ಯುವಜನ/ಮಕ್ಕಳು

ವ್ಹಾ ಸುಂದರ ರಜೆ!

ರಜೆಯ ಅವಧಿಯಲ್ಲಿ ಏನೇನು ಮಾಡಬಹುದು ಎಂಬ ಬಗ್ಗೆ ಒಂದಷ್ಟು ಟಿಪ್ಸ್‌ಗಳು ಇಲ್ಲಿವೆ...

ವ್ಹಾ ಸುಂದರ ರಜೆ!
Published On :

ಅಂತೂ ಇಷ್ಟು ದಿನ ಇಷ್ಟಪಟ್ಟು, ಕಷ್ಟಪಟ್ಟು ಓದಿದ ಪಠ್ಯವನ್ನು ಉತ್ತರ ರೂಪದಲ್ಲಿ ಬರೆದು ಪಿಯುಸಿ ಪರೀಕ್ಷೆ ಎಂಬ ಶೈಕ್ಷಣಿಕ ಘಟ್ಟವನ್ನು ಮುಗಿಸಿಯಾಯಿತು. ಇನ್ನೇನಿದ್ದರೂ ಫಲಿತಾಂಶಕ್ಕಾಗಿ ಕಾಯುವುದಷ್ಟೇ ಕೆಲಸ.
ಪಾಸು ಫೇಲುಗಳ ಹಾವು ಏಣಿಯಾಟ ಬದುಕಿನಲ್ಲಿ ಇದ್ದದ್ದೆ. ಹಾಗಂತ ರಜೆಯ ಮಜಾವನ್ನು ಅದೇ ಗುಂಗಿನಲ್ಲಿ ಹಾಳು ಮಾಡಿಕೊಳ್ಳಬೇಕೇ?
ಖಂಡಿತಾ ಬೇಡ. ಪರೀಕ್ಷೆ ಮುಗಿಸಿ, ತಿಂಗಳ ಕಾಲ ಫಲಿತಾಂಶಕ್ಕಾಗಿ ಕಾಯುವ ವಿದ್ಯಾರ್ಥಿಗಳಿಗೆ ಈ ಅವಧಿಯಲ್ಲಿ ಏನೇನು ಮಾಡಬಹುದು ಎಂಬ ಬಗ್ಗೆ ಒಂದಷ್ಟು ಟಿಪ್ಸ್‌ಗಳು ಇಲ್ಲಿವೆ...

  • ಫಲಿತಾಂಶ ಏನಾಗುತ್ತದೋ ಎಂದು ಚಿಂತಿಸುತ್ತಾ ತಲೆ ಕೆಡಿಸಿಕೊಳ್ಳಬೇಡಿ. ಕೆಲವು ದಿನಗಳವರೆಗೆ ಪಠ್ಯ, ಪರೀಕ್ಷೆ ಮುಂತಾದ ವಿಚಾರಗಳಿಂದ ಸಂಪೂರ್ಣ ದೂರ ಇಟ್ಟುಬಿಡಿ.
  • ಸುತ್ತಮುತ್ತ, ಹೋದ ಕಡೆಗೆಲ್ಲಾ ಪರಿಚಿತರು ಎಕ್ಸಾಮ್ ಹೇಗೆ ಮಾಡಿದ್ದೀಯಪ್ಪಾ..? ಅಂತ ಜನ ಕೇಳ್ತಾರೆ. ನೀವು ಹೇಗೇ ಎಕ್ಸಾಮ್ ಬರೆದಿದ್ರೂ ಚೆನ್ನಾಗಿ ಮಾಡಿದ್ದೀನಿ ಎಂಬ ಸಿದ್ಧ ಉತ್ತರವನ್ನೇ ನೀಡಿ.
  • ನೀವು ಹಾಸ್ಟೆಲ್‌ನಲ್ಲಿ ಇದ್ದವರಾಗಿದ್ರೆ ಫ್ರೆಂಡ್ಸ್, ರೂಮ್ ಮೇಟ್ಸ್‌ಗಳ ಮನೆಗಳಿಗೆಲ್ಲಾ ಜಾಲಿ ಟ್ರಿಪ್ ಹೋಗಿಬನ್ನಿ. ಆಯಾಯ ಊರಿನ ಪುರಾಣ, ಪರಿಸರಗಳನ್ನು ಸುಮ್ಮನೆ ಸ್ಟಡಿ ಮಾಡಿ.
  • ಫ್ಯಾಮಿಲಿ ಟೂರ್‌ಗೆ ಹೋಗೋಕೆ ಇದು ಸೂಕ್ತ ಸಮಯ. ನೀವು ಒಬ್ರೆ ಹೋಗೋದಾದ್ರೆ ದೂರದ ಊರುಗಳಲ್ಲಿರುವ ಸಂಬಂಧಿಕರ ಮನೆಗೆ ಈ ಟೈಮ್‌ನಲ್ಲಿ ಭೇಟಿ ಕೊಡಿ. ಒಂದೆರಡು ದಿನ ಇದ್ದು ಬನ್ನಿ. ಇದರಿಂದ ಸಂಬಂಧ ವೃದ್ಧಿಸುವುದಷ್ಟೇ ಅಲ್ಲ ಅವರಿಗೂ ನೀವು ಬಂದು ಹೋದ ಸಮಾಧಾನ ಇರುತ್ತದೆ.
  • ಊರ ಜಾತ್ರೆ, ಸಂಬಂಧಿಕರ ಮನೆಯ ಕಾರ್ಯಕ್ರಮಗಳು ಯಾವುದನ್ನೂ ಮಿಸ್ ಮಾಡಿಕೊಳ್ಳಬೇಡಿ. ಎರಡು ದಿನ ಮುಂಚಿತವಾಗಿಯೇ ಹೋಗಿ, ಸಹಾಯ ಮಾಡಿ.
  • ತಿಂಗಳು, 2 ತಿಂಗಳ ಅವಧಿಯ ಕಂಪ್ಯೂಟರ್ ತರಬೇತಿ ಸೇರಿದಂತೆ ಯಾವುದಾದರೂ ಕೋರ್ಸ್‌ಗಳಿಗೆ ಸೇರಿಕೊಳ್ಳಿ. ಅಥವಾ ಮುಂದಿನ ತರಗತಿಗಳಿಗೆ ಅನುಕೂಲವಾಗುವ ಯಾವುದೇ ವಿಷಯವನ್ನು ಅಧ್ಯಯನ ಮಾಡಿ.
  • ಬೇಸಿಗೆ ಶಿಬಿರದಲ್ಲಿ ಭಾಗವಹಿಸಿ. ನಿಮ್ಮ ಕುಟುಂಬದಲ್ಲಿರುವ ನಿಮಗಿಂತ ಕೆಳ ತರಗತಿಯಲ್ಲಿ ಓದುತ್ತಿರುವವರಿಗೆ ಸ್ಪೆಷಲ್ ಕ್ಲಾಸ್‌ಗಳನ್ನು ಮಾಡಿ ನೋಡಿ.
  • ರಜಾ ಅವಧಿಯಲ್ಲಿ ಕತೆ, ಕವನ, ಕಾದಂಬರಿ ಸೇರಿದಂತೆ ಯಾವುದಾದರೂ ಉತ್ತಮ ಪುಸ್ತಕಗಳನ್ನು ಓದಿ.
  • ಊರಿನ ಗ್ರಂಥಾಲಯಕ್ಕೆ ಭೇಟಿ ಕೊಟ್ಟು ದಿನ, ವಾರ ಪತ್ರಿಕೆಗಳನ್ನು ಓದುವುದರ ಜೊತೆಗೆ, ಪತ್ರಿಕೆಗಳಿಕೆ ಕತೆ, ಕವನಗಳನ್ನು ಬರೆಯಿರಿ. ಕೆಲವೊಮ್ಮೆ ಇದು ನಿಮ್ಮೊಳಗಿರುವ ಲೇಖಕನನ್ನು ಹೊರಜಗತ್ತಿಗೆ ಪರಿಚಯಿಸಲು ನೆರವಾಗಬಹುದು.
  • ಸ್ವಂತ ಹಣದಿಂದ ಓದುವ ವಿದ್ಯಾರ್ಥಿಗಳ ಪಾಲಿಗೆ ರಜಾ ಅವಧಿ ಮಹತ್ವದ್ದು. ಮುಂದಿನ ಅಧ್ಯಯನಕ್ಕೆ ಬೇಕಾದಷ್ಟು ಹಣ ಗಳಿಸಲು ಈ ಎರಡು ತಿಂಗಳು ಯಾವುದಾದರೂ ಉದ್ಯೋಗಕ್ಕೆ ಸೇರಿಕೊಳ್ಳಬಹುದು.
  • ಇಷ್ಟುದಿನ ಕಷ್ಟಪಟ್ಟು ನೋಡಬೇಕಾಗಿದ್ದ ಫೇಸ್‌ಬುಕ್, ಮೊಬೈಲ್, ಫಿಲ್ಮ್‌ಗಳನ್ನು ಯಾವುದೇ ಹಿಂಜರಿಕೆ ಇಲ್ಲದೆ ಯಥೇಚ್ಛವಾಗಿ ನೋಡಿ. ಸಾಮಾಜಿಕ ಸಂಬಂಧ ವೃದ್ಧಿಸಿಕೊಳ್ಳಿ. ಹಾಗಂತ ಇವುಗಳ ಗೀಳಿಗೆ ಬೀಳಬೇಡಿ.
ಸುಧೀಂದ್ರ ಜಮ್ಮಟಿಗೆ
sudheeja@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.