ಯುವಜನ/ಮಕ್ಕಳು

ನಾಗರಹಾವು ಮತ್ತು ನವಿಲು

ಕಾಡೊಂದರಲ್ಲಿ ನವಿಲು ತನ್ನ ಅಂದ ಚೆಂದದ ಬಗ್ಗೆ ಗರ್ವಪಡುತ್ತ ಇತರ ಪಕ್ಷಿ, ಪ್ರಾಣಿಗಳನ್ನು ಹೀಯಾಳಿಸುತ್ತ ಅವುಗಳನ್ನು ತುಂಬಾ ಕೀಳಾಗಿ ಕಾಣುತ್ತಿತ್ತು...

ನಾಗರಹಾವು ಮತ್ತು ನವಿಲು
Published On :

ಕಾಡೊಂದರಲ್ಲಿ ನವಿಲು ತನ್ನ ಅಂದ ಚೆಂದದ ಬಗ್ಗೆ ಗರ್ವಪಡುತ್ತ ಇತರ ಪಕ್ಷಿ, ಪ್ರಾಣಿಗಳನ್ನು ಹೀಯಾಳಿಸುತ್ತ ಅವುಗಳನ್ನು ತುಂಬಾ ಕೀಳಾಗಿ ಕಾಣುತ್ತಿತ್ತು.
ಒಮ್ಮೆ ನಾಗರಹಾವೊಂದು ಅಲ್ಲಿಗೆ ಬಂತು. ನವಿಲನ್ನು ಕಂಡು ಸ್ನೇಹದಿಂದ ಹತ್ತಿರ ಹೋಗಿ- 'ನವಿಲಕ್ಕ.. ನವಿಲಕ್ಕ... ಚೆನ್ನಾಗಿರುವೆಯಾ?' ಎಂದು ಕ್ಷೇಮ ವಿಚಾರಿಸಿತು. ನಾಗರಹಾವಿನ ಮಾತು ಕೇಳಿಸಿದರೂ ಕೇಳದಂತೆ, ಕಂಡೂ ಕಾಣದಂತೆ ದುರಹಂಕಾರದಿಂದ 'ಓಹೋ..! ನಾಗಣ್ಣ, ನಂಗೆ ಕ್ಷೇಮಕ್ಕೆಲ್ಲಿ ಕ್ಷಾಮ! ಈ ಕಾಡಲ್ಲಿ ಮಹಾರಾಣಿಯಾಗಿ ಮೆರೆಯುತ್ತಿರುವೆ. ನಂಗೆ ಯಾರು ಸಾಟಿ? ನನ್ನ ಅಂದಕ್ಕೆ ಸಮರಿಲ್ಲ. ಯಾರ ಭಯವೂ ನನಗಿಲ್ಲ. ಯಾರ ಸಹಾಯವೂ ನನಗೆ ಬೇಕಾಗಿಲ್ಲ...' ಎಂದು ನುಡಿಯಿತು.
ನವಿಲಿನ ಮಾತು ಕೇಳಿ ನಾಗರಹಾವಿಗೆ ಒಳಗೊಳಗೇ ನಗು ಬಂತು. 'ಕಷ್ಟದ ಕಾಲದಲ್ಲಿ ಸ್ನೇಹಿತರಿರಬೇಕು. ಅಪಾಯ ಹೇಳಿಕೇಳಿ ಬರುವುದಿಲ್ಲ...' ಎನ್ನುತ್ತಿರುವಾಗಲೇ ಬೇಡನೊಬ್ಬ ಅಲ್ಲಿಗೆ ಬಂದು ನವಿಲಿಗೆ ಗುರಿಯಿಟ್ಟು ಬಾಣ ಬಿಡಬೇಕೆನ್ನುವಷ್ಟರಲ್ಲೇ... ಇದನ್ನು ಕಂಡು ನಾಗರಹಾವು ಬುಸ್ಗುಡುತ್ತಾ ವೇಗವಾಗಿ ಬೇಟೆಗಾರನನ್ನು ಕಚ್ಚಲು ಹೋಯಿತು. ಬೇಟೆಗಾರ ನಾಗರಹಾವನ್ನು ಕಂಡು ಹೆದರಿ ಬಿಲ್ಲು-ಬಾಣಗಳನ್ನು ಅಲ್ಲಿಯೇ ಎಸೆದು ಓಡಿಹೋದ. ತನ್ನ ಪ್ರಾಣ ಉಳಿಸಿದ್ದಕ್ಕೆ ನವಿಲು ನಾಗರಹಾವಿಗೆ ಅಭಿನಂದನೆ ಸಲ್ಲಿಸಿ, ಅಂದಿನಿಂದ ಅದರ ಜತೆ ಗೆಳೆತನ ಬೆಳೆಸಿತು.

- ಅಮರಯ್ಯ ಶಂಕರಯ್ಯ ಪತ್ರಿಮಠ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.