ಯುವಜನ/ಮಕ್ಕಳು

ಬಣ್ಣ ಬಯಲು

ಬಣ್ಣ ಬಯಲು
Published On :

ಪುರುಷರು, ಮಹಿಳೆಯರಿಗಿಂತ ಎಷ್ಟೇ ಮುಂದು ಅಂತ ತೋರಿಸಿಕೊಳ್ಳಲಿ... ಆದರೆ, ಬಣ್ಣಗಳ ವಿಚಾರಕ್ಕೆ ಬಂದಾಗ ಪುರುಷರದು ಮೆಳ್ಳಗಣ್ಣಂತೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರು ಬಣ್ಣಗಳನ್ನು ಸರಿಯಾಗಿ ಮತ್ತು ಸ್ಪಷ್ಟವಾಗಿ ಗುರುತಿಸುತ್ತಾರಂತೆ. ಪುರುಷರಿಗೆ ಅನೇಕ ಬಣ್ಣಗಳು ಒಂದೇ ರೀತಿಯಾಗಿ ಕಂಡರೆ ಮಹಿಳೆಯರು ಆ ಬಣ್ಣಗಳಲ್ಲಿರುವ ಸಣ್ಣ ಸಣ್ಣ ವ್ಯತ್ಯಾಸವನ್ನೂ ಗುರುತಿಸುತ್ತಾರೆ. ಯಾವುದೇ ಒಂದು ಬಣ್ಣವನ್ನು ನೋಡಿದಾಗ ಮಹಿಳೆಯರು ಮತ್ತು ಪುರುಷರ ಮೆದುಳು ಅದನ್ನು ವಿಭಿನ್ನವಾಗಿ ಸಂಸ್ಕರಿಸುತ್ತದೆ. ಇದೇ ಕಾರಣಕ್ಕೆ ಕಿತ್ತಳೆ ಬಣ್ಣ ಪುರುಷರಿಗೆ ಹೆಣ್ಣುಮಕ್ಕಳಿಗಿಂತ ಹೆಚ್ಚು ಕೆಂಪಾಗಿ ಕಾಣುತ್ತದೆ. ಅದೇ ರೀತಿ ಹುಲ್ಲು, ಪುರುಷರಿಗೆ ಹಳದಿ ಮಿಶ್ರಿತ ಹಸಿರಾಗಿ ಕಂಡರೆ ಮಹಿಳೆಯರಿಗೆ ಗಾಢಹಸಿರಾಗಿ ಕಾಣುತ್ತದೆ. ಈ ಭಿನ್ನತೆ ಇಲ್ಲಿಗೇ ಮುಗಿಯುವುದಿಲ್ಲ. ನೀಲಿ, ಮೆರೂನ್... ಹೀಗೆ ಬೇರೆ ಬೇರೆ ರೀತಿಯ ಬಣ್ಣ ಗುರುತಿಸುವಲ್ಲೂ ಪುರುಷರು ಎಡವುತ್ತಾರಂತೆ. ಈಗಲಾದ್ರೂ ಗೊತ್ತಾಯ್ತಲ್ಲ... ಮಹಿಳೆಯರು ಒಂದು ಸೀರೆ ಖರೀದಿಗೆ ಗಂಟೆಗಟ್ಟಲೆ ಸಮಯ ಯಾಕೆ ತೆಗೆದುಕೊಳ್ಳುತ್ತಾರೇಂತ!

ಪುರುಷರ ಬಣ್ಣಗೇಡು
ಗೆಳತಿ ಜತೆಗೆ ಶಾಪಿಂಗಿಗೆ ಹೋಗಿರ್ತೀರಿ. ಆಗ ಆಕೆ ಯಾವುದೋ ಬ್ಯಾಗ್ ತೋರಿಸಿ ಅದು ಟೀಲ್, ಸ್ಕಾರ್ಲೆಟ್... ಅಂತ ಹೇಳೋದು ಬಹುತೇಕ ಗಂಡಸರ ಅನುಭವಕ್ಕೆ ಬಂದಿರುತ್ತದೆ ಬಿಡಿ. ಈ ಟೀಲ್, ಸ್ಕಾರ್ಲೆಟ್‌ಗಳೆಲ್ಲ ಬ್ಯಾಗ್ ಅಥವಾ ಬಟ್ಟೆಯ ಬ್ರಾಂಡ್‌ಗಳೇನೂ ಅಲ್ಲ. ಅದು ಕೆಲವು ಬಣ್ಣಗಳ ಹೆಸರಷ್ಟೆ. ಈ ಬಣ್ಣಗಳನ್ನು ಮಹಿಳೆಯರು ಪಕ್ಕಾ ಗುರುತಿಸುತ್ತಾರೆ. ಆದರೆ, ಬಣ್ಣಗಳ ಕುರಿತು ಅಜ್ಞಾನ ಹೊಂದಿರುವ ಪುರುಷರು ಮಾತ್ರ ಇದರ ಅರಿವಿಲ್ಲದೆ ತಲೆಕೆರೆದುಕೊಳ್ಳುತ್ತಾರಂತೆ.

ಗರ್ಲ್‌ಫ್ರೆಂಡ್ ಹೇಳುವ ಬಣ್ಣ

ಗರ್ಲ್‌ಫ್ರೆಂಡ್‌ಗಳ ಬಾಯಲ್ಲಿ ನೀವು ಕೆಲವು ಬಣ್ಣಗಳ ಹೆಸರನ್ನು ಕೇಳಿರಬಹುದು. ಅವುಗಳೆಂದರೆ,

  • ಬರ್ಗುಂಡಿ: ಇದೊಂದು ರೀತಿಯ ಗಾಢ ಕೆಂಪು ಬಣ್ಣ. ಬರ್ಗುಂಡಿ ವೈನ್‌ನ ಬಣ್ಣವನ್ನು ಹೋಲುತ್ತದೆ.
  • ಸಿನ್ನಮೊನ್: ದಾಲ್ಚಿನ್ನಿಯ ಬಣ್ಣವನ್ನು ಹೋಲುತ್ತದೆ.
  • ಟ್ಯಾನ್: ಹಳದಿ ಕಂದುಬಣ್ಣ.
  • ಬೇಷ್: ನಸುಹಳದಿಯ ಕಂದುಬಣ್ಣ.
  • ತಮಾಷೆಯೆಂದರೆ, ಈ ಎಲ್ಲಾ ಬಣ್ಣಗಳು ಪುರುಷರು ಕಂದು ಬಣ್ಣ ಎಂದೇ ಕರೆಯುತ್ತಾರೆ.
  • ಬಾರ್ಬಿ ಪಿಂಕ್: ಬಾರ್ಬಿ ಗೊಂಬೆಯ ಲೋಗೋದಲ್ಲಿ ಬಳಸಲಾದ ವಿಶಿಷ್ಟ ಗುಲಾಬಿಕೆಂಪು ಬಣ್ಣ.
  • ಸಲ್ಮೋನ್ ಪಿಂಕ್: ಸ್ಯಾಮನ್ ಮೀನಿನ ಮಾಂಸದ ಬಣ್ಣ. ಇದೊಂಥರ ಕಿತ್ತಳೆ ಮಿಶ್ರಿತ ಕೆಂಗುಲಾಬಿ ಬಣ್ಣ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.