ಆಸ್ತಿ ಅಂತಸ್ತು
'ಅಲ್ಲಾ, ಸರ್ಕಾರಿ ಆಫೀಸಿನಲ್ಲಿರೋರು, ಎಷ್ಟೆಲ್ಲಾ ಆಸ್ತಿ ಮಾಡ್ಕೋತಾರೆ. ನೀವೇ ಸರಿ, ತಹಸಿಲ್ದಾರರಾಗಿ ರಿಟೈರ್ಡ್...
'ಅಲ್ಲಾ, ಸರ್ಕಾರಿ ಆಫೀಸಿನಲ್ಲಿರೋರು, ಎಷ್ಟೆಲ್ಲಾ ಆಸ್ತಿ ಮಾಡ್ಕೋತಾರೆ. ನೀವೇ ಸರಿ, ತಹಸಿಲ್ದಾರರಾಗಿ ರಿಟೈರ್ಡ್ ಆದರೂ, ಕುಚೇಲನ ಹಾಗೆ ಬದುಕಿರೋರು, ಇಬ್ರೂ ಗಂಡು ಮಕ್ಕಳು ನಾಳೆ ಇರೋದೊಂದು ಮನೆ ಗಾಗಿ ಜಗಳ ಆಡಿ ಸಂಬಂಧ ಕೆಡಿಸ್ಕೋಬೇಕಾ? ಇನ್ನೊಂದು ಮನೆ ಬೇಕಿತ್ತಲ್ವಾ? ಆ ಎಫ್.ಡಿ.ಎ. ರಾಜಶೇಖರಯ್ಯನನ್ನು ನೋಡಿ ನಮ್ಮನೆ ಎದ್ರು ಎರಡು ಬಂಗ್ಲೆ ಕೊಂಡುಕೊಂಡ. ಅವನ ವ್ಯವಹಾರ ಜ್ಞಾನ ನಿಮಗೆಲ್ಲಿ ಬರಬೇಕು...?'
ನನ್ನ ಹೆಂಡತಿಯ ಆಕ್ಷೇಪಣೆ ಮುಂದುವರಿದಿತ್ತು. ಪಾಪ, ನನ್ನ ಮಡದಿ, ನಾನವಳಿಗಾಗಿ ಏನೂ ಗಂಟು ಕೂಡಿಸಿಟ್ಟಿಲ್ಲ. ಸರ್ವೀಸ್‌ನಲ್ಲಿದ್ದಾಗ ನಾನ್ಯಾರಲ್ಲೂ ಲಂಚಕ್ಕಾಗಿ ಕೈವೊಡ್ಡಿದವನಲ್ಲ. ಅಧಿಕಾರ ದುರ್ಬಳಕೆ ಮಾಡಿಕೊಂಡವನಲ್ಲ. ನನ್ನಪ್ಪನ ಕುಟುಂಬದೊಡ್ಡದು, ಬಡತನ ಬೇರೆ. ನನಗೆ ಬರುತ್ತಿದ್ದ ಸಂಬಳ ಯಾವುದಕ್ಕೂ ಸಾಲುತ್ತಿರಲಿಲ್ಲ. ಹೆಂಡತಿಗೂ ಸಾಕಾಗಿ ಹೋಗಿತ್ತು. ಅದಕ್ಕೆಂದೇ ಅವಳ ಬೈಗುಳಗಳನ್ನೆಲ್ಲಾ ಮೌನವಾಗಿ ಸಹಿಸಿಕೊಂಡಿದ್ದೇನೆ.
ಇನ್ನೊಂದು ವಿಷಯ, ಮೊನ್ನೆ ಮೊನ್ನೆ ಲೋಕಾಯುಕ್ತರು ಆ ಎಫ್. ಡಿ.ಎ. ರಾಜಶೇಖರನ ಮನೆಗೆ ದಾಳಿಮಾಡಿ, ಆದಾಯ ಮೀರಿದ ಆಸ್ತಿ ಮಾಡಿರುವ ಗುಟ್ಟು ರಟ್ಟಾಗಿರುವುದರಿಂದ ಅವನ ಆಸ್ತಿ - ಪಾಸ್ತಿಯನ್ನೆಲ್ಲಾ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ನಮ್ಮನೆ ಎದುರಿನ ಅವನ ಬಂಗಲೆಗೂ ಬೀಗ ಜಡಿದಿದ್ದಾರೆ. ಹಾಂ! ಮನೆಯದುರಿನ ಬಂಗಲೆಗೆ ಮಾತ್ರವಲ್ಲ, ನನ್ನ ಹೆಂಡತಿಯ ಬಾಯಿಗೂ ಇದೀಗ ಬೀಗ ಬಿದ್ದಿದೆ.
-ಕೇವೀಟಿ ಮೇಗೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

