ಯುವಜನ/ಮಕ್ಕಳು

ತರಕಾರಿ ರಾಜ

Published On :

ಪುಟ್ಪುಟಾಣಿ ಮಕ್ಕಳಿಗೆ ಪುಟ್ಟಪುಟ್ಟ ಪದ್ಯಗಳು. ಪ್ರಾಸ ಇದ್ದ ರಂತೂ ಹೇಳೋಕೆ ಇಲ್ಲ ತ್ರಾಸ. ಪುಟಾಣಿಗಳಿಗೆಂದೇ ಪ್ರಾಸಬದ್ಧವಾದ, ಚೆಂದದ ಪದ್ಯಗಳನ್ನು ಬರೆದಿದ್ದಾರೆ ತೀರ್ಥಹಳ್ಳಿಯ ವಾ.ಮುರಳೀಧರ. ಇಂತಹ 21 ಕವನಗಳ ಸಂಗ್ರಹ 'ತರಕಾರಿ ರಾಜ' ಪ್ರಕಟವಾಗಿದೆ. ಅಪ್ಪನ ಕವಿತೆಗಳಿಗೆ ಮಕ್ಕಳಾದ ಮೃದುಲಾ, ಮಹಿಮಾ ಸುಂದರ ಚಿತ್ರಗಳನ್ನು ಬರೆದಿರುವುದು ವಿಶೇಷ. ಸಾಂದರ್ಭಿಕವಾಗಿ ಕೆಲವು ಛಾಯಾಚಿತ್ರಗಳನ್ನೂ ಬಳಸಿಕೊಳ್ಳಲಾಗಿದೆ.
'ಮಕ್ಕಳ ಸಾಹಿತ್ಯ ಅಂದಕೂಡಲೇ ದೊಡ್ಡ ಅಕ್ಷರ, ಚಿಕ್ಕಚಿಕ್ಕ ಒಂದೆರಡು ಸಾಲು, ಅಂತ್ಯ ಪ್ರಾಸ ಇತ್ಯಾದಿಗಳಿರಬೇಕು ಅನ್ನುವುದು ಒಂದು ಅಭಿಪ್ರಾಯ. ಆದರೆ ಪ್ರತಿಯೊಂದನ್ನೂ ಮಕ್ಕಳು ನೋಡುವ ರೀತಿ, ಅವುಗಳ ಗ್ರಹಿಕೆ, ಒಂದು ವಸ್ತುವನ್ನು ಅರ್ಥ ಮಾಡಿಕೊಳ್ಳುವ ಪರಿ ಬೇರೆಯೇ ಆಗಿರುತ್ತದೆ. ಈ ಗುಟ್ಟನ್ನು ಅರಿಯದಿದ್ದರೆ ಮಕ್ಕಳಿಗಾಗಿ ಬರೆಯುವುದು ಕಷ್ಟವಾಗುತ್ತದೆ. ವಾ.ಮುರಳೀಧರ ಈ ಅಂಶವನ್ನು ಗಮನಿಸಿದ್ದಾರೆ' ಎಂದು ಮುನ್ನುಡಿಯಲ್ಲಿ ಬೆನ್ನು ತಟ್ಟಿದ್ದಾರೆ ಡಾ.ನಾ. ಡಿ'ಸೋಜಾ.
ಬೆಂಗಳೂರಿನ ಕಮಲ ಎಂಟರ್ಪ್ರೈಸಸ್ (ದೂ: 080- 26698088) ಇದನ್ನು ಪ್ರಕಟಿಸಿದೆ. ಬೆಲೆ 35 ರುಪಾಯಿ.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.