ಅನ್ನದ ಋಣಕ್ಕೆ ಆಭಾರಿ
ಎಸ್ಸೆಸ್ಸೆಲ್ಸಿ ಪಾಸಾಗಿದ್ದೆ. ಮುಂದೆ ಕಾಲೇಜು ಸೇರಬೇಕು ಎನ್ನುವ ಯಾವುದೇ ಕಲ್ಪನೆ ನನಸಾಗಲಿ, ನನ್ನ ಮನೆಯವರಿಗಾಗಲಿ ಇರಲಿಲ್ಲ. ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಮೈತುಂಬ ಸಾಲ... ಇಂಥ ಪರಿಸ್ಥಿತಿಯಲ್ಲಿ ಮನೆಯಲ್ಲಿ ಕಾಲೇಜಿಗೆ ಕಳುಹಿಸುವುದು ದೂರದ ಮಾತಾಗಿತ್ತು. ಹಾಗಾಗಿ ನಾನು ಅನಿವಾರ್ಯವಾಗಿ ಕಾಲೇಜೊಂದರ ಕ್ಯಾಂಟೀನಲ್ಲಿ ಕೆಲಸಕ್ಕೆ ಸೇರಬೇಕಾಯಿತು. ಆದರೆ, ನನ್ನ ಅದೃಷ್ಟ. ಕ್ಯಾಂಟೀನ್ ಮಾಲೀಕರು ಹಾಗೂ ಕಾಲೇಜು ಶಿಕ್ಷಕರ ಪ್ರೀತಿ ಮತ್ತು ಪ್ರೋತ್ಸಾಹ ನನ್ನ ಬದುಕನ್ನೇ ಬದಲಾಯಿಸಿತು. ದಿನವೂ ಅದೇ ಕ್ಯಾಂಟಿನ್‌ಗೆ ಬರುತ್ತಿದ್ದ ಶಿಕ್ಷಕರು ನನ್ನ ಸ್ಥಿತಿ ನೋಡಿ ಬುದ್ಧಿವಾದ ಹೇಳಿದರು. ಶಿಕ್ಷಣದ ಮಹತ್ವದ ಕುರಿತು ತಿಳಿಹೇಳಿದರು. ತೆಗೆ ಕೈಯಲ್ಲಾದಷ್ಟು ಸಹಾಯ ಮಾಡುವ ಭರವಸೆ ನೀಡಿದರು. ಇದರ ಜತೆಗೆ, ಕಾಲೇಜು ಶಿಕ್ಷಣ ಮುಗಿಯುವವರೆಗೂ ಕ್ಯಾಂಟೀನ್‌ನಲ್ಲೇ ಊಟಮಾಡು. ಚಿಂತೆ ಮಾಡಬೇಡ ಎನ್ನುವ ಅಭಯ ಕ್ಯಾಂಟೀನ್ ಮಾಲೀಕರು, ಕೆಲಸಗಾರರಿಂದ ಸಿಕ್ಕಿತು. ಈ ಪ್ರೀತಿ, ಪ್ರೋತ್ಸಾಹ, ಪ್ರಾಂಶುಪಾಲರ ನೆರವಿನಿಂದಾಗಿ ಕೊನೆಗೂ ನಾನು ಕಾಲೇಜು ಸೇರುವಂತಾಯಿತು.
ಈಗ ಪಿಯುಸಿ ಮುಗಿಸಿದ್ದೇನೆ. ಕಾಲೇಜು ಜೀವನ ಅಂದ್ರೆ ಏನೂಂತ ಗೊತ್ತಾಗಿದೆ. ಶಿಕ್ಷಣದ ಮಹತ್ವ ಅರಿತಿದ್ದೇನೆ. ಆದರೆ, ಇದೆಲ್ಲ ಸಾಧ್ಯವಾದದ್ದು ಉಚಿತವಾಗಿ ಅನ್ನಹಾಕಿದ ಕ್ಯಾಂಟೀನ್ ಮಾಲೀಕರು ಹಾಗೂ ಪ್ರೋತ್ಸಾಹಿಸಿದ ಕಾಲೇಜು ಪ್ರಾಂಶುಪಾಲರು, ಶಿಕ್ಷಕರಿಂದ. ಇಂಥವರು ನನ್ನಂತೆ ಬಡತನದಿಂದ ಶಿಕ್ಷಣ ವಂಚಿತರಾಗಿರುವ ಇತರೆ ವಿದ್ಯಾರ್ಥಿಗಳಿಗೂ ಸಿಗಲಿ ಎನ್ನುವುದೇ ನನ್ನ ಹಾರೈಕೆ.
- ಮಹಾವೀರ ಎಸ್., ಮಣಿಪಾಲ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

