ಜ್ವಾಲೆ: ಆರುವ ಸಮಯ ಬೇರೆ ಬೇರೆ...

ಹಣತೆಗಳಲ್ಲಿ ಜ್ವಾಲೆ ಆರುವ ಸಮಯವನ್ನು ಲೆಕ್ಕ ಹಾಕುವ ಆಟವಿದು. ಬನ್ನಿ ಆಡೋಣ... ನೋಡೋಣ, ಯೋಚಿಸೋಣ.
ಬೇಕಾದ ಸಾಮಾಗ್ರಿ
ಹಣತೆಗಳು
ಹತ್ತಿಯ ಬತ್ತಿಗಳು
ತುಪ್ಪ, ಹರಳೆಣ್ಣೆ, ಕೊಬ್ಬರಿ ಎಣ್ಣೆ,
ಸೀಮೆ ಎಣ್ಣೆ.
ಮಾಡಿ
5 ಹಣತೆಗಳಲ್ಲಿ ಬತ್ತಿಗಳನ್ನು ಇಡಿ
ಮೊದಲನೇ ಹಣತೆಯಲ್ಲಿ ಬರೀ ಬತ್ತಿಯನ್ನು ಇಡಿ. ಅನಂತರದ ಹಣತೆಗಳಲ್ಲಿ ಒಂದೇ ಪ್ರಮಾಣದಲ್ಲಿ ತುಪ್ಪ, ಹರಳೆಣ್ಣೆ, ಕೊಬ್ಬರಿ ಎಣ್ಣೆ, ಸೀಮೆ ಎಣ್ಣೆ ಹಾಕಿ.
ಎಲ್ಲಾ ಹಣತೆಗಳಲ್ಲಿ ಬತ್ತಿಯನ್ನು ಹೊತ್ತಿಸಿ.
ಬರೀ ಬತ್ತಿಯಿರುವ ಹಣತೆಯಲ್ಲಿನ ಬತ್ತಿ ಹೊತ್ತಿಕೊಳ್ಳುವುದಿಲ್ಲ.
ತುಪ್ಪ, ಹರಳೆಣ್ಣೆ, ಕೊಬ್ಬರಿ ಎಣ್ಣೆ, ಸೀಮೆ ಎಣ್ಣೆ ಹೊತ್ತಿಸಿ ದೀಪ ಬರಿಸಿದರೆ ಸರಾಗವಾಗಿ ಉರಿದು ಬೇಗ ಎಣ್ಣೆಯೂ ಮುಗಿಯುವುದು ಈ ಕ್ರಮದಲ್ಲಿ ಸೀಮೆ ಎಣ್ಣೆ, ಕೊಬ್ಬರಿ ಎಣ್ಣೆ, ಹರಳೆಣ್ಣೆ, ತುಪ್ಪ.
ಕಾರಣ ಬೇಕೆ?
ಮೊದಲನೆಯ ಹಣತೆಯಲ್ಲಿನ ಬತ್ತಿ ಹೊತ್ತಿಕೊಳ್ಳದಿರಲು ಕಾರಣ ಹತ್ತಿ ಎಳೆಗಳು ಜ್ವಾಲೆಯಿಂದ ದ್ರವವಾಗಿ, ಅನಿಲವಾಗಿ ಪರಿವರ್ತನೆ ಆಗಲು ಸಾಧ್ಯವಿಲ್ಲ. ಹೊತ್ತಿಕೊಂಡು ಉರಿಯುವ ವಸ್ತು ಅನಿಲವಾಗಬೇಕು. ಏಕೆ? ಏಕೆಂದರೆ ಇನ್ನೊಂದು ಪರಿವರ್ತಕವಾದ ಆಕ್ಸಿಜನ್(ಗಾಳಿಯ ಘಟಿಕ ಅನಿಲ) ಅನಿಲವೇ ಅನಿಲದೊಂದಿಗೆ ಬೆರೆತು ರಾಸಾಯನಿಕ ಶಕ್ತಿ ಆಗಲು ಸಾಧ್ಯ. ಈ ಚಟುವಟಿಕೆಯಲ್ಲಿ ಬೇಗನೆ ಆವಿಯಾಗುವ ತಕ್ಷಣವಿರುವುದು ಸೀಮೆ ಎಣ್ಣೆಗೆ. ಹೀಗಾಗಿ ಸೀಮೆ ಎಣ್ಣೆ ಹಾಕಿದ ಹಣತೆಯಲ್ಲಿನ ಜ್ವಾಲೆ ಮೊದಲು ನಂದುತ್ತದೆ.
-ನಾರಾಯಣ, ಬಾಬಾನಗರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


