ಪಕ್ಷಿ ಪ್ರಪಂಚ
ಇದು ಮೂಲತಃ ದಕ್ಷಿಣ ಭಾರತ ಮತ್ತು ಶ್ರೀಲಂಕಾಗಳಲ್ಲಿ ಕಂಡುಬರುವ ಪಕ್ಷಿ.

ಇದು ಮೂಲತಃ ದಕ್ಷಿಣ ಭಾರತ ಮತ್ತು ಶ್ರೀಲಂಕಾಗಳಲ್ಲಿ ಕಂಡುಬರುವ ಪಕ್ಷಿ. ಇವು ಪೊದೆಗಳು, ಸಾಗುವಳಿ ಪ್ರದೇಶಗಳು ಮತ್ತು ತೋಟಗಳಲ್ಲಿ ಕಂಡುಬರುತ್ತವೆ. ಈ ಹರಟೆಮಲ್ಲ ಪಕ್ಷಿಗಳು ವಲಸೆ ಹೋಗುವ ಜಾತಿಯಲ್ಲ. ಚಿಕ್ಕ ದುಂಡಾಗಿರುವ ರೆಕ್ಕೆಗಳನ್ನು ಹೊಂದಿದ್ದು, ಹೆಚ್ಚು ದೂರ ಹಾರುವಷ್ಟು ಬಲಶಾಲಿಯಲ್ಲ. ಇವು ದಟ್ಟ ಕಾನನದಿಂದ ದೂರವಿರುತ್ತವೆ. ಆಹಾರಕ್ಕಾಗಿ ಮತ್ತು ಚಿಲಿಪಿಲಿಗುಟ್ಟುವುದಕ್ಕಾಗಿ ಹಿಂಡುಹಿಂಡಾಗಿಯೇ ಸಾಗುತ್ತವೆ. ಹಿಂಡಿನ ಹಕ್ಕಿಗಳು ಒಂದರ ಪಕ್ಕದಲ್ಲಿ ಒಂದು ಮಲಗುತ್ತವೆ ಹಾಗೂ ಈ ಗುಂಪಿನ ಮಧ್ಯದಲ್ಲಿಯೇ ಮರಿಹಕ್ಕಿಗಳು ತೂರಿಕೊಂಡು ಮಲಗುತ್ತವೆ.
ಇವು ಏಳು ಬಗೆಯ ವಿಶಿಷ್ಟ ಧ್ವನಿಯನ್ನು ಹೊರಡಿಸುವುದು ಕಂಡುಬರುತ್ತದೆ. ಕಾಡು ಹರಟೆಮಲ್ಲಗಳಿಗಿಂತಲೂ ಹಳದಿಕೊಕ್ಕಿನ ಹರಟೆಮಲ್ಲದ ಕೂಗು ಹೆಚ್ಚಿನ ಸ್ಥಾಯಿಯದ್ದಾಗಿರುತ್ತದೆ. ಕಾಡು ಹರಟೆಮಲ್ಲಗಳ ಕೂಗು ಮೂಗಿನಿಂದ ಹೊರಟಂತಿರುತ್ತದೆ ಮತ್ತು ಅವುಗಳ ಕೂಗಿನಲ್ಲಿ ಕರ್ಕಶತೆ ಹೆಚ್ಚಾಗಿ ಕಂಡುಬರುತ್ತದೆ.
ಹರಟೆಮಲ್ಲ ಸಾಮಾನ್ಯವಾಗಿ ಕೀಟಗಳನ್ನು ತಿನ್ನುತ್ತವಾದರೂ ಹಣ್ಣು, ಜೇನುತುಪ್ಪ ಮತ್ತು ಮನುಷ್ಯರು ಬಿಸಾಡಿದ ಆಹಾರ ಪದಾರ್ಥ, ಹಲ್ಲಿ, ಚೇಳುಗಳನ್ನೂ ತಿನ್ನುತ್ತವೆ. ಮೊಟ್ಟೆ ಇಡುವ ಸಮಯ ಮುಂಗಾರು ಆರಂಭವಾಗುವ ಮೊದಲು. ಒಂದು ಬಾರಿಗೆ ಎರಡರಿಂದ ನಾಲ್ಕು ನೀಲಿ ಬಣ್ಣದ ಮೊಟ್ಟೆಗಳನ್ನಿಡುತ್ತವೆ. ಮೊಟ್ಟೆ 14ರಿಂದ 16 ದಿನಗಳಲ್ಲಿ ಒಡೆದು ಮರಿ ಹೊರಬರುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


