ಯುವಜನ/ಮಕ್ಕಳು

ಸಿಪಾಯಿ ದಂಗೆ

ಆಗಸ್ಟ್ ಬಂತು ಅಂದ್ರೆ ನಮ್ಮ ಗಮನ ಎಲ್ಲಾ ಆಗಸ್ಟ್ 15ರಂದು ಆಚರಿಸುವ ಸ್ವಾತಂತ್ರ್ಯ ದಿನಾಚರಣೆ ಮೇಲೇ ಅಲ್ವಾ? ಅವತ್ತು ಶಾಲೆಯಲ್ಲಿ ಧ್ವಜಾರೋಹಣ ...

ಸಿಪಾಯಿ ದಂಗೆ
Published On :

ಆಗಸ್ಟ್ ಬಂತು ಅಂದ್ರೆ ನಮ್ಮ ಗಮನ ಎಲ್ಲಾ ಆಗಸ್ಟ್ 15ರಂದು ಆಚರಿಸುವ ಸ್ವಾತಂತ್ರ್ಯ ದಿನಾಚರಣೆ ಮೇಲೇ ಅಲ್ವಾ? ಅವತ್ತು ಶಾಲೆಯಲ್ಲಿ ಧ್ವಜಾರೋಹಣ ಮಾಡೋದು, ಆಮೇಲೆ ಸಿಹಿ ತಿನ್ನೋದು. ನಿಮಗೆ ಗೊತ್ತಾ? ಸ್ವಾತಂತ್ರ್ಯ ಸಂಗ್ರಾಮ ಮೊದಲು ಆರಂಭವಾದದ್ದು 1857ರಲ್ಲಿ. ಉತ್ತರ ಭಾರತದಲ್ಲಿ ಶುರುವಾಗಿ, ನಂತರ ಇಡೀ ದೇಶವನ್ನು ಆಕ್ರಮಿಸಿಕೊಂಡ ಈ ಹೋರಾಟ ನಡೆದದ್ದು 10ರಿಂದ ಜೂನ್ 20ರವರೆಗೆ. ಇದನ್ನು 'ಸಿಪಾಯಿ ದಂಗೆ' ಎಂದೂ ಹೇಳುತ್ತಾರೆ. ಈಸ್ಟ್ ಇಂಡಿಯಾ ಕಂಪನಿ ಯೋಧರಿಗೆ ನೀಡಿದ ಬಂದೂಕುಗಳಿಗೆ ಬಳಸುವ ಗುಂಡಿಗೆ ಆಕಳು, ಹಂದಿ ಮಾಂಸದ ಕೊಬ್ಬು ಬಳಸಲಾಗಿದೆ ಎನ್ನುವ ವದಂತಿ ಹರಡಿತು. ಇದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಹಿಂದೂ, ಮುಸಲ್ಮಾನ ಸಿಪಾಯಿಗಳ ಧಾರ್ಮಿಕ ಭಾವನೆ ಕೆರಳಿಸಿತು. ಹೀಗಾಗಿ ಅವರು ಕಂಪನಿ ವಿರುದ್ಧವೇ ದಂಗೆ ಎದ್ದರು. ಕೊನೆಗೆ ಬ್ರಿಟಿಷ್ ಸರ್ಕಾರ ಈಸ್ಟ್ ಇಂಡಿಯಾ ಕಂಪನಿಯನ್ನು ವಿಸರ್ಜಿಸಿತು. ಭಾರತದ ಆಡಳಿತವನ್ನು ತಾನೇ ವಹಿಸಿಕೊಂಡಿತು. ಹೀಗೆ ಸ್ವಾತಂತ್ರ್ಯ ಹೋರಾಟಕ್ಕೆ ಕಿಚ್ಚು ಹತ್ತಿದ ಈ ದಂಗೆ, ದೇಶದಲ್ಲಿ ನೇರವಾಗಿ ಬ್ರಿಟಿಷ್ ಆಡಳಿತ ಜಾರಿಗೆ ಬರಲೂ ಕಾರಣವಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.