ಯುವಜನ/ಮಕ್ಕಳು

ಮಹಿಳೆಯರಿಗೆ ದಾರಿ!

Published On :

ಪಾರ್ಟ್‌ಟೈಂ ಜಾಬ್ ಪುರುಷರಿಗಷ್ಟೇ ಸೀಮಿತವೇ? ಖಂಡಿತಾ ಇಲ್ಲ. ಮಹಿಳೆಯರೂ ಇಂಥ ಕೆಲಸಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ, ಅನೇಕ ಮಹಿಳೆಯರು ಪಾರ್ಟ್‌ಟೈಂ ಜಾಬ್ ಅಂದಾಕ್ಷಣ ಹಿಂದೇಟು ಹಾಕುವುದುಂಟು. ಅಂಥವರಿಗಾಗಿಯೇ ಕೆಲ ಸರಳ ಮತ್ತು ಸುರಕ್ಷಿತ ಪಾರ್ಟ್ ಟೈಂ ಜಾಬ್‌ಗಳ ಪಟ್ಟಿ ಇಲ್ಲಿದೆ.

ಪ್ಲೇಹೋಂ
ನಗರಗಳಲ್ಲಿರುವ ಮಹಿಳೆಯರಿಗೆ ಪ್ಲೇಹೋಂ ಸುರಕ್ಷಿತ ಅರೆಕಾಲಿಕ ಉದ್ಯೋಗವಾಗಿದೆ. ಅನೇಕ ಉದ್ಯೋಗಸ್ಥ ಮಹಿಳೆಯರು ತಮ್ಮ ಮಕ್ಕಳನ್ನು ಪ್ಲೇಸ್ಕೂಲ್‌ಗಳಿಗೆ ಸೇರಿಸುತ್ತಾರೆ. ನೀವು ಮನೆಯಲ್ಲೇ ಪ್ಲೇಸ್ಕೂಲ್‌ಗಳನ್ನು ನಡೆಸುವ ಮೂಲಕ ಅಥವಾ ಬೇರೆ ಪ್ಲೇಸ್ಕೂಲ್‌ಗಳಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುವ ಮೂಲಕ ಒಂದಷ್ಟು ಹಣ ಸಂಪಾದಿಸಬಹುದು.

ಚಿತ್ರಕಲೆ, ಡ್ಯಾನ್ಸ್ ತರಗತಿ
ನೀವು ಚಿತ್ರಕಲೆ, ನೃತ್ಯ ಅಥವಾ ಯೋಗದಲ್ಲಿ ವಿಶೇಷ ಪರಿಣತಿ ಹೊಂದಿದ್ದೀರಾ? ಹಾಗಿದ್ದರೆ ಹಣಗಳಿಗೆ ಬೇರೆ ದಾರಿ ಹುಡುಕುವ ಅಗತ್ಯವೇ ಇಲ್ಲ. ಮನೆಯಲ್ಲೇ ಬೆಳಗ್ಗೆ ಅಥವಾ ಸಂಜೆ ವೇಳೆಗೆ ಮಕ್ಕಳಿಗೆ ಇವುಗಳನ್ನು ಹೇಳಿಕೊಟ್ಟರಾಯಿತು.

ಮೇಕಪ್
ಬ್ಯೂಟಿಷಿಯನ್ ಕೋರ್ಸ್ ಮಾಡಿದ್ದರೆ, ಮೆಹಂದಿ ಹಾಕುವ ಕಲೆ ಗೊತ್ತಿದ್ದರೆ ಹಣಗಳಿಸುವುದು ಕಷ್ಟವೇನಲ್ಲ. ಒಂದಷ್ಟು ಮಂದಿ ಪರಿಚಯ ಇದ್ದರೆ ಸಾಕು. ಮದುವೆ ಮುಂತಾದ ಶುಭ ಸಮಾರಂಭಗಳ ವೇಳೆ ಬ್ಯೂಟಿಷಿಯನ್ ಆಗಿ ಕೆಲಸ ಮಾಡಬಹುದು. ಇದರಿಂದ ದೊಡ್ಡಮೊತ್ತದ ಹಣವೇನೂ ಕೈಗೆ ಬಾರದಿದ್ದರೂ ನಿಮ್ಮ ಸಣ್ಣಪುಟ್ಟ ಖರ್ಚುಗಳನ್ನು ಸರಿದೂಗಿಸಿಕೊಳ್ಳಲು ಅಡ್ಡಿಯಿಲ್ಲ.

ಟ್ಯೂಷನ್
ಈಗ ಮಕ್ಕಳನ್ನು ಟ್ಯೂಷನ್‌ಗೆ ಕಳುಹಿಸುವುದು ಮಾಮೂಲಿ ಎಂಬಂತಾಗಿಬಿಟ್ಟಿದೆ. ನೀವು ಬುದ್ಧಿವಂತರಾಗಿದ್ದರೆ ಇಂಗ್ಲಿಷ್, ಗಣಿತ ಕುರಿತು ಉತ್ತಮ ಜ್ಞಾನ ಇದ್ದರೆ ಅಕ್ಕಪಕ್ಕದ ಮನೆಯ ಮಕ್ಕಳಿಗೆ ಬೆಳಗ್ಗೆ, ಸಂಜೆ ಟ್ಯೂಷನ್ ಹೇಳಿಕೊಡಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.