ನಕ್ಷತ್ರ ಎಣಿಸಿ
ನೀಲಿ ಗಗನವನ್ನು ದಿಟ್ಟಿಸೋದು, ನಕ್ಷತ್ರಗಳನ್ನು ಎಣಿಸೋದು ಅನೇಕರ ಹವ್ಯಾಸ. ಒಂದು ವೇಳೆ ಇದೇ ನಿಮ್ಮ ಉದ್ಯೋಗವಾಗಿ ಬಿಟ್ಟರೆ... ವ್ಹಾವ್...ಹೆಂಗಿರುತ್ತೆ ಅಲ್ವಾ? ಖಗೋಳ ಶಿಕ್ಷಣವನ್ನು ಆಯ್ಕೆ ಮಾಡಿಕೊಂಡರೆ ಇಂಥ ಅವಕಾಶ ನಿಮ್ಮದಾಗಬಹುದು. ಖಗೋಳ ತಜ್ಞರು ಎಂದರೆ ಚಂದ್ರ, ಸೂರ್ಯ, ಗೆಲಾಕ್ಸಿ ಹೀಗೆ ಆಕಾಶಕಾಯಗಳ ಉಗಮ ಮತ್ತು ಚಲನೆಯನ್ನು ಅಧ್ಯಯನ ಮಾಡುವ ವಿಜ್ಞಾನಿಗಳು. ಸಾಮಾನ್ಯವಾಗಿ ಖಗೋಳ ತಜ್ಞರ ವೃತ್ತಿ ಎರಡು ರೀತಿಯಲ್ಲಿರುತ್ತದೆ. ಒಂದು ಖಗೋಳಶಾಸ್ತ್ರ (ಸಿದ್ಧಾಂತದ ಕುರಿತು), ಇನ್ನೊಂದು ಖಗೋಳ ವೀಕ್ಷಣೆಗೆ (ಆಕಾಶಕಾಯಗಳನ್ನು ಗಮನಿಸುವುದು) ಸಂಬಂಧಿಸಿದ್ದು. ಖಗೋಳ ವೀಕ್ಷಕರು ಆಧುನಿಕ ಟೆಲಿಸ್ಕೋಪ್‌ನಂತಹ ಸಾಧನಗಳ ಮೂಲಕ ಚಂದ್ರ, ಸೂರ್ಯ, ನಕ್ಷತ್ರ, ಗ್ರಹಗಳಲ್ಲಿನ ಬದಲಾವಣೆ, ಹೊಸ ನಕ್ಷತ್ರಗಳ ಉದಯ, ಸಾವುಗಳ ಬಗ್ಗೆ ಗಮನಹರಿಸಬೇಕಾಗುತ್ತದೆ. ಆದರೆ, ಖಗೋಳ ಶಾಸ್ತ್ರದ ಕುರಿತು ಆಸಕ್ತಿ ಇರುವವರು ಖಭೌತ ವಿಜ್ಞಾನದ ಕುರಿತು ಅಧ್ಯಯನ ನಡೆಸುತ್ತಾರೆ. ಈ ಮೂಲಕ ಆಕಾಶಕಾಯಗಳ ಹುಟ್ಟು, ಸಾವಿನ ಕುರಿತು ವಿಶ್ಲೇಷಣೆ ನಡೆಸುತ್ತಾರೆ.
ಅವಕಾಶ ಹಲವು...
ಖಗೋಳವಿಜ್ಞಾನ ಶಿಕ್ಷಣ ಪೂರೈಸಿದವರಿಗೆ ಉದ್ಯೋಗಾವಕಾಶಗಳ ಕೊರತೆ ಇಲ್ಲ. ದೇಶದಲ್ಲಿ ಹಲವು ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ, ಜತೆಗೆ ವಿದೇಶಗಳಲ್ಲೂ ಸಾಕಷ್ಟು ಅವಕಾಶ ಕೈಬೀಸಿ ಕರೆಯುತ್ತದೆ. ಈ ಶಿಕ್ಷಣ ಪಡೆದವರು ವಿಶ್ವವಿದ್ಯಾಲಯಗಳಲ್ಲೂ ಶಿಕ್ಷಕರಾಗಿ ಸೇವೆ ಸಲ್ಲಿಸಬಹುದು.
ಅರ್ಹತೆ ಏನು?
- ಅನ್ವಯಿಕ ಗಣಿತಶಾಸ್ತ್ರ ಮತ್ತು ಭೌತವಿಜ್ಞಾನದ ಕುರಿತು ಜ್ಞಾನ.
- ಕಂಪ್ಯೂಟರ್ ಬಳಸಿಕೊಂಡು ದೊಡ್ಡ ಪ್ರಮಾಣದ ಡಾಟಾಗಳನ್ನು ವಿಶ್ಲೇಷಿಸುವ ಸಾಮರ್ಥ್ಯ.
- ಸಂಖ್ಯಾಶಾಸ್ತ್ರದ ಜ್ಞಾನ, ತಾಳ್ಮೆ ಮತ್ತು ಉತ್ಸಾಹ
- ಪಿಯುಸಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತವನ್ನು ಅಭ್ಯಸಿಸಿರಬೇಕು.
- ಪ್ರಾಯೋಗಿಕ ಖಗೋಳಶಾಸ್ತ್ರ ಶಿಕ್ಷಣಕ್ಕಾಗಿ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಅಥವಾ ಎಲೆಕ್ಟ್ರಿಕಲ್ ಕಮ್ಯುನಿಕೇಷನ್‌ನಲ್ಲಿ ಬಿಇ ಅಥವಾ ಬಿ.ಟೆಕ್ ಮಾಡಿರಬೇಕು.
- ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್- ಬೆಂಗಳೂರು
- ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್- ಬೆಂಗಳೂರು
- ರಾಮನ್ ರಿಸರ್ಚ್ ಇನ್ಸ್‌ಟಿಟ್ಯೂಟ್- ಬೆಂಗಳೂರು
- ಇಂಟರ್ ಯುನಿವರ್ಸಿಟಿ ಸೆಂಟರ್ ಫಾರ್ ಆಸ್ಟ್ರಾನಮಿ ಆ್ಯಂಡ್ ಆಸ್ಟ್ರೋಫಿಸಿಕ್ಸ್- ಪುಣೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

