ಯುವಜನ/ಮಕ್ಕಳು

ಫುಡ್ ವರ್ಕ್

ಫುಡ್ ವರ್ಕ್
Published On :

ರಾತ್ರಿ ಹೊತ್ತು ಜಾಗರಣೆ. ಹಗಲಿಡೀ ನಿದ್ದೆ. ಬಾಯಾರಿದಾಗ ಪೆಪ್ಸಿ, ಕೋಲಾ. ಹಸಿದಾಗ ಜಂಕ್ ಫುಡ್. ಎಂಎನ್‌ಸಿಗಳಲ್ಲಿ ಕೆಲಸ ಮಾಡುವ ಬಹುತೇಕ ಯುವಜನರ ದಿನಚರಿ ಇದು. ಹೀಗಾಗಿ ಹೆಚ್ಚಿನವರು ಸಣ್ಣ ವಯಸ್ಸಲ್ಲೇ ಡಯಾಬಿಟಿಸ್, ಸ್ಥೂಲಕಾಯ, ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಾರೆ.
ರಾತ್ರಿ ಪಾಳಿ ಕೆಲಸ, ಹಸಿದಾಗ ಹಾಳುಮೂಳು ತಿನ್ನುವುದರಿಂದ ಯುವಜನರಿಗೆ ಆ ಕ್ಷಣಕ್ಕೆ ಏನೂ ಅನಿಸದೆ ಇರಬಹುದು. ಆದರೆ, ಇದು ಭವಿಷ್ಯದಲ್ಲಿ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನೆ ಉಂಟುಮಾಡುತ್ತದೆ. ಇದರ ಒಟ್ಟಾರೆ ಪರಿಣಾಮ ಕಂಪನಿಯ ಉತ್ಪಾದಕತೆ ಮೇಲಾಗುತ್ತದೆ.
ಹೀಗಾಗಿ ಕೆಲ ಖಾಸಗಿ ಕಂಪನಿಗಳು ತಮ್ಮ ಉದ್ಯೋಗಿಗಳ ಆರೋಗ್ಯದ ಕುರಿತೂ ಕಾಳಜಿವಹಿಸಲು ಆರಂಭಿಸಿವೆ. ಧ್ಯಾನ, ಯೋಗ, ಕೌನ್ಸೆಲಿಂಗ್ ಸೆಂಟರ್, ಆರೋಗ್ಯಕರ ಉಪಹಾರ ಗೃಹಗಳನ್ನು (ಕೆಫೆಟೇರಿಯ) ತೆರೆಯುತ್ತಿವೆ. ಉತ್ತಮ ಆರೋಗ್ಯಕ್ಕಾಗಿ ಜಾಗೃತಿ ಕಾರ್ಯಾಗಾರವನ್ನೂ ನಡೆಸುತ್ತಿವೆ. ಡಯಟಿಶಿಯನ್‌ಗಳು ಕಂಪನಿ ಸಿಬ್ಬಂದಿಯ ಆಹಾರ ಪದ್ಧತಿ ಯಾವ ರೀತಿಯಲ್ಲಿರಬೇಕು ಎಂಬುದನ್ನು ಸೂಚಿಸುತ್ತಾರೆ. ಅದರಂತೆ ಉದ್ಯೋಗಿಗಳಿಗೆ ಕಂಪನಿಗಳು ಉಪಹಾರ ಗೃಹಗಳ ಮೂಲಕ ಆಹಾರ ಪೂರೈಸುತ್ತವೆ.

ಮೇಲ್ ಸಲಹೆ
ಕೆಲವೊಮ್ಮೆ ಕೆಲಸ ವಿಪರೀತ ಒತ್ತಡವೆನಿಸಿಬಿಡುತ್ತದೆ. ಹೆಲ್ತ್ ಪ್ರೋಗ್ರಾಂಗಳು ಕಂಪನಿ ವತಿಯಿಂದ ಆಗಾಗ ನಡೆಯುತ್ತಿರುತ್ತವೆ. ಮುಖ್ಯವಾಗಿ ಫಿಟ್‌ನೆಸ್‌ಗಾಗಿ ಎಚ್‌ಆರ್ ವಿಭಾಗದಿಂದ ಸಲಹೆಗಳನ್ನು ಮೇಲ್ ಮಾಡ್ತಾರೆ. ಹೆಚ್ಚು ಒತ್ತಡ ಮತ್ತು ರಾತ್ರಿ ಪಾಳಿ ಕೆಲಸ ಮಾಡುವವರಿಗೆ ಇದು ಉಪಯೋಗಕಾರಿ.
- ರಾಜೇಶ್ವರಿ,  ಕಾಲ್‌ಸೆಂಟರ್‌ನ ಉದ್ಯೋಗಿ

6-7 ಗಂಟೆ ನಿದ್ದೆ
ರಾತ್ರಿ ಕೆಲಸ ಮಾಡುವವರಿಗೆ ಹೆಚ್ಚಾಗಿ ವಿಟಮಿನ್ 'ಬಿ' ಅಗತ್ಯವಿರುತ್ತದೆ. ಅದಕ್ಕೆ ಪೂರಕವಾಗಿ ಹಸಿರು ತರಕಾರಿ ಸೇವನೆ ಉತ್ತಮ. ಕಾಫಿ, ಟೀ ಹೆಚ್ಚು ಸೇವಿಸಬೇಡಿ. ರಾತ್ರಿ ಹೊತ್ತು ದೇಹದಲ್ಲಿ ನೀರಿನಂಶ ಕೊರತೆಯಾಗುವುದರಿಂದ ಹೇರಳವಾಗಿ ನೀರು ಕುಡಿಯಬೇಕು. ಡ್ರೈಫ್ರ್ಯೂಟ್ಸ್‌ಗಳನ್ನು ನೀರಲ್ಲಿ ನೆನೆಸಿಟ್ಟು ತಿನ್ನಬೇಕು. ಪ್ರತಿ ದಿನ ಕನಿಷ್ಠವೆಂದರೂ 6- 7 ಗಂಟೆ ನಿದ್ದೆ ಮಾಡಿ.
- ಡಾ. ರವಿನಾರಾಯಣ, ಪುತ್ತೂರು

ದ್ರಾಕ್ಷಿ, ಗೋಡಂಬಿ ತಿನ್ನಿ
ಬಿಸ್ಕತ್ತು, ಒಣ ದ್ರಾಕ್ಷಿ, ಗೋಡಂಬಿ, ಬಾದಾಮಿ, ಹಣ್ಣುಗಳನ್ನು ಇಟ್ಟುಕೊಳ್ಳುವುದು ಉತ್ತಮ. ಹಸಿದಾಗ ಇವುಗಳನ್ನು ತಿನ್ನಬಹುದು ಮತ್ತು ಇದು ಆರೋಗ್ಯಕ್ಕೂ ಉತ್ತಮ.

ಊಟ ಬಿಡಬೇಡಿ
ಬೊಜ್ಜು ಹೆಚ್ಚುವುದರಿಂದ 1- 2 ಹೊತ್ತಿನ ಊಟ ಬಿಟ್ಟರೆ ಸರಿಯಾಗುತ್ತದೆ ಎನ್ನುವ ತಪ್ಪುಕಲ್ಪನೆ ಬಹುತೇಕರಲ್ಲಿದೆ. ಇದರಿಂದಾಗಿ ಬಹುತೇಕರು ಗ್ರಾಸ್ಟ್ರಿಕ್ ಸಮಸ್ಯೆಗೆ ಒಳಗಾಗುತ್ತಾರೆ. ಮಾತ್ರವಲ್ಲದೆ ಊಟ, ತಿಂಡಿ ಬಿಟ್ಟು ಬರೀ ಕಾಫಿ, ಟೀ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.

-ವಿದ್ಯಾ ಇರ್ವತ್ತೂರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.