ಬೈಟುಕಾಫಿ

ಯಾವುದೇ ವಯಸ್ಸಿನಲ್ಲೂ ಓಕೆ

ಇದು ಹೇಳಿ ಕೇಳಿ ಆಧುನಿಕ ಜಗತ್ತು. ಇದರೊಂದಿಗೆ ನಮ್ಮ ಮಕ್ಕಳು ಮುನ್ನಡೆಯಬೇಕೆಂದರೆ ಅವರಿಗೆ ತಂತ್ರಜ್ಞಾನದ...

Published On :

ಇದು ಹೇಳಿ ಕೇಳಿ ಆಧುನಿಕ ಜಗತ್ತು. ಇದರೊಂದಿಗೆ ನಮ್ಮ ಮಕ್ಕಳು ಮುನ್ನಡೆಯಬೇಕೆಂದರೆ ಅವರಿಗೆ ತಂತ್ರಜ್ಞಾನದ ಅರಿವು ಇರಲೇಬೇಕು. ಮಕ್ಕಳಿಗೆ ಮೊಬೈಲ್ ಇಂಟರ್‌ನೆಟ್, ಫೇಸ್‌ಬುಕ್ ಬಗ್ಗೆ ಅರಿವು ಅಗತ್ಯ. ವಿಜ್ಞಾನವನ್ನು ಒಳ್ಳೆಯದಕ್ಕೆ ಉಪಯೋಗಿಸಿಕೊಂಡರೆ ಅದು ಪ್ರಗತಿಗೆ ನಾಂದಿಯಾಗುತ್ತದೆ. ಆದರೆ ಮಕ್ಕಳು ಮೊಬೈಲಿನ ಅತಿಯಾದ ಬಳಕೆಯಿಂದ ಓದುವದನ್ನೇ ಮರೆಯುತ್ತಿದ್ದಾರೆ. ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದು ಅಪಾಯಕಾರಿ ಬೆಳವಣಿಗೆ. ಆದ್ದರಿಂದ ಯಾವುದೇ ವಯಸ್ಸಿನಲ್ಲೂ ಮಕ್ಕಳಿಗೆ ಮೊಬೈಲ್ ಕೊಡಿಸಬಹುದು. ಆದರೆ ಮಕ್ಕಳ ಮೇಲೆ ಒಂದು ಕಣ್ಣಿಡುವುದೂ ಅತಿ ಮುಖ್ಯ.ಟಿ
= ಜಯಶ್ರೀ ಜೆ. ಅಬ್ಬಿಗೇರಿ, ಕಟಕೋಳ




ಮೊಬೈಲ್ ಹಾನಿಕಾರಕ
ಮಕ್ಕಳು ಇಲೆಕ್ಟ್ರಾನಿಕ್ ಮಾಧ್ಯಮಗಳಿಂದ ಪರಸ್ಪರ ಹತ್ತಿರವಾಗುತ್ತಿದ್ದಾರೆ, ಭಾವನಾತ್ಮಕವಾಗಿ ದೂರವಾಗುತ್ತಿದ್ದಾರೆ. ಸದ್ಬಳಕೆಗಿಂತ ದುರ್ಬಳಕೆ ಜಾಸ್ತಿ ಆಗುತ್ತಿದೆ. ಮಕ್ಕಳು ವಯೋವಾನಕ್ಕೆ ತಕ್ಕಂತೆ ವರ್ತಿಸುತ್ತಿಲ್ಲ. ಓದುವುದರ ಕಡೆಗಿನ ಗಮನ ಕಡಿಮೆಯಾಗಿ ಮನೆಯವರೊಂದಿಗಿನ ಪ್ರೀತಿ, ವಾತ್ಸಲ್ಯಗಳನ್ನು ಮರೆತಿದ್ದಾರೆ. ಮೊಬೈಲ್ ಬಳಕೆಯಿಂದ ತಲೆನೋವು, ಮೆದುಳಿಗೆ ಸಂಬಂಧಪಟ್ಟ ಅನೇಕ ಅಪಾಯಕಾರಿ ಕಾಯಿಲೆಗಳಿಗೆ ಎಡೆ ಮಾಡಿಕೊಡುತ್ತದೆ. ಮಕ್ಕಳ ಅರೋಗ್ಯ ಹಾಗೂ ಶೈಕ್ಷಣಿಕ ಪ್ರಗತಿ ದೃಷ್ಟಿಯಿಂದ ಮಕ್ಕಳಿಗೆ ಮೊಬೈಲ್ ಕೊಡಿಸದಿರುವುದೇ ಒಳ್ಳೆಯದು. ಅವರು ವೃತ್ತಿ ಜೀವನ ಆರಂಭಿಸಿದ ಮೇಲೆ ಅವಶ್ಯಕತೆಗೆ ಸಂಬಂಧಪಟ್ಟ ರೀತಿಯಲ್ಲಿ, ಪೂರಕ ಹಾಗೂ ಮಾರಕಗಳನ್ನು ಅರಿತು ಮೊಬೈಲ್ ಖರೀದಿಸುವುದು ಸೂಕ್ತ.ಟಿ
- ವಿದ್ಯಾ ಉಪೇಂದ್ರ ಜೋಶಿ, ಬೆಳಗಾವಿ



ಸಾದಾ ಸೆಟ್ಟನ್ನು ಮಾತ್ರ ಕೊಡಿಸಿ
ಅನುಕೂಲತೆಯ ಬೆನ್ನಿಗೇ ಅನಾನುಕೂಲತೆ ಎನ್ನುವದೂ ಬಂದಿರುತ್ತದೆ. ಅದಕ್ಕಾಗಿ ಮಕ್ಕಳಿಗೆ ಮೊಬೈಲ್ ಕೊಡಿಸುವದು ಸೂಕ್ತವಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಪಾಲಕರು ಅದರ ಆಗು ಹೋಗುಗಳ ಬಗ್ಗೆ ತಿಳಿಹೇಳಬೇಕು. ಅನಿವಾರ್ಯ ಪರಿಸ್ಥಿತಿಯಲ್ಲಿ ಕೊಡಿಸಿದರೂ ಸಾದಾ ಸೆಟ್ಟನ್ನು ಮಾತ್ರ ಕೊಡಿಸಬೇಕು. ಯಾವುದೇ ಕಾರಣಕ್ಕೂ ಪಾಸ್‌ವರ್ಡ್ ಹಾಕಲೇಬಾರದೆಂದು ತಾಕೀತು ಮಾಡಬೇಕು. ಪಾಲಕರೂ ಮಕ್ಕಳೆದುರು ಮೊಬೈಲ್ ಬಳಕೆ ಕಡಿಮೆ ಮಾಡಬೇಕು. ಮೊಬೈಲ್‌ನಿಂದ ಮಕ್ಕಳು ಹಾದಿ ತಪ್ಪುವುದಲ್ಲದೆ ಮನೆಯಲ್ಲಿ ಒಳ್ಳೆಯ ವಾತಾವರಣ ಸಿಗದೇ ಹೋಗುತ್ತದೆ. ಒಳ್ಳೆಯದು, ಕೆಟ್ಟದ್ದು ಎರಡರಲ್ಲೂ ಪಾಲಕರ ಜವಾಬ್ದಾರಿಯಿದೆ. ಮಕ್ಕಳನ್ನು ನಡೆಸಿಕೊಳ್ಳುವುದರ ಮೇಲೆ ಎಲ್ಲವೂ ನಿರ್ಧರಿತ.ಟಿ            
= ಸ್ಮಿತಾ ರಾಘವೇಂದ್ರ, ಕಲ್ಲೇಶ್ವರ




'ಜಗುಲಿ'ಯಲ್ಲಿ ಈ ಸಲದ ವಿಷಯ 'ಮಕ್ಕಳಿಗೆ ಯಾವ ವಯಸ್ಸಿನಿಂದ ಮೊಬೈಲ್ ಕೊಡಿಸುವುದು ಸೂಕ್ತ.' ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್‌ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: ಛಟಿಜ್ಞಛಛಿಣ2ಅ್ಜಟಛ್ಝಟ.್ಛ್ಟಟ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.