ಯುವಜನ/ಮಕ್ಕಳು

ಸ್ಟೂಡೆಂಟ್ ಆ್ಯಪ್ಸ್

ಕಾಲೇಜು ಶುರುವಾಗಿದೆ. ಕೈಗೆ ಸ್ಮಾರ್ಟ್‌ಫೋನ್ ಕೂಡ ಬಂದಿದೆ..

ಸ್ಟೂಡೆಂಟ್ ಆ್ಯಪ್ಸ್
Published On :

ಕಾಲೇಜು ಶುರುವಾಗಿದೆ. ಕೈಗೆ ಸ್ಮಾರ್ಟ್‌ಫೋನ್ ಕೂಡ ಬಂದಿದೆ. ಹಾಗಿದ್ದ ಮೇಲೆ ಅದರ ಸದುಪಯೋಗ ಪಡೆಯೋದು ಬೇಡವೇ? ನಿಮಗಾಗಿಯೇ ಇದೆಯಲ್ಲ ಆ್ಯಪ್‌ಗಳು. ಇವುಗಳನ್ನೊಮ್ಮೆ ಡೌನ್‌ಲೋಡ್ ಮಾಡಿ ನೋಡಿ. ಇವುಗಳ ದಿಗ್ದರ್ಶನ ಗೊತ್ತಾಗುತ್ತದೆ.

ಮೈ ಕ್ಲಾಸ್ ಶೆಡ್ಯೂಲ್- ಉಚಿತ
ತರಗತಿಗಳು, ಅಸೈನ್‌ಮೆಂಟ್, ನೋಟ್ಸ್‌ಗಳಿಗೆ ಸಮಯ ಹೊಂದಾಣಿಕೆ ಮಾಡಲು, ನೆನಪಿಸಲು ಈ ಆ್ಯಪ್ ನೆರವಾಗುತ್ತದೆ. ಒಮ್ಮೆ ನೀವು ಈ ಆ್ಯಪ್‌ಗೆ ನಿಮ್ಮ ಕಾಲೇಜು ವೇಳಾಪಟ್ಟಿ ತುಂಬಿಸಿಬಿಟ್ಟರೆ ಅದು ಹೋಂವರ್ಕ್, ಸೆಮಿನಾರ್‌ಗಳು ಹೀಗೆ ಪಠ್ಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಆಯಾ ವೇಳೆಗೆ ಜ್ಞಾಪಿಸುತ್ತದೆ. ಪಠ್ಯದ ವಿಚಾರದಲ್ಲಿ ನೀವು ಅಪ್‌ಟು ಡೇಟ್ ಆಗಿರುವಂತೆ ನೋಡಿಕೊಳ್ಳುತ್ತದೆ.

ಸ್ಟಡಿಯಸ್
ಇದು ಪರೀಕ್ಷೆ, ತರಗತಿಗಳು, ಹೋಂವರ್ಕ್‌ಗಳ ಕುರಿತು ನೆನಪಿಸುವ ಮತ್ತೊಂದು ಅತ್ಯುತ್ತಮ ಆ್ಯಪ್.

ಹ್ಯಾಂಡಿ ಕ್ಯಾಲ್ಕ್
ಈ ಆ್ಯಪ್ ವೈಜ್ಞಾನಿಕ ಕ್ಯಾಲ್ಕುಲೇಟರ್‌ಗೆ ಸೂಕ್ತ ಪರ್ಯಾಯವಾಗಿದೆ. ಇದನ್ನು ಬಳಸಿಕೊಂಡು ವೈಜ್ಞಾನಿಕ ಲೆಕ್ಕಾಚಾರಗಳನ್ನು ಮಾಡಬಹುದು.

ವಾಟ್ಸ್‌ಆ್ಯಪ್
ನಿಮ್ಮ ಕಾಲೇಜು ಗೆಳೆಯರ ಗುಂಪಿನ ಜತೆಗೆ ಸದಾ ಸಂಪರ್ಕದಲ್ಲಿರಲು ಇದು ನೆರವು ನೀಡುತ್ತದೆ.

ಬಂಪ್
ಕಾಲೇಜಿನಲ್ಲಿ ಪರಿಚಯವಾಗುವ ಹೊಸಗೆಳೆಯರ ಜತೆಗೆ ನಿಮ್ಮ ಸಂಪರ್ಕ ಮಾಹಿತಿ, ಫೋನ್ ನಂಬರ್ ಅನ್ನು ಸುಲಭವಾಗಿ ಹಂಚಿಕೊಳ್ಳಲು ನೆರವು ನೀಡುತ್ತದೆ.

ಪಾಕೆಟ್
ಈ ಆ್ಯಪ್ ಬಳಸಿಕೊಂಡು ನೀವು ಯಾವುದೇ ವೆಬ್‌ಪುಟ, ಅದರಲ್ಲಿರುವ ಮಾಹಿತಿಯನ್ನು ಸೇವ್ ಮಾಡಿಟ್ಟುಕೊಳ್ಳಬಹುದು. ನಂತರ ಆಫ್‌ಲೈನ್‌ನಲ್ಲೇ ಅದನ್ನು ಓದಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.