ಬರೆಯುವ ಅಭ್ಯಾಸವೇ ತಪ್ಪಿದೆ
ಪತ್ರ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಲಿಖಿತ ರೂಪ. ಇತ್ತೀಚಿನ ದಿನಗಳಲ್ಲಿ ಇದು ಕಡಿಮೆಯಾಗಿದೆ. ...
ಪತ್ರ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಲಿಖಿತ ರೂಪ. ಇತ್ತೀಚಿನ ದಿನಗಳಲ್ಲಿ ಇದು ಕಡಿಮೆಯಾಗಿದೆ. ಈಗ ಅಂತರ್ಜಾಲದ ಯುಗ. ಪ್ರಸ್ತುತ ಮೊಬೈಲ್ಗಳಿಂದ ಪತ್ರವು ತನ್ನ ಪ್ರಾಶಸ್ತ್ಯವನ್ನು ಕಳೆದುಕೊಳ್ಳುತ್ತಿದೆ ಎಂದರೆ ತಪ್ಪಿಲ್ಲ. ಪತ್ರದಿಂದ ಕೈ ಬರಹ ವೃದ್ಧಿಯಾಗುತ್ತಿತ್ತು. ಆದರೆ ಇತ್ತೀಚಿನ ಎಷ್ಟೋ ಜನರಿಗೆ ಕೈ ಬರಹದಲ್ಲಿ ಬರೆಯುವ ಅಭ್ಯಾಸವೇ ತಪ್ಪಿಹೋಗಿದೆ. ಕೇವಲ ಟೈಪಿಂಗ್ ಮೂಲಕವೇ ಪತ್ರ ವ್ಯವಹಾರ ಮಾಡುವ ಇಂದಿನ ಜನ ಕೈ ಬರಹಕ್ಕೆ ಮಾನ್ಯತೆ ಕೊಡುತ್ತಿಲ್ಲ ಎಂಬುದನ್ನು ಮನಗಾಣಬಹುದು.ಟಿ
- ಸಿ. ಅನಿಲ್ಕುಮಾರ್, ಚಳ್ಳಕೆರೆ
ಸೃಜನಶೀಲತೆ ಮರೆಯಾಗುತ್ತಿದೆ
ಇಂದಿನ ಆಧುನಿಕ ಮತ್ತು ವೇಗದ ಯುಗದಲ್ಲಿ ಪತ್ರ ಬರೆದು ಸಂದೇಶ ತಲುಪಿಸುವ ಪ್ರಕ್ರಿಯೆ ತೀರಾ ವಿರಳವಾಗಿದೆ. ಮೊದಲೆಲ್ಲ ಮೊಬೈಲ್, ಇಂಟರ್ನೆಟ್ ಇರಲಿಲ್ಲವಾದುದರಿಂದ ಪತ್ರಗಳು ವಿನಿಮಯದ ಮಾಧ್ಯಮವಾಗಿ ಕಾರ್ಯ ನಿರ್ವಹಿಸುತ್ತಿದ್ದವು. ಈಗ ನಾವು ಯಂತ್ರಗಳಂತಾಗಿರುವುದರಿಂದ ಪತ್ರವನ್ನು ಬರೆಯುವ ಸೃಜನಶೀಲತೆ, ಆಸಕ್ತಿಗಳು ಮರೆಯಾಗುತ್ತಿವೆ. ಎಷ್ಟೇ ಆಧುನಿಕತೆಗೆ ಹೊಂದಿದರೂ ಪತ್ರ ಬರೆಯುವ ಸಂಸ್ಕೃತಿ ಮತ್ತು ಅದರ ಅನುಭವವು ಅತ್ಯಂತ ವಿಭಿನ್ನ. ಅಕ್ಷರಗಳಿಗಿರುವ ಮಾಂತ್ರಿಕ ಶಕ್ತಿಯ ಮುಂದೆ ನಮ್ಮ ಈ ಎಸ್.ಎಂ.ಎಸ್ಗಳು ಕಳಾಹೀನ.ಟಿ
- ಕೃತಿರಾಜು ಹಿರೇಮಠ, ಹಗರಿಬೊಮ್ಮನಹಳ್ಳಿ
ನೈಜ ಸಂತೋಷ
ಎಲೆಕ್ಟ್ರಾನಿಕ್ಸ್ ಮಾಧ್ಯಮಗಳ ವ್ಯವಸ್ಥೆ ಈಗಿದ್ದರೂ, ನಾನು ಬರೆಯುವ ಹವ್ಯಾಸವನ್ನು ಉಳಿಸಿಕೊಂಡಿದ್ದೇನೆ. ಲೇಖನವನ್ನು ಟೈಪ್ ಮಾಡುವ ಮೊದಲು ಬರೆಯುತ್ತೇನೆ. ಲೇಖನಿ ಹಿಡಿದು ಬರೆಯಲು ಕುಳಿತರೆ ವಿಚಾರಗಳು ತಾನ್ನಿಂದ ತಾನೇ ಉದ್ಭವವಾಗುತ್ತವೆ. ಆದರೆ ಕಂಪ್ಯೂಟರ್ ಕೀ ಬೋರ್ಡ್ ಮುಂದೆ ಟೈಪ್ ಮಾಡಲು ಕುಳಿತರೆ ಇದು ಅಸಾಧ್ಯ. ಪತ್ರ ಬರವಣಿಗೆ ನೈಜ ಸಂತೋಷ ಕೊಡುವುದಲ್ಲದೆ ಮನದಾಳದ ಭಾವನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಬಹುದಾಗಿದೆ. ಪತ್ರ ವ್ಯಕ್ತಿಗತ ಸಂಬಂಧಗಳ ಕೊಂಡಿ. ಮುತ್ತಿನಂತಹ ಸೊಗಸಾದ ಬರವಣಿಗೆ ಮನಸ್ಸಿಗೆ ಸ್ಫೂರ್ತಿಯನ್ನು ನೀಡಿ ಪ್ರತಿಭೆಯನ್ನು ಹೆಚ್ಚಿಸುತ್ತದೆ.ಟಿ
- ವಿದ್ಯಾ ಉಪೇಂದ್ರ ಜೋಶಿ, ಬೆಳಗಾವಿ
ಫೋನ್ ಮತ್ತು ಈಮೇಲ್ಗಳ ಭರಾಟೆಯ ನಡುವೆ ಕೈಬರಹದ ಪತ್ರ ಸಂಸ್ಕೃತಿ ಕಳೆದು ಹೋಗುತ್ತಿದೆಯೆಂಬ ವಿಷಾದವಿದೆ. ಈ ಸಲದ ವಿಷಯ 'ನೀವು ಈಗಲೂ ಕೈಬರಹದಲ್ಲಿ ಪತ್ರ ಬರೆಯುತ್ತಿದ್ದೀರಾ?' ಬರವಣಿಗೆ 100 ಪದಗಳ ಮಿತಿ. ಜತೆಗೆ ಪಾಸ್ಪೋರ್ಟ್ ಅಳತೆಯ ಭಾವಚಿತ್ರ. ಕೈ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು-1, ಇ-ಮೇಲ್: anekaby2@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

