ಯುವಜನ/ಮಕ್ಕಳು

ಬಾನಾಡಿ (ಮಳೆಪಕ್ಷಿ)

ಬಾನಾಡಿ (ಮಳೆಪಕ್ಷಿ)
Published On :

ಜೆಟ್ ವಿಮಾನಗಳಂತೆ ಆಕಾಶದಲ್ಲಿ ಅತಿ ವೇಗವಾಗಿ ಹಾರಾಡುವ ಹಕ್ಕಿಗಳಿವು. ಹಾರುವಾಗ ಗಾಳಿಗೆ ಒಂದಿಷ್ಟೂ ತಡೆಯೊಡ್ಡದ ಸಣ್ಣ ಶರೀರವನ್ನು ಹೊಂದಿರುತ್ತವೆ. 15 ಸೆಂ.ಮೀ. ಉದ್ದದ ದೇಹಕ್ಕೆ ಬಿಳಿ ಗಂಟಲು, ಪೃಷ್ಠ. ಮನೆಗಳು, ಪಾಳು ಕಟ್ಟಡಗಳು, ಹಳೆ ಕೋಟೆ, ಬಾವಿ ಮುಂತಾದೆಡೆ ಗುಂಪಾಗಿ ಇವುಗಳ ವಾಸ. ಹಾರಾಡುವಾಗ ಕೀರಲು ಧ್ವನಿಯಲ್ಲಿ ಹರ್ಷದ ಕೂಗಾಟ. ಸಂಜೆಯ ವೇಳೆ ಆಕಾಶದಲ್ಲಿಯೇ ಕೀಟಗಳ ಬೇಟೆಯಾಡುತ್ತವೆ. ಆಕಾಶದಲ್ಲಿಯೇ ತಮ್ಮ ಜೀವಮಾನವನ್ನೆಲ್ಲಾ ಕಳೆಯುತ್ತವೆಯೇನೋ ಎನಿಸುತ್ತದೆ. ಅಷ್ಟೇಕೆ? ಇವು ಹಾರಾಡುತ್ತಲೇ ವಿಶ್ರಾಂತಿ ಪಡೆಯುತ್ತವೆ. ಅಗಲವಾದ ಬಾಯಿ, ಸ್ವಲ್ಪ ಕೆಳಬಾಗಿದ ಕೊಕ್ಕು ಗಾಳಿಯಲ್ಲಿ ಕೀಟಗಳನ್ನು ಹಿಡಿಯಲು ಸಹಕಾರಿ. ಹಾರಾಟದಲ್ಲಿ ಪ್ರಭುತ್ವ ಮತ್ತು ಹತೋಟಿಯಿದ್ದು, ದಿನಪೂರ್ತಿ ಆಕಾಶದಲ್ಲಿ ಹಾರಾಡಲು ತಕ್ಕ ಬಿಲ್ಲಿನಂಥ ಉದ್ದ, ಚೂಪಾದ ರೆಕ್ಕೆಗಳಿರುತ್ತವೆ. ಮುಂಜಾನೆಯ ಹೊತ್ತು ಇದ್ದಕ್ಕಿದ್ದಂತೆ ಎಲ್ಲಿಂದಲೋ ನೂರಾರು ಬಾನಾಡಿಗಳು ಪ್ರತ್ಯಕ್ಷವಾಗಿಬಿಡುತ್ತವೆ. ಸಂಜೆಯ ವೇಳೆಗೆ ಬಂದ ರೀತಿಯಲ್ಲೇ ಎತ್ತಲೋ ಹೋಗಿಬಿಡುತ್ತವೆ. ಅತಿ ಚಿಕ್ಕ ಕಾಲ್ಬೆರಳುಗಳು ಮುಂಚಾಚಿರುವುದರಿಂದ ನೆಲದ ಮೇಲೆ ಅಥವಾ ಕೊಂಬೆಗಳ ಮೇಲೆ ಕುಳಿತುಕೊಳ್ಳಲಾರವು. ಗೋಡೆ, ಮರದ ತೊಗಟೆಗೆ ಆತು ಗುಂಪಿನಲ್ಲೇ ತಂಗುತ್ತವೆ. ಇವು ಗೂಡು ಕಟ್ಟುವುದೇ ವಿಶೇಷ. ಎಂಜಲಿನೊಂದಿಗೆ ಹುಲ್ಲು, ಎಲೆಗಳು, ಮಣ್ಣು ಸೇರಿಸಿ, ಆ ಹಿಟ್ಟಿನಿಂದ ಗೂಡನ್ನು ಬಟ್ಟಲಿನ ರೀತಿ ತಯಾರಿಸಿ ಗೋಡೆಗೆ ಅಂಟಿಸುತ್ತವೆ. ಮೊಟ್ಟೆ ಇಟ್ಟ 19-23 ದಿನಗಳಲ್ಲಿ ಮರಿಯಾಗುತ್ತದೆ. ಆರು ವಾರಗಳ ನಂತರ ಮರಿ ಗೂಡಿನಿಂದ ಹೊರಗೆ ಹಾರುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.