ವೇದಿಕ್ ಮ್ಯಾಥ್ಸ್ ಸೇವೆ
ವಿದ್ಯಾರ್ಥಿಗಳ ಪಾಲಿಗೊಂದು ಸಿಹಿಸುದ್ದಿ. ಡಿಟಿಎಚ್ ಸೇವೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ಟಾಟಾ ಸ್ಕೈನಲ್ಲೀಗ ವಿದ್ಯಾರ್ಥಿಗಳ ಅನುಕೂಲಕ್ಕೆ ಆ್ಯಕ್ಟಿವ್ ವೇದಿಕ್ ಮ್ಯಾಥ್ಸ್ ಸೇವೆ ಆರಂಭಿಸಲಾಗಿದೆ. ವೇದಿಕ್ ಮ್ಯಾಥ್ಸ್ ಒಕ್ಕೂಟದ ಜತೆಗೂಡಿ ಟಾಟಾಸ್ಕೈ ಈ ಸೇವೆ ಆರಂಭಿಸುತ್ತಿದೆ. ದಿನದ ಯಾವುದೇ ಅವಧಿಯಲ್ಲಿ ಮತ್ತು ಅನುಕೂಲಕ್ಕೆ ತಕ್ಕಂತೆ ಈ ವೀಡಿಯೋ ಸೇವೆಯನ್ನು ಬಳಸಿಕೊಳ್ಳಬಹುದಾಗಿದೆ. ಗಣಿತವನ್ನು ಕಬ್ಬಿಣದ ಕಡಲೆಯೆಂದೇ ಭಾವಿಸಿರುವ ಎಳೆಯ ಮಕ್ಕಳಿಗೆ ವೇದಿಕ್ ಮ್ಯಾಥ್ಸ್ ಅತ್ಯುತ್ತಮ ಕಲಿಕಾ ಮಾರ್ಗವಾಗಿದೆ. ಇದರ ಮೂಲಕ ಶಾಲೆಯಲ್ಲಿ ಕಲಿತ ಗಣಿತದ ಸೂತ್ರಗಳನ್ನು ಸುಲಭವಾಗಿ ಬಿಡಿಸಲು ಸಾಧ್ಯವಾಗಲಿದೆ. ಅಲ್ಲದೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜಾಗುತ್ತಿರುವವರಿಗೂ ಅಬ್ಜೆಕ್ಟಿವ್ ಮಾದರಿಯ ಗಣಿತದ ಪ್ರಶ್ನೆಗಳನ್ನು ಬಿಡಿಸಲು ಇದು ನೆರವು ನೀಡಲಿದೆ. ಮಾಹಿತಿಗೆ ವಿಕ್ರಾಂತ್ ಮೊದಲಿಯಾರ್ (ಮೊ. 9820622997) ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

