಗುರಿಯಾಗಿ ಅಂತರ್ಗತಗೊಳಿಸುತ್ತದೆ. ತನ್ಮೂಲಕ ಏಕಾಗ್ರತೆ ಮೂಡಿಸುತ್ತದೆ.
  •     ಕನಸು, ಅದರಿಂದ ಮೂಡಿದ ಗುರಿ, ಅದಕ್ಕನುಗುಣವಾದ ಅಭ್ಯಾಸ, ನಮ್ಮ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಡಿ.ವಿ.ಜಿ. ಅವರು ಹೇಳಿದಂತೆ, ನಮ್ಮಲ್ಲಿ ಆತ್ಮವಿಶ್ವಾಸದ ವಿದ್ಯುತ್ ಪ್ರವಾಹದ ಸಂಚಲನೆಯಾದಾಗ, ನಾವು ಶಕ್ತಿಶಾಲಿಯಾಗುತ್ತೇವೆ.
  •     ವೃತ್ತಿ ಶಿಕ್ಷಣ ವ್ಯಕ್ತಿಯಲ್ಲಿ ಸ್ಪರ್ಧಾತ್ಮಕ ಮನೋಭಾವ ಹೆಚ್ಚಿಸುತ್ತದೆ.
ಆಸಕ್ತಿಗೆ ಅನುಗುಣವಾದ ವೃತ್ತಿ ಶಿಕ್ಷಣ
ಚಾಲ್ತಿಯಲ್ಲಿರುವ ವೃತ್ತಿ ಶಿಕ್ಷಣ ಕೋರ್ಸ್‌ಗಳು
  •     ಈವೆಂಟ್ ಮ್ಯಾನೇಜ್‌ಮೆಂಟ್‌ನಲ್ಲಿ  M.B.A., P.G. Diploma
  •     ಮೆಡಿಕಲ್ ಟ್ರಾನ್ಸ್‌ಕಿಪ್ಷನ್‌ನಲ್ಲಿ ಪದವಿ.
  •     ಮಾಸ್ ಕಮ್ಯುನಿಕೇಷನ್‌ನಲ್ಲಿ ಕೋರ್ಸ್, ಮಾಧ್ಯಮ ಕೇತ್ರದಲ್ಲಿ ಉದ್ಯೋಗವಾಕಾಶ ವಿಫುಲ.
  •     ಕೃಷಿ ವಿಶ್ವವಿದ್ಯಾನಿಲಯದ ಬಿ.ಎಸ್ಸಿ (ಕೃಷಿ), ಬಿ.ಎಸ್ಸಿ (ತೋಟಗಾರಿಕೆ), ಬಿ.ಎಸ್ಸಿ (ಕೃಷಿ ಮಾರುಕಟ್ಟೆ) ಇತ್ಯಾದಿ ಪದವಿಗಳು.
  •     ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಬಿ.ವಿ.ಎಸ್ಸಿ, ಬಿ.ಎಫ್.ಎಸ್ಸಿ ಕೋರ್ಸ್
  •     ಮನಃಶಾಸ್ತ್ರದ ಕೋರ್ಸ್‌ಗಳು, ಮನ ಚಿಕಿತ್ಸಕರ ಕೊರತೆ ಇದೆ ಎಂಬುದು ಇತ್ತೀಚಿನ ವೈದ್ಯಕೀಯ ಕ್ಷೇತ್ರದ ವರದಿಗಳು ಹೇಳುತ್ತಿವೆ.
  •     ವಾಕ್-ಶ್ರವಣ(Speech & Hearing)ಗೆ ಸಂಬಂಧಿಸಿದ ವಿಶೇಷ ಕೋರ್ಸ್‌ಗಳು.
  •     ಆಹಾರ ಸಂಸ್ಕರಣೆ (Food processin) ಸಂಬಂಧಿಸಿದ ಕೋರ್ಸ್‌ಗಳು.
  •     ಮರೈನ್ ಎಂಜಿನಿಯರಿಂಗ್ ಹಾಗೂ ಸಮುದ್ರಶಾಸ್ತ್ರ (Oceanography) ಕುರಿತ ಕೋರ್ಸ್‌ಗಳು.
  •     ಆ್ಯನಿಮೇಷನ್ ಹಾಗೂ ಗ್ರಾಫಿಕ್ಸ್ ಕುರಿತ ಕೋರ್ಸ್‌ಗಳು. ಚಿತ್ರಕಲೆ, ವ್ಯಂಗ್ಯ ಚಿತ್ರಗಳಲ್ಲಿ ಆಸಕ್ತಿ ಇರುವವರು ಇಂಥ ಕೋರ್ಸ್‌ಗಳಿಗೆ ಸೇರಬಹುದು.
  •     ಆ್ಯಕ್ಚುರಿಯಲ್ ಸೈನ್ಸ್ ಕೋರ್ಸ್- ವಿಮಾ ಕ್ಷೇತ್ರದಲ್ಲಿ ಭಾರಿ ಬೇಡಿಕೆಯಲ್ಲಿರುವ ಪದವಿ. ವಿಮಾ ಪ್ರೀಮಿಯಂಗಳನ್ನು ಲೆಕ್ಕಾಚಾರ ಹಾಕುವವರನ್ನು ಆ್ಯಕ್ಚುರಿಗಳು ಎನ್ನುತ್ತಾರೆ. ಗಣಿತದಲ್ಲಿ ಆಸಕ್ತಿ ಇರುವವರಿಗೆ ಸೂಕ್ತ ಕೋರ್ಸ್.
  •     ಕಂಪನಿ ಸೆಕ್ರಟರಿ ಕೋರ್ಸ್, ಇಂಟೀರಿಯರ್ ಡಿಸೈನಿಂಗ್, ಭಾಷಾಂತರ, ಲಲಿತಕಲೆ, ನಟನೆ ಕುರಿತಾದ ಕೋರ್ಸ್‌ಗಳು.
- ಎಚ್.ಎಸ್. ನವೀನ ಕುಮಾರ್ ಹೊಸದುರ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.