ದೂರವಿರು ದೂರವಿರು
ಕೆಲವು ಚಾಟೂಕ್ತಿಗಳು, ಒಗಟಿನಂತಿರುತ್ತವೆ. ಅವಕ್ಕೆ ಉತ್ತರವನ್ನು ಹುಡುಕಬೇಕು. ಆ ಪ್ರಶ್ನೋತ್ತರದಲ್ಲೇ ಒಂದು ಜೀವನ ವಿಧಾನ, ಒಂದು ರೀತಿ...

ಕೆಲವು ಚಾಟೂಕ್ತಿಗಳು, ಒಗಟಿನಂತಿರುತ್ತವೆ. ಅವಕ್ಕೆ ಉತ್ತರವನ್ನು ಹುಡುಕಬೇಕು. ಆ ಪ್ರಶ್ನೋತ್ತರದಲ್ಲೇ ಒಂದು ಜೀವನ ವಿಧಾನ, ಒಂದು ರೀತಿ ರಿವಾಜನ್ನು ನಮ್ಮ ಮುಂದೆ ಕಣ್ಣಿಗೆ ಕಟ್ಟಿದಂತೆ ಇಡುತ್ತವೆ. ಈ ಕೆಳಗಿನ ಚಾಟೂಕ್ತಿ ಅಂಥದು.
ಅನುತೇತುಂ ಮಾನಿನ್ಯಾ ದಯಿತಶ್ಚರಣೇ ಸರಾಗ ಚರಣಾಯಾಃ
ಯಾವತ್ಪತಿತಃ ಸ ತಯಾ ತತ್‌ಕ್ಷಣಮವಧೀರಿತಃ ಕಸ್ಮಾತ್
ಪತ್ನಿಯ ಬಳಿಗೆ ಬಂದ ಪತಿ, ಆಕೆಯನ್ನು ಸಲ್ಲಾಪಕ್ಕೆ ಕರೆದ. ಆಕೆಯಾದರೋ ಕೆಂಪು ಪಾದಗಳನ್ನು ಹೊಂದಿದ ಸುಂದರಿ. ಆದರೆ ಆ ಹೊತ್ತಿನಲ್ಲಿ ಆಕೆಯ ಪಾದಕ್ಕೆ ಇನ್ನಷ್ಟು ಕೆಂಪು ಸೇರಿತ್ತು. ಆದ್ದರಿಂದ ಆಕೆ ಆತನನ್ನು ಸೇರಲು ಒಲ್ಲದೆ, ದೂರವಿರುವಂತೆ ತಿಳಿಸಿದಳು.
ಅರೆ, ಆಕೆಯ ಪಾದ ಕೆಂಪಾದರೆ ದೂರವಿರಬೇಕೇಕೆ? ಅಂದರೆ, ಆಕೆ ರಜಸ್ವಲೆಯಾಗಿದ್ದಳು ಎಂಬುದು ಅದರರ್ಥ. ದೂರವಿರು ಎಂದದ್ದು ಕೋಪದಿಂದಲ್ಲ, ಮುಂದಿನ ಮೂರು ದಿನಗಳ ಮಟ್ಟಿಗೆ ಅಷ್ಟೇ. ತಿಂಗಳ ಮೂರು ದಿವಸಗಳ ಪಾಡು ಎಲ್ಲ ಹೆಣ್ಣುಗಳಿಗೂ ಸಾಮಾನ್ಯವಾದುದಷ್ಟೆ. ಆ ಹೊತ್ತಿನಲ್ಲಿ ಗಂಡನನ್ನು ಮಾತ್ರವಲ್ಲ, ಇಡೀ ಮನೆಯವರನ್ನೇ ದೂರವಿಡಬೇಕೆಂಬುದು ಪ್ರಾಚೀನ ಭಾರತದ ಹೆಣ್ಣಿಗಿದ್ದ ಕಟ್ಟುಕಟ್ಟಳೆ. ಅದನ್ನು ಕವಿತೆಯಲ್ಲಿ ತಂದ ಕವಿ (ಅಥವಾ ಕವಯಿತ್ರಿಯೋ?)ಗೂ ಮುಕ್ತತನವಿದ್ದಿರಬೇಕು.
ಪತ್ರಿಕೆಗಳಲ್ಲಿ ಬರುವ ಲೈಂಗಿಕ ಸಮಸ್ಯೆ ಸಮಾಧಾನಗಳನ್ನು ನೋಡಿದರೆ, ಪ್ರತಿವಾರವೂ ಒಂದಲ್ಲ ಒಂದು ಪ್ರಶ್ನೆ 'ಮುಟ್ಟಿನ ಅವಧಿಯಲ್ಲಿ ದಂಪತಿಗಳು ಸೇರಬಹುದೇ?' ಎಂದೇ ಇರುತ್ತದೆ. ಡಾಕ್ಟರರ ಉತ್ತರವೂ ಅದೇ- 'ಸೇರಬಹುದು, ಆದರೆ ಸ್ವಚ್ಛತೆ ಮುಖ್ಯ.' ಪಾಪ, ಹಿಂದಿನ ಕಾಲದಲ್ಲಿ ಗೈನಕಾಲಜಿಸ್ಟ್‌ಗಳು ಇರಲಿಲ್ಲವಲ್ಲ.
-ಹರಿಹರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


