ಸ್ಮಾರ್ಟ್ ಫೋನ್
ನಿಮ್ಮ ಕೈಯಲ್ಲಿರುವ ಸಾಮಾನ್ಯ ಮೊಬೈಲ್ ಕೂಡ ಮೊಬೈಲ್ 'ಸ್ಮಾರ್ಟ್' ಆಗಬಹುದು? ಯಾವ ವಿಚಾರದಲ್ಲಿ ಗೊತ್ತಾ? ಸರ್ಕಾರಿ

ನಿಮ್ಮ ಕೈಯಲ್ಲಿರುವ ಸಾಮಾನ್ಯ ಮೊಬೈಲ್ ಕೂಡ ಮೊಬೈಲ್ 'ಸ್ಮಾರ್ಟ್' ಆಗಬಹುದು? ಯಾವ ವಿಚಾರದಲ್ಲಿ ಗೊತ್ತಾ? ಸರ್ಕಾರಿ ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳ ಮಾಹಿತಿ ವಿಷಯದಲ್ಲಿ. ಇನ್ನು ಮುಂದೆ ಸರ್ಕಾರಿ ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳ ಮಾಹಿತಿ ಎಸ್‌ಎಂಎಸ್ ಮೂಲಕ ನಿಮ್ಮ ಇನ್‌ಬಾಕ್ಸ್‌ಗೆ ಬಂದು ಬೀಳಲಿದೆ. ಅದೂ ಉಚಿತವಾಗಿ.
ಇಂಥದ್ದೊಂದು ವಿನೂತನ ಸೇವೆಯನ್ನು ಸರ್ಕಾರಿ ಸ್ವಾಮ್ಯದ 'ಉದ್ಯೋಗವಾರ್ತೆ'(ಎಪ್ಲಾಯ್‌ಮೆಂಟ್ ನ್ಯೂಸ್) ಪ್ರಾರಂಭಿಸಿದೆ. ಆದರೆ, ಇಂಥ ಸೇವೆಗಾಗಿ ನೀವು ನೋಂದಣಿ ಮಾಡಿಕೊಳ್ಳುವುದು ಅಗತ್ಯ.
ನೋಂದಣಿ ಹೇಗೆ?
ನೀವು ಮಾಡಬೇಕಾಗಿರುವುದು ಇಷ್ಟೆ. http://www.employmentnews.gov.in
ವೆಬ್‌ಸೈಟ್‌ಗೆ ಹೋಗಿ. Employment News Launches SMS Job Alerts ಎಂಬ ವೆಬ್‌ಲಿಂಕ್ ಕಣ್ಣಿಗೆ ಬೀಳುತ್ತದೆ. ಅದರ ಕೆಳಗಿರುವ CLICK HERE TO SUBSCRIBEಮೇಲೆ ಕ್ಲಿಕ್ ಮಾಡಿದಲ್ಲಿ ಆನ್‌ಲೈನ್ ನೋಂದಣಿ ಕುರಿತ ವೆಬ್‌ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ಇ- ಮೇಲ್ ವಿಳಾಸ ಮತ್ತಿತರ ಮಾಹಿತಿ ದಾಖಲಿಸಿ SUBSCRIBE ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಆಯ್ತು. ನೋಂದಣಿ ಆದಂತೆ.
ಇದೇ ಮೊದಲು
ಈ ಹಿಂದೆ ಸರ್ಕಾರಿ ಉದ್ಯೋಗಗಳ ಮಾಹಿತಿ ಉದ್ಯೋಗವಾರ್ತೆ ಪತ್ರಿಕೆಯಲ್ಲಷ್ಟೇ ಪ್ರಕಟವಾಗುತ್ತಿತ್ತು. ಬಳಿಕ ನಗರಗಳಲ್ಲಿರುವ ಯುವಜನರ ಅನುಕೂಲಕ್ಕಾಗಿ 'ಉದ್ಯೋಗವಾರ್ತೆ' ವೆಬ್‌ಸೈಟ್ ಆರಂಭಿಸಲಾಗಿತ್ತು. ಈಗ 'ಮೊಬೈಲ್ ಸೇವೆ' ಅರಂಭಿಸಿದೆ. ಈ ಮೂಲಕ ಉದ್ಯೋಗ ಮಾಹಿತಿಯನ್ನು ಇನ್ನಷ್ಟು ಮಂದಿ ಯುವಕರಿಗೆ ಸುಲಭವಾಗಿ ತಲುಪಿಸುವ ನಿಟ್ಟಿನಲ್ಲಿ ಉದ್ಯೋಗವಾರ್ತೆ ಹೊಸ ಹೆಜ್ಜೆ ಇಟ್ಟಿದೆ.
ಸಂದೇಶ ಹೇಗೆ?
ಉದ್ಯೋಗ ವಾರ್ತೆಯು ಖಾಲಿ ಇರುವ ಹುದ್ದೆಗಳ ಮಾಹಿತಿಯನ್ನು ನಿಮ್ಮ ಮೊಬೈಲ್‌ಗೆ TD-EMPNWS ಎಂಬ ಹೆಸರಿನಲ್ಲಿ ಕಳುಹಿಸಿಕೊಡುತ್ತದೆ. ಇದರಲ್ಲಿ ಯಾವ ಇಲಾಖೆ ಅರ್ಜಿ ಕರೆದಿದೆ? ಖಾಲಿ ಇರುವ ಹುದ್ದೆ ಎಷ್ಟು? ಅರ್ಜಿ ಸಲ್ಲಿಸಲು ಕೊನೆಯ ದಿನ ಯಾವುದು ಮುಂತಾದ ಅಗತ್ಯ ಮಾಹಿತಿ ಇರಲಿದೆ. ಜತೆಗೆ,
ಸಂದೇಶದ ಕೊನೆ ಭಾಗದಲ್ಲಿ ವಿವರಗಳಿಗಾಗಿ ಯಾವ ವಾರದ ಉದ್ಯೋಗವಾರ್ತೆ ನೋಡಬೇಕು ಎಂಬ ಮಾಹಿತಿಯನ್ನೂ ಅದು ಹೊಂದಿರಲಿದೆ.
ಸದ್ಯದಲ್ಲೇ ಯುಜಿಸಿ 'ಸಂದೇಶ'
ವಿಶ್ವವಿದ್ಯಾಲಯಗಳು ಹಾಗೂ ಇತರೆ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ನೀಡಲು ಮೊಬೈಲ್ ಸಂದೇಶ ಸೇವೆ ಪ್ರಾರಂಭಿಸಲಾಗುವುದು ಎಂದು ವಿಶ್ವವಿದ್ಯಾಲಯ ಧನ ಸಹಾಯ(ಯುಜಿಸಿ) ಆಯೋಗ ಇತ್ತೀಚೆಗೆ ಹೇಳಿತ್ತು. ಅದರಂತೆ ಶೀಘ್ರದಲ್ಲೇ ಯುಜಿಸಿ ಕುರಿತ ಎಸ್‌ಎಂಎಸ್‌ಗಳನ್ನೂ ಮೊಬೈಲ್‌ನಲ್ಲಿ ಪಡೆದುಕೊಳ್ಳುವುದು ಸಾಧ್ಯವಿದೆ.
ದೇವರಾಜ್ ಎಲ್.
djtrupti@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


