ಯುವಜನ/ಮಕ್ಕಳು

ದೊಡ್ಡ ರ್ಯಾಕೆಟ್-ಬಾಲದ ಕೊತ್ವಾಲ್ ಪಕ್ಷಿ

ದೊಡ್ಡ ರ್ಯಾಕೆಟ್-ಬಾಲದ ಕೊತ್ವಾಲ್ ಪಕ್ಷಿ
Published On :

ಉದ್ದವಾದ ಬಾಲದ, ಹೊರಗಿನ ಪುಕ್ಕ, ಗರಿಗಳ ವೈಶಿಷ್ಟ್ಯವನ್ನು ಹೊಂದಿರುವ ಮಧ್ಯಮ ಗಾತ್ರದ ಏಷ್ಯಾದ ಪಕ್ಷಿ. ಇದನ್ನು  ಡ್ರೊಂಗೋ ಪಕ್ಷಿ ಎಂತಲೂ ಹೇಳುತ್ತಾರೆ. ಇವು ಸಾಮಾನ್ಯವಾಗಿ ಅರಣ್ಯಗಳಲ್ಲಿ ಮನುಷ್ಯರ ವಾಸನೆಲೆಗಳ ಸುತ್ತಮುತ್ತಲೇ ನೆಲೆಸುತ್ತವೆ. ಬೇರೆ ಬೇರೆ ಜಾತಿಯ ಹಕ್ಕಿಗಳ ಮಧ್ಯದಲ್ಲಿ ಎದ್ದು ಕಾಣುವಂತಿರುತ್ತವೆ. ಇತರ ಪಕ್ಷಿಗಳ ಕೂಗನ್ನು ಅನುಕರಣೆ ಮಾಡುವ ಇವು, ಉಚ್ಚ ಸ್ಥಾಯಿಯಲ್ಲಿ ಕೂಗುವುದರ ಮೂಲಕ ಗಮನ ಸೆಳೆಯುತ್ತವೆ. ಇವು ಕೀಟ-ಹುಳು ಭಕ್ಷಕಗಳು. ಅರುಣೋದಯಕ್ಕೆ ಸಾಕಷ್ಟು ಮುಂಚೆ ಹಾಗೂ ಮುಸ್ಸಂಜೆಯಾದ ಮೇಲೂ ಸಾಕಷ್ಟು ಹೊತ್ತಿನವರೆಗೆ ಚಟುವಟಿಕೆಯಿಂದಿರುತ್ತವೆ. ಸಣ್ಣದಾದ ಕಾಲುಗಳನ್ನು ಹೊಂದಿರುವ ಇವು ಲಂಬವಾಗಿ ಕುಳಿತುಕೊಳ್ಳುತ್ತವೆ ಹಾಗೂ ಆಕ್ರಮಣಶೀಲವಾಗಿರುತ್ತವೆ. ಇವುಗಳ ಪ್ರಣಯಚೇಷ್ಟೆಗಳ ಪ್ರಕಟಪಡಿಸುವಿಕೆಯು ವಿಶೇಷವಾಗಿರುತ್ತದೆ. ಕೊಂಬೆಗಳ ಮೇಲೆ ಜಿಗಿಯುವುದು, ಲಾಗ ಹಾಕುವುದು, ಪಲ್ಟಿ ಹೊಡೆಯುವುದು, ವಸ್ತುವೊಂದನ್ನು ಕೆಳಕ್ಕೆ ಬೀಳಿಸಿ ಮಧ್ಯೆ ಗಾಳಿಯಲ್ಲೇ ಅದನ್ನು ಹಿಡಿಯುತ್ತದೆ. ಏಪ್ರಿಲ್‌ನಿಂದ ಆಗಸ್ಟ್‌ವರೆಗೆ ಸಂತಾನ ಅಭಿವೃದ್ಧಿಯಲ್ಲಿ ತೊಡಗುತ್ತವೆ. ಬಟ್ಟಲಾಕಾರದ ಗೂಡುಗಳನ್ನು ಕಟ್ಟುವ ಈ ಪಕ್ಷಿ ಒಂದು ಬಾರಿಗೆ 3ರಿಂದ 4 ಕೆನೆಬಣ್ಣದ ಮೊಟ್ಟೆಗಳನ್ನಿಡುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.