ಪಕ್ಷಿ ಪ್ರಪಂಚ

ಸಾಮಾನ್ಯವಾಗಿ ಗಿಳಿಗಳು ಹಸಿರು ಬಣ್ಣ ಹೊಂದಿರುವುದೇ ಹೆಚ್ಚು. ಆದರೆ ಮಲಬಾರ್ ಪ್ಯಾರಾಕೀಟ್ ನೀಲಿ ಹಾಗೂ ಕಂದು ಬಣ್ಣ ಹೊಂದಿರುತ್ತದೆ. ಇದರ ಮೂಲ ಶ್ರೀಲಂಕಾ. ಇವು ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ. ಭಾರತದಲ್ಲಿ ಇದಕ್ಕೆ 'ಬಾಬಾಬುಡನ್ ಗಿಳಿ' ಎಂತಲೂ ಕರೆಯುತ್ತಾರೆ. ಇತರ ಗಿಳಿಗಳಿಗಿಂತ ಇವು ಭಿನ್ನವಾಗಿರುತ್ತವೆ. ಕಡು ನೀಲಿ ಹಾಗೂ ಹಳದಿ ಬಣ್ಣದ ಬಾಲ ಮತ್ತು ತಲೆ, ದೇಹ ಮಂದ ಕಂದು ನೀಲಿಯಿಂದ ಕೂಡಿರುತ್ತದೆ. ವಯಸ್ಕ ಗಂಡು ಮತ್ತು ಹೆಣ್ಣನ್ನು ಸುಲಭವಾಗಿ ಗುರುತಿಸಬಹುದು. ಗಂಡು ಗಿಳಿ ಕುತ್ತಿಗೆ ಸುತ್ತ ಕಪ್ಪುಬಣ್ಣದ ರಿಂಗ್ ಹಾಗೂ ಹೆಣ್ಣುಗಿಳಿ ಹಳದಿ ರಿಂಗ್ ಹೊಂದಿರುತ್ತದೆ. ಸದಾ ಗುಂಪಿನಲ್ಲೇ ಚಲಿಸುವ ಇವು ಗುಂಪಾಗಿಯೇ ಅರಣ್ಯಗಳಲ್ಲಿ ವಾಸಿಸುತ್ತವೆ. ಸಾಮಾನ್ಯವಾಗಿ ಎಲೆಗಳಿಂದ ಗೂಡು ಕಟ್ಟುತ್ತವೆ. ಡಿಸೆಂಬರ್ನಲ್ಲಿ ಸಂತಾನಾಭಿವೃದ್ಧಿ ಆರಂಭಿಸಿ ಜನವರಿಯಲ್ಲಿ ಮೊಟ್ಟೆಗಳನ್ನಿಟ್ಟು ಜೂನ್ನಲ್ಲಿ ನೈರುತ್ಯ ಮಾನ್ಸೂನ್ಗೆ ಮೊದಲು ಮರಿಯಾಗುತ್ತದೆ. ಮೊಟ್ಟೆಯಿಟ್ಟ 23 ದಿನಗಳಲ್ಲಿ ಮರಿಯಾಗುತ್ತದೆ. ಒಂದು ಸಲಕ್ಕೆ ನಾಲ್ಕು ಮೊಟ್ಟೆಗಳನ್ನಿಡುತ್ತವೆ. ಮರಿಯನ್ನು ಸುಮಾರು ಮೂರು ತಿಂಗಳ ಕಾಲ ಪೋಷಣೆ ಮಾಡುತ್ತವೆ.
ಈ ಗಿಳಿ ನಿಖರವಾಗಿ ಭವಿಷ್ಯ ಹೇಳುತ್ತದೆ ಎಂದು ಜನರನ್ನು ದಾರಿ ತಪ್ಪಿಸಲಾಗುತ್ತಿದೆ. ಭಾರತದಲ್ಲಿ ಇದನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ಹಾಗಾಗಿ ಇದರ ಸಂತತಿ ನಶಿಸುತ್ತಿದೆ.
-ಮಲಬಾರ್ ಪ್ಯಾರಾಕೀಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


