ಉದ್ಯೋಗಕ್ಕೆ ಸೈಕಾಲಜಿ
ನಿಮ್ಮಲ್ಲಿ ಒಳ್ಳೆಯ ಸಂವಹನ ಕೌಶಲವಿದ್ದು, ಸೂಕ್ಷ್ಮಗಳನ್ನು ಅರ್ಥ ಮಾಡಿಕೊಳ್ಳುವ ಮನಸ್ಸಿದ್ದರೆ ಮನಃಶಾಸ್ತ್ರದಲ್ಲಿ ಖಂಡಿತವಾಗಿಯೂ ಒಳ್ಳೆಯ ಭವಿಷ್ಯ ಕಾದು ಕುಳಿತಿದೆ. ಅದೂ ಅಲ್ಲದೆ ಇಂದಿನ ಒತ್ತಡದ ಬದುಕಿನಲ್ಲಿ ಮನಶಾಸ್ತ್ರಜ್ಞರಿಗೆ ಸಾಕಷ್ಟು ಬೇಡಿಕೆ ಇದೆ.
ಸೈಕಾಲಜಿ ವಿಷಯವನ್ನು ಪಿಯುಸಿ ಹಂತದಿಂದಲೇ ಆರ್ಟ್ಸ್ ಕಾಂಬಿನೇಶನ್‌ನಲ್ಲಿ ಕೆಲ ಕಾಲೇಜುಗಳಲ್ಲಿ ಸೇರಿಸಲಾಗಿದೆ. ಪಿಯುನಲ್ಲಿ ಕಲಾ, ವಿಜ್ಞಾನ, ವಾಣಿಜ್ಯ ಏನೇ ವಿಷಯ ಓದಿದ್ದರೂ ಡಿಗ್ರಿ ಮೊದಲ ವರ್ಷದಲ್ಲಿ ಬಿಎ ಸೈಕಾಲಜಿ ಆಯ್ಕೆ ಮಾಡಿಕೊಳ್ಳಬಹುದು. ಸಾಮಾನ್ಯವಾಗಿ ಪತ್ರಿಕೋದ್ಯಮ, ಇಂಗ್ಲಿಷ್/ಕನ್ನಡ ಸಾಹಿತ್ಯ, ಕ್ರಿಮಿನಾಲಜಿ, ಸೋಶಿಯಾಲಜಿ ಇವುಗಳಲ್ಲಿ ಯಾವುದಾದರೂ ಎರಡು ವಿಷಯಗಳೊಡನೆ ಸೈಕಾಲಜಿಯನ್ನು ಕಲಿಯಬೇಕಾಗುತ್ತದೆ. ಪದವಿಯ ನಂತರ ಇತ್ತೀಚಿನವರೆಗೆ ಎಂಎ ಬಳಿಕ ಓದಬೇಕಾಗಿದ್ದ ಸೈಕಾಲಜಿಯನ್ನು ಈಗ ಎಂಎಸ್ಸಿಯೊಳಗೆ ಸೇರಿಸಲಾಗಿದೆ. ಪದವಿಯಲ್ಲಿ ಕನ್ನಡ ಹಾಗೂ ಆಂಗ್ಲ ಮಾಧ್ಯಮದ ಆಯ್ಕೆ ಇರುತ್ತದೆ. ಆದರೆ ಎಂಎಸ್ಸಿಯಲ್ಲಿ ಆಂಗ್ಲ ಮಾಧ್ಯಮ ಮಾತ್ರ.
ಸೈಕಾಲಜಿ ವಿಷಯ ಹೊಂದಿದ ಕೆಲವು ಪದವಿ ಕಾಲೇಜುಗಳು
- ಆಳ್ವಾಸ್ ಶಿಕ್ಷಣ ಸಂಸ್ಥೆ, ಮೂಡಬಿದಿರೆ
- ಎಸ್‌ಡಿಎಂ ಕಾಲೇಜು, ಉಜಿರೆ
- ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತೀರ್ಥಹಳ್ಳಿ
- ಮೌಂಟ್ ಕಾರ್ಮೆಲ್ ಕಾಲೇಜು, ಬೆಂಗಳೂರು
- ಆಕ್ಸ್ಫರ್ಡ್ ಕಾಲೇಜ್ ಆಫ್ ಆರ್ಟ್ಸ್, ಬೆಂಗಳೂರು
- ಸುರಾನಾ ಕಾಲೇಜು, ಬೆಂಗಳೂರು
- ಮಹಾರಾಜ ಕಾಲೇಜು, ಮೈಸೂರು
- ಸಂತ ಅಲೋಶಿಯಸ್ ಕಾಲೇಜು, ಮಂಗಳೂರು
- ಎಸ್‌ಡಿಎಂ ಕಾಲೇಜ್, ಉಜಿರೆ.
- ಕುವೆಂಪು ವಿವಿ, ಶಿವಮೊಗ್ಗ (ಕ್ಲಿನಿಕಲ್)
- ಕ್ರೈಸ್ಟ್ ಕಾಲೇಜ್, ಬೆಂಗಳೂರು (ಕ್ಲಿನಿಕಲ್, ಕೌನ್ಸೆಲಿಂಗ್, ಎಚ್‌ಆರ್‌ಡಿ)
- ಸೇಂಟ್ ಆ್ಯಗ್ನೆಸ್, ಮಂಗಳೂರು (ಕ್ಲಿನಿಕಲ್)
- ಮಾನಸ ಗಂಗೋತ್ರಿ, ಮೈಸೂರು
- ಆಚಾರ್ಯ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು
- ಬೆಂಗಳೂರು ವಿವಿ
- ಕಮ್ಯುನಿಟಿ ಸೈಕಾಲಜಿ
- ಕ್ಲಿನಿಕಲ್ ಸೈಕಾಲಜಿ
- ಫೊರೆನ್ಸಿಕ್ ಸೈಕಾಲಜಿ
- ಎಜುಕೇಶನಲ್ ಸೈಕಾಲಜಿ
- ಹೆಲ್ತ್ ಸೈಕಾಲಜಿ
- ಸ್ಪೋರ್ಟ್ಸ್ ಸೈಕಾಲಜಿ
- ಎನಿಮಲ್ ಸೈಕಾಲಜಿ
- ಸೋಷಿಯಲ್ ಸೈಕಾಲಜಿ
- ಆರ್ಗನೈಜೇಶನಲ್ ಸೈಕಾಲಜಿ
- ಕೌನ್ಸೆಲಿಂಗ್ ಸೈಕಾಲಜಿ
- ಪಿಎಚ್.ಡಿ
- ಎಂಫಿಲ್
- ಆಸ್ಪತ್ರೆಗಳಲ್ಲಿ
- ಶಾಲೆ ಕಾಲೇಜುಗಳಲ್ಲಿ
- ಸ್ವಂತ ಕ್ಲಿನಿಕ್‌ಗಳನ್ನು ಇಡಬಹುದು
- ಜೈಲು
- ಡಿಅಡಿಕ್ಷನ್ ಸೆಂಟರ್
- ಎನ್‌ಜಿಒ
- ಎಂಎನ್‌ಸಿ
- ಪುನರ್ವಸತಿ ಕೇಂದ್ರ
- ಸಂಶೋಧನಾ ಕ್ಷೇತ್ರ
- ಜಾಹಿರಾತು ಕ್ಷೇತ್ರ ಇತ್ಯಾದಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

