ಸೀರೆ ಸರಿಸಿದ ಭಾರ್ಗವ

ಶ್ರೀ ವಾದಿರಾಜ ಸ್ವಾಮಿಗಳು ತಮ್ಮ ಭಾರತ ಪಾದಯಾತ್ರೆಯನ್ನು ಪರಶುರಾಮ ಕ್ಷೇತ್ರವೆನಿಸಿದ ಕನ್ನಡದ ಕರಾವಳಿಯಿಂದ ಆರಂಭಿಸಿದರು. ಅದೂ ಉಡುಪಿಯಿಂದ. ಅವರು ಅದನ್ನು ಕೊನೆಗೊಳಿಸಿದ್ದು ಕೇರಳದ ತಿರುವನಂತಪುರದ ಶ್ರೀ ಅನಂತಪದ್ಮನಾಭನ ಸನ್ನಿಧಿಯಲ್ಲಿ. ಗೋವಾ ಅಂಚಿನಿಂದ ಕೇರಳದ ಅಂಚಿನವರೆಗಿನ ಕಡಲ ಕರೆಯನ್ನು ಪರಶುರಾಮ ಸೃಷ್ಟಿ ಎನ್ನುತ್ತಾರೆ. ಈ ಸೃಷ್ಟಿಯನ್ನು ಸೊಗಸಾಗಿ ವರ್ಣಿಸಿರುವ ವಾದಿರಾಜರ ಒಂದು ರಚನೆ 'ತೀರ್ಥಪ್ರಬಂಧ'ದಲ್ಲಿ ಇದೆ.
ಕರ್ಣೇ ಪದನ್ಯಸ್ತ ರುಚೀ ರಿರಂಸುರ್ವಾರಾಶಿವಸ್ತ್ರಂ ಜಘನಾಧ್ಧಿ ಯಸ್ಯಾ
ಆಮೂಮುಚತ್ಬಾಣಕರೇಣ ಭೂಮೆ ಶ್ರೀ ಭಾರ್ಗವಃ ಸಾ ಜಯತಿ ಕ್ಷಿತಿರ್ನಃ
ಗೋಕರ್ಣದಲ್ಲಿ ಪದವೂರಿದ ಭಾರ್ಗವನಿಗೆ ಭೂದೇವಿಯನ್ನು ನೋಡಿ ಸರಸವಾಡುವ ಭಾವ ಅಂಕುರಿಸಿತು. (ಎಷ್ಟಾದರೂ ಭಾರ್ಗವ, ವಿಷ್ಣುವಿನ ಅವತಾರ. ಭೂದೇವಿ ವಿಷ್ಣುವಿನ ಮಡದಿ). ಭೂಮಿಗೆ ಸಮುದ್ರವೇ ವಸನ, ಪರ್ವತಗಳೇ ಸ್ತನಮಂಡಲ. ಪರಶುರಾಮ ಮೆಲ್ಲನೆ ತುಂಟತನದಿಂದ ಆಕೆಯ ಜಘನದ ಮೇಲಿನ ವಸನವನ್ನು ಬಾಣ ಪ್ರಯೋಗಿಸಿ ತುಸುವೇ ತುಸು ಸರಿಸಿದ!
ಇಲ್ಲಿ ಬ್ರಹ್ಮಚಾರಿ ಪರಶುರಾಮ ಹೇಗೆ ಸರಸವಾಡಲು ಸಾಧ್ಯ ಎಂಬ ಔಚಿತ್ಯಭಂಗ ಕೊಂಚ ಮೂಡುತ್ತದಾದರೂ, ಆತ ವಿಷ್ಣುವಿನ ಅವತಾರ ಎಂಬ ಸಮಾಧಾನೋಕ್ತಿಯಿಂದಾಗಿ, ಇಡೀ ಶ್ಲೋಕ ಅಪೂರ್ವ ರಚನೆಯಾಗಿ ಕಂಗೊಳಿಸುತ್ತದೆ. ವಾದಿರಾಜರ ಚೆಲುವಾದ ಈ ಶ್ಲೋಕವನ್ನು ಒದಗಿಸಿಕೊಟ್ಟವರು ಮೈಸೂರಿನ ಎಸ್.ರಾಘವೇಂದ್ರ.
-ಹರಿಹರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


