ಬೈಟುಕಾಫಿ

ಝಲಕ್ ದಿಕ್‌ಲಾಜಾ

ಕಲರ್ಸ್‌ಚಾನೆಲ್‌ನ ಜನಪ್ರಿಯ ಡ್ಯಾನ್ಸ್ ಶೋ ಝಲಕ್ ದಿಕ್‌ಲಾಜಾ ಸೀಸನ್ 7 ಇದೇ ಜೂನ್ 7ರಿಂದ ಆರಂಭಗೊಂಡಿದೆ...

ಝಲಕ್ ದಿಕ್‌ಲಾಜಾ
Published On :

ಕಲರ್ಸ್‌ಚಾನೆಲ್‌ನ ಜನಪ್ರಿಯ ಡ್ಯಾನ್ಸ್ ಶೋ ಝಲಕ್ ದಿಕ್‌ಲಾಜಾ ಸೀಸನ್ 7 ಇದೇ ಜೂನ್ 7ರಿಂದ ಆರಂಭಗೊಂಡಿದೆ. ಪ್ರತೀ ಬಾರಿಯಂತೆ ಈ ಬಾರಿಯೂ ಸೆಲೆಬ್ರಿಟಿ ಸ್ಪರ್ಧಾರ್ಥಿಗಳು ಝಲಕ್ ವೇದಿಕೆಯಲ್ಲಿ ಕುಣಿದು ತಮ್ಮ ಸಾಮರ್ಥ್ಯ ಪ್ರದರ್ಶಿಸಲಿದ್ದಾರೆ. ಇಲ್ಲಿನ ಸ್ಪರ್ಧಾರ್ಥಿಗಳೆಲ್ಲರೂ ನುರಿತ ನೃತ್ಯಪಟುಗಳಾಗಿದ್ದು, ವಿವಿಧ ನೃತ್ಯಶೈಲಿಗಳ ಜತೆಗೆ ಪಾಶ್ಚಾತ್ಯ ಶೈಲಿಯ ಕಪೋಯೆರಾ, ಜೌಕ್ , ಬೊಲೇರೋ ಶೈಲಿಯ ನೃತ್ಯಗಳನ್ನು ಪ್ರದರ್ಶಿಸಲಿದ್ದಾರೆ ಎಂದು ಝಲಕ್ ಟೀಂ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಧುರಿ ದೀಕ್ಷಿತ್ ಹೇಳಿದ್ದಾರೆ.   ನಿಷೇಧಿತ ಕ್ರಿಕೆಟರ್ ಶ್ರೀಶಾಂತ್, ಕಾಮಿಡಿ ನೈಟ್ ವಿಥ್ ಕಪಿಲ್ ಕಾರ್ಯಕ್ರಮದ ಪಲಕ್ ಅಲಿಯಾಸ್ ಕುಕು ಶರ್ದಾ ಭಾಗವಹಿಸುತ್ತಿರುವುದು ಈ ಆವೃತ್ತಿಯ ಹೈಲೆಟ್.
ಇನ್ನುಳಿದಂತೆ ಕಿರುತೆರೆ ನಟಿ ಪೂಜಾ ಬೋಸ್, ಏಕ್ ಹಜಾರೋಂಮೆ ಮೇರಿ ಬೆಹನಾ ಹೇ ಧಾರಾವಾಹಿಯಲ್ಲಿ ಮಿಂಚಿದ ನಟ, ರೂಪದರ್ಶಿ ಕರನ್ ಟಾಕರ್ , ಬ್ರಿಟಿಷ್ ನಟಿ, ವಿಜೆ ಹಾಗು ಗಾಯಕಿ ಸೋಫಿ ಚೌಧರಿ,  ನಟ ಮತ್ತು ವಿಜೆ ಪೂರಬ್ ಕೊಹ್ಲಿ, ರಂಗ್ ರಸಿಯಾ ಧಾರಾವಾಹಿ ಖ್ಯಾತಿಯ ಆಶಿಷ್ ಶರ್ಮಾ, ಕಿರುತೆರೆ ನಟಿ ಮೌನಿ ರಾಯ್, ಖ್ಯಾತ ಗಾಯಕ ಸುಖ್ವಿಂದರ್ ಸಿಂಗ್, ಶಕ್ತಿ ಮೋಹನ್ ಹಾಗೂ  ಐಟಿಜ್ಝಛ ಎ್ಟಡಿ ಖಿಛಟಜಟಿಡಿ ಕಾರ್ಯಕ್ರಮದಲ್ಲಿ ದಬಾಂಗ್ ಡ್ಯಾನ್ಸ್ ಮಾಡಿ ಜನಪ್ರಿಯನಾದ ಮುದ್ದು ಬಾಲಕ ಅಕ್ಷತ್‌ಸಿಂಗ್ ಸ್ಪರ್ಧಾ ಕಣದಲ್ಲಿದ್ದಾರೆ. ಪ್ರಸ್ತುತ ಕಾರ್ಯಕ್ರಮದ ತೀರ್ಪುಗಾರರಾಗಿ ನಿರ್ದೇಶಕ ಕರಣ್ ಜೋಹರ್, ನಟಿ ಮಾಧುರಿ ದೀಕ್ಷಿತ್, ನೃತ್ಯ ನಿರ್ದೇಶಕ ರೆಮೋ ಡಿಸೋಜಾ ಜತೆ ಈ ಬಾರಿ ಅಂತಾರಾಷ್ಟ್ರೀಯ ಮಟ್ಟದ ಡ್ಯಾನ್ಸ್ ಶೋ ಡ್ಯಾನ್ಸಿಂಗ್ ವಿಥ್ ಸ್ಟಾರ್ಸ್ 2014 ವಿಜೇತ ಉಕ್ರೇನ್‌ನ ಮ್ಯಾಕ್ಸಿಂ ಮೆರೋಸ್ಕಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಇನ್ನೊಂದು ವಿಶೇಷ.
ವಾರಾಂತ್ಯ 9.00 ಗಂಟೆಗೆ ಪ್ರಸಾರವಾಗುತ್ತಿರುವ ಈ ಕಾರ್ಯಕ್ರಮದ ನಿರೂಪಣೆಯನ್ನು ಝಲಕ್ ಸೀಸನ್-6 ವಿಜೇತೆ, ಮಧುಬಾಲಾ ಸೀರಿಯಲ್ ಖ್ಯಾತಿಯ ದ್ರಾಷ್ಠಿಧಾಮಿ ಮತ್ತು ನಟ ರಣ್‌ವೀರ್ ಶೌರಿ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.